ಶನಿವಾರ, ಅಕ್ಟೋಬರ್ 19, 2019
28 °C

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌: ಭಾರತಕ್ಕೆ 203 ರನ್‌ಗಳ ಭರ್ಜರಿ ಗೆಲುವು

Published:
Updated:
ಭಾರತ ತಂಡದ ಆಟಗಾರರ ಸಂಭ್ರಮ

ವಿಶಾಖಪಟ್ಟಣ: ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಫ್ರೀಡಂ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ 203 ರನ್‌ಗಳ ಜಯ ದಾಖಲಿಸಿದೆ.  

ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1–0 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 

ಐದನೇ ದಿನವಾದ ಇಂದು ಹರಿಣಗಳನ್ನು ಕಾಡಿದ ಭಾರತೀಯ ಬೌಲರ್‌ಗಳು ಅಂತಿಮವಾಗಿ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡರು. 395 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಆಫ್ರಿಕನ್ನರು 191ರನ್‌ಗಳಿಗೆ ಆಲೌಟ್‌ ಆಯಿತು. 

ಭಾರತದ ಪರ ಉತ್ತಮ ಬೌಲಿಂಗ್‌ ದಾಳಿ ಮಾಡಿದ ಮೊಹಮ್ಮದ್‌ ಶಮಿ ಹಾಗೂ ರವೀಂದ್ರ ಜಡೇಜಾ ತಲಾ 5 ಮತ್ತು 4 ವಿಕೆಟ್‌ ಪಡೆದುಕೊಂಡರು. ಆಫ್ರಿಕಾದ ಪರ ಎಸ್‌. ಮುತ್ತುಸ್ವಾಮಿ ಮತ್ತು ಡೇನ್ ಪಿಡ್ತ್‌ ಅವರ ಶತಕದ ಜೊತೆಯಾಟದಿಂದ ಆಫ್ರಿಕಾ 191 ರನ್‌ಗಳಿಸಲು ಸಾಧ್ಯವಾಯಿತು. ಇವರಿಬ್ಬರು ಭಾರತೀಯ ಬೌಲರ್‌ಗಳನ್ನು ಬಹಳ ಹೊತ್ತು ಕಾಡಿದರು. 

ಸಂಕ್ಪಿಪ್ತ ಸ್ಕೋರ್‌

ಭಾರತ: ಮೊದಲ ಇನ್ನಿಂಗ್ಸ್‌: 502-7 , ಎರಡನೇ ಇನ್ನಿಂಗ್ಸ್‌: 323-4

ದಕ್ಷಿಣ ಆಫ್ರಿಕಾ: ಮೊದಲ ಇನ್ನಿಂಗ್ಸ್‌: 431-10 , ಎರಡನೇ ಇನ್ನಿಂಗ್ಸ್‌: 191-10 

ಫಲಿತಾಂಶ: ಭಾರತಕ್ಕೆ ಜಯ

Post Comments (+)