ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೆಂಟ್ ಆಲ್‌ರೌಂಡ್‌ ಆಟದ ಅಬ್ಬರ

ಟೆಸ್ಟ್ ಕ್ರಿಕೆಟ್: ಮಯಂಕ್‌ ಅಗರವಾಲ್ ಅರ್ಧಶತಕ; ಇಶಾಂತ್‌ ಶರ್ಮಾ ಪಂಚಗುಚ್ಛ ಸಾಧನೆ
Last Updated 23 ಫೆಬ್ರುವರಿ 2020, 19:54 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್ : ಇಶಾಂತ್ ಶರ್ಮಾ ಪಂಚಗುಚ್ಛದ ಸಾಧನೆ ಮತ್ತು ಕನ್ನಡಿಗ ಮಯಂಕ್ ಅಗರವಾಲ್ ಅವರ ಆಕರ್ಷಕ ಅರ್ಧಶತಕ ಹೊಡೆದರೂ ಭಾರತ ತಂಡಕ್ಕೆ ಆತಂಕ ತಪ್ಪಲಿಲ್ಲ.

ಬೇಸಿನ್ ರಿಸರ್ವ್ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನ ಆತಿಥೇಯ ನ್ಯೂಜಿಲೆಂಡ್ ತಂಡವು ತನ್ನ ಹಿಡಿತ ವನ್ನು ಮತ್ತಷ್ಟು ಬಿಗಿಗೊಳಿಸಿದೆ.

ಬಾಲಂಗೋಚಿ ಬ್ಯಾಟ್ಸ್‌ಮನ್‌
ಗಳಾದ ಕೈಲ್ ಜೆಮಿಸನ್ (44; 45ಎಸೆತ, 1ಬೌಂಡರಿ, 4 ಸಿಕ್ಸರ್) ಮತ್ತು ಟ್ರೆಂಟ್ ಬೌಲ್ಟ್‌ (38; 24ಎ, 5ಬೌಂ, 1ಸಿ) ಅವರ ಅಬ್ಬರದ ಆಟದ ಬಲದಿಂದ ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 100.2 ಓವರ್‌ಗಳಲ್ಲಿ 348 ರನ್‌ ಗಳಿಸಿತು. ಇದರಿಂದಾಗಿ ಕಿವೀಸ್ ತಂಡವು 204 ರನ್‌ಗಳ ಮುನ್ನಡೆ ಸಾಧಿಸಿತು.

ಭಾರತವು ಮೊದಲ ಇನಿಂಗ್ಸ್‌ನಲ್ಲಿ 165 ರನ್‌ ಕಲೆಹಾಕಿತ್ತು. ಎರಡನೇ ದಿನದಾಟದಲ್ಲಿ ಕಿವೀಸ್ ತಂಡವು 5ಕ್ಕೆ216 ರನ್ ಗಳಿಸಿತ್ತು. ಈ ಮೊತ್ತಕ್ಕೆ ಭಾನುವಾರ 132 ರನ್‌ಗಳು ಸೇರ್ಪಡೆ ಯಾಗಲು ಕೈಲ್ ಮತ್ತು ಟ್ರೆಂಟ್ ಆಟ ಪ್ರಮುಖ ಕಾರಣವಾಯಿತು.

ಬೌಲಿಂಗ್‌ನಲ್ಲಿಯೂ ಮಿಂಚಿದ ಅನುಭವಿ ಟ್ರೆಂಟ್, ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ ತಂಡಕ್ಕೆ ಭಾರಿ ಪೆಟ್ಟು ಕೊಟ್ಟರು. ಮಯಂಕ್ (58; 99ಎ, 7ಬೌಂ, 1ಸಿ) ಅವರ ದಿಟ್ಟ ಹೋರಾಟದಿಂದ ತಂಡವು ಚೇತರಿಸಿಕೊಂಡಿತು.

ದಿನದಾಟದ ಕೊನೆಯಲ್ಲಿ ಅಜಿಂಕ್ಯ ರಹಾನೆ (ಬ್ಯಾಟಿಂಗ್ 25) ಮತ್ತು ಹನುಮವಿಹಾರಿ (ಬ್ಯಾಟಿಂಗ್ 15) ತಾಳ್ಮೆಯ ಆಟದಿಂದ ವಿಕೆಟ್ ಪತನಕ್ಕೆ ತಡೆಯೊಡ್ಡಿದ್ದಾರೆ.

ತಂಡವು 65 ಓವರ್‌ಗಳಲ್ಲಿ 4ಕ್ಕೆ144 ರನ್‌ ಗಳಿಸಿದೆ. ಕಿವೀಸ್ ಬಾಕಿ ಚುಕ್ತಾ ಮಾಡಲು ಭಾರತವು ಇನ್ನೂ 39 ರನ್ ಗಳಿಸಬೇಕು ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿಯಿವೆ.

ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ (14 ರನ್), ಚೇತೇಶ್ವರ್ ಪೂಜಾರ (11 ರನ್) ಮತ್ತು ನಾಯಕ ವಿರಾಟ್ ಕೊಹ್ಲಿ (19 ರನ್) ಎರಡನೇ ಇನಿಂಗ್ಸ್‌ನಲ್ಲಿಯೂ ವಿಫಲರಾದರು. ಈ ಮೂವರನ್ನೂ ಪೆವಿಲಿಯನ್‌ಗೆ ಕಳಿಸುವಲ್ಲಿ ಟ್ರೆಂಟ್ ಸಫಲರಾದರು. ಇದರಿಂದಾಗಿ ಆತಿ ಥೇಯರ ಪಾಳೆಯದಲ್ಲಿ ಗೆಲುವಿನ ಕನಸು ಗರಿಗೆದರಿದೆ. ಭಾರತವನ್ನು ಸೋಲಿನಿಂದ ಪಾರು ಮಾಡುವ ಹೊಣೆ ಈಗ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಬಿದ್ದಿದೆ.

ಮಯಂಕ್ ಅರ್ಧಶತಕ: ರೋಹಿತ್ ಶರ್ಮಾ ಗಾಯಗೊಂಡಿದ್ದರಿಂದ ತಂಡದಲ್ಲಿ ಸ್ಥಾನ ಪಡೆದಿರುವ ಪೃಥ್ವಿ ಶಾ ಈ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆದರೆ, ಕನ್ನಡಿಗ ಮಯಂಕ್ ಅಗರವಾಲ್ ಮಾತ್ರ ತಮ್ಮ ದಿಟ್ಟ ಹೋರಾಟದ ಮೂಲಕ ಮತ್ತೊಮ್ಮೆ ಗಮನ ಸೆಳೆದರು. ವೇಗಿಗಳ ಎಸೆತಗಳಿಗೆ ಬ್ಯಾಟ್ಸ್‌ಮನ್‌ಗಳು ತಡಬಡಾಯಿಸುತ್ತಿದ್ದರೆ, ಮಯಂಕ್ ಮಾತ್ರ ಅಪಾರ ಏಕಾಗ್ರತೆ ಮತ್ತು ಸಂಯಮದಿಂದ ಆಡಿದರು. ಆದರೆ, ಅವರಿಗೆ ಇನ್ನೊಂದು ಬದಿಯಿಂದ ಸೂಕ್ತ ಬೆಂಬಲ ದೊರೆಯಲಿಲ್ಲ.

ಚಹಾ ವೇಳೆಗೆ ಅವರು ಅರ್ಧಶತಕದ ಗಡಿ ಮುಟ್ಟಿದರು. ಅದಕ್ಕಾಗಿ ಅವರು 75 ಎಸೆತಗಳನ್ನು ಆಡಿದರು. ವಿರಾಮದ ನಂತರದ ಎಂಟನೇ ಓವರ್‌ನಲ್ಲಿ ಟಿಮ್ ಸೌಥಿ ಎಸೆತವನ್ನು ಫ್ಲಿಕ್ ಮಾಡುವ ಯತ್ನದಲ್ಲಿ ವಿಕೆಟ್‌ಕೀಪರ್ ಬಿಜೆ ವಾಟ್ಲಿಂಗ್‌ಗೆ ಕ್ಯಾಚಿತ್ತರು. ಅವರ ನಂತರ ವಿರಾಟ್ ಕೊಹ್ಲಿ ಕೂಡ ವಾಟ್ಲಿಂಗ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಸ್ಕೋರ್ಮೊದಲ ಇನಿಂಗ್ಸ್

ಭಾರತ 165 (68.1 ಓವರ್‌ಗಳಲ್ಲಿ)

ನ್ಯೂಜಿಲೆಂಡ್ 348 (100.2 ಓವರ್‌ಗಳಲ್ಲಿ)

ಬಿಜೆ ವಾಟ್ಲಿಂಗ್ ಸಿ ರಿಷಭ್ ಪಂತ್ ಬಿ ಜಸ್‌ಪ್ರೀತ್ ಬೂಮ್ರಾ 14

ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಸಿ ರಿಷಭ್ ಪಂತ್ ಬಿ ಅಶ್ವಿನ್ 43

ಟಿಮ್ ಸೌಥಿ ಸಿ ಮೊಹಮ್ಮದ್ ಶಮಿ ಬಿ ಇಶಾಂತ್ ಶರ್ಮಾ 06

ಕೈಲ್ ಜೆಮಿಸನ್ ಸಿ ಹನುಮವಿಹಾರಿ ಬಿ ಅಶ್ವಿನ್ 44

ಎಜಾಜ್ ಪಟೆಲ್ ಔಟಾಗದೆ 04

ಟ್ರೆಂಟ್ ಬೌಲ್ಟ್ ಸಿ ರಿಷಭ್ ಪಂತ್ ಬಿ ಇಶಾಂತ್ ಶರ್ಮಾ 38

ಇತರೆ: 8 (ಬೈ 1, ಲೆಗ್‌ಬೈ 2, ವೈಡ್ 6)

ವಿಕೆಟ್ ಪತನ: 6–216 (ವಾಟ್ಲಿಂಗ್;71.2), 7–225 (ಸೌಥಿ;74.3), 8–296 (ಕೈಲ್;90.2), 9–310 (ಗ್ರ್ಯಾಂಡ್‌ಹೋಮ್;94.2) 10–348 (ಟ್ರೆಂಟ್;100.2)

ಬೌಲಿಂಗ್

ಜಸ್‌ಪ್ರೀತ್ ಬೂಮ್ರಾ 26–5–88–1, ಇಶಾಂತ್ ಶರ್ಮಾ 22.2–6–68–5, ಮೊಹಮ್ಮದ್ ಶಮಿ 23–2–91–1, ಆರ್. ಅಶ್ವಿನ್ 29–1–99–3

ಎರಡನೇ ಇನಿಂಗ್ಸ್

4ಕ್ಕೆ144 (65 ಓವರ್‌ಗಳಲ್ಲಿ)

ಪೃಥ್ವಿ ಶಾ ಸಿ ಟಾಮ್ ಲಥಾಮ್ ಬಿ ಟ್ರೆಂಟ್ ಬೌಲ್ಟ್ 14

ಮಯಂಕ್ ಅಗರವಾಲ್ ಸಿ ವಾಟ್ಲಿಂಗ್ ಬಿ ಟಿಮ್ ಸೌಥಿ 58

ಚೇತೇಶ್ವರ್ ಪೂಜಾರ ಬಿ ಟ್ರೆಂಟ್ ಬೌಲ್ಟ್ 11

ವಿರಾಟ್ ಕೊಹ್ಲಿ ಸಿ ವಾಟ್ಲಿಂಗ್ ಬಿ ಟ್ರೆಂಟ್ ಬೌಲ್ಟ್ 19

ಅಜಿಂಕ್ಯ ರಹಾನೆ ಬ್ಯಾಟಿಂಗ್ 25

ಹನುಮವಿಹಾರಿ ಬ್ಯಾಟಿಂಗ್ 15

ಇತರೆ: 2 (ವೈಡ್ 2)

ವಿಕೆಟ್ ಪತನ: 1–27 (ಪೃಥ್ವಿ;7.4), 2–78 (ಪೂಜಾರ;31.6), 3–96 (ಮಯಂಕ್; 38.4), 4–113 (ವಿರಾಟ್; 45.2)

ಬೌಲಿಂಗ್

ಟಿಮ್ ಸೌಥಿ 15–5–41–1, ಟ್ರೆಂಟ್ ಬೌಲ್ಟ್‌ 16–6–27–3, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 14–5–25–0, ಕೈಲ್ ಜೆಮಿಸನ್ 17–7–33–0, ಎಜಾಜ್ ಪಟೇಲ್ 3–0–18–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT