ಪಂಜಾಬ್ ಕಿಂಗ್ಸ್ ತಂಡದ ನಾಯಕ, ಸ್ಪೋಟಕ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ಫೇವರಿಟ್ ತಿನಿಸು ತುಳುನಾಡಿನ ಪ್ರಸಿದ್ಧ ‘ನೀರ್ ದೋಸೆ’ ಅಂತೆ. ಹೌದು, ಸ್ವತಃ ಶ್ರೇಯಸ್ ಅಯ್ಯರ್ ಈ ವಿಷಯ ಬಹಿರಂಗಪಡಿಸಿದ್ದಾರೆ.

ಜಿಯೋ ಹಾಟ್ ಸ್ಟಾರ್ ಹಾಗೂ ಸ್ಟಾರ್ ಸ್ಪೋರ್ಟ್ಸ್ ನಡೆಸಿದ ಚುಟುಕು ಸಂದರ್ಶನದಲ್ಲಿ ಶ್ರೇಯಸ್, ತಮ್ಮ ವೈಯಕ್ತಿಕ ಜೀವನ ಹಾಗೂ ಐಪಿಎಲ್ಗೆ ಸಂಬಂಧಿಸಿದ ಹಲವು ಆಸಕ್ತಿಕರ ಸಂಗತಿ ಹಂಚಿಕೊಂಡಿದ್ದಾರೆ.

ತುಳುನಾಡಿನ ಜತೆ ನಂಟು:

ಶ್ರೇಯಸ್ ಅಯ್ಯರ್ ಅವರ ತಾಯಿ ರೋಹಿಣಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯವರು. ತಂದೆ ತಮಿಳುನಾಡಿನ ಮೂಲದವರು. ಉದ್ಯೋಗ ನಿಮಿತ್ತ ಅವರ ಕುಟುಂಬ ಮುಂಬೈನಲ್ಲಿ ನೆಲೆಸಿದೆ.

ಮುಂದಿನ ಜೀವನಪೂರ್ತಿ ಸೇವಿಸಲು ಯಾವ ಇಷ್ಟದ ತಿನಿಸು ಆಯ್ಕೆ ಮಾಡುತ್ತೀರಿ ಎಂದು ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ, 'ನೀರ್ ದೋಸೆ' ಎಂದು ಉತ್ತರಿಸಿದ್ದಾರೆ. ತಮ್ಮ ತಾಯಿಯ ಕೈರುಚಿಯ ನೀರ್ ದೋಸೆ, ಶ್ರೇಯಸ್ ಅವರ ಇಷ್ಟದ ತಿನಿಸಾಗಿದ್ದು, ತುಳುನಾಡಿನ ಅಭಿಮಾನಿಗಳಿಗೆ ಖುಷಿ ಮೂಡಿಸಿದೆ.

ಪಾಟಿದಾರ್ ಆಟಕ್ಕೆ ಅಯ್ಯರ್ ಫಿದಾ

ಐಪಿಎಲ್ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿರುವ ಶ್ರೇಯಸ್ ಅಯ್ಯರ್, ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರ ಆಟ ಹಾಗೂ ನಾಯಕತ್ವದ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.