ಆರ್‌ಸಿಬಿ ಕೋಚಿಂಗ್‌ ನಾಯಕತ್ವ ತಂಡದಲ್ಲಿ ನೆಹ್ರಾ

7

ಆರ್‌ಸಿಬಿ ಕೋಚಿಂಗ್‌ ನಾಯಕತ್ವ ತಂಡದಲ್ಲಿ ನೆಹ್ರಾ

Published:
Updated:
Deccan Herald

ಬೆಂಗಳೂರು: ಹಿರಿಯ ಕ್ರಿಕೆಟಿಗ ಆಶಿಶ್ ನೆಹ್ರಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಕೋಚಿಂಗ್ ನಾಯಕತ್ವ ತಂಡದಲ್ಲಿ ಸೇರಿಸಲಾಗಿದೆ. ಕಳೆದ ಬಾರಿಯ ಐಪಿಎಲ್‌ನಲ್ಲಿ ತಂಡದ ಬೌಲಿಂಗ್ ಕೋಚ್‌ ಆಗಿ ಅವರನ್ನು ನೇಮಕ ಮಾಡಲಾಗಿತ್ತು.

‘ಆರ್‌ಸಿಬಿಯ ಕೋಚಿಂಗ್ ತಂಡದಲ್ಲಿ ಸ್ಥಾನ ಗಳಿಸಿರುವುದು ಖುಷಿ ನೀಡಿದೆ. ತಂಡದ ಬಗ್ಗೆ ನನಗೆ ತುಂಬ ಅಭಿಮಾನ ಇದೆ. ಮುಂದಿನ ಬಾರಿ ಆರ್‌ಸಿಬಿಯ ಸಾಮರ್ಥ್ಯವನ್ನು ಹೆಚ್ಚಿಸಲು ಕೋಚಿಂಗ್‌ ತಂಡ ಶ್ರಮಿಸಲಿದೆ’ ಎಂದು ನೆಹ್ರಾ ಹೇಳಿದರು.

ಈ ವಿಷಯವನ್ನು ದೃಢಪಡಿಸಿರುವ ಆರ್‌ಸಿಬಿ ಫ್ರಾಂಚೈಸ್‌ ಮುಖ್ಯಸ್ಥ ಸಂಜಯ್ ಚುರಿವಾಲ ‘ತಂಡವು ಮುಂದಿನ ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಲು ನಾಯಕ ವಿರಾಟ್ ಕೊಹ್ಲಿ ಅವರಿಗೆ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್‌ ಮತ್ತು ಆಶಿಶ್ ನೆಹ್ರಾ ನೆರವಾಗಲಿದ್ದಾರೆ’ ಎಂದು ಹೇಳಿದರು.

ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಆಡಿರುವ ಎಡಗೈ ವೇಗಿ ಆಶಿಶ್ ನೆಹ್ರಾ ಅವರು ಭಾರತದ ಎರಡು ವಿಶ್ವಕಪ್ ಟೂರ್ನಿಗಳು, ಎರಡು ಏಷ್ಯಾಕಪ್ ಟೂರ್ನಿಗಳು ಮತ್ತು ಮೂರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌, ಮುಂಬೈ ಇಂಡಿಯನ್ಸ್‌, ಪುಣೆ ವಾರಿಯರ್ಸ್‌, ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ಪರವಾಗಿಯೂ ಆಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !