ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ. 25ರಂದು ಐಪಿಎಲ್‌ಗೆ ಇನ್ನೆರಡು ಹೊಸ ತಂಡಗಳ ಘೋಷಣೆ

Last Updated 29 ಸೆಪ್ಟೆಂಬರ್ 2021, 10:32 IST
ಅಕ್ಷರ ಗಾತ್ರ

ದುಬೈ: ಅಕ್ಟೋಬರ್ 25ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಇನ್ನೆರಡು ಹೊಸ ತಂಡಗಳ ಘೋಷಣೆಯಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಎರಡು ಹೊಸ ತಂಡಗಳ ಘೋಷಣೆಯ ಬಳಿಕ 2023ರಿಂದ 2027ರ ಅವಧಿಯ ವರೆಗಿನ ಐಪಿಎಲ್ ಮಾಧ್ಯಮ ಹಕ್ಕುಗಳ ಟೆಂಡರ್‌ ಕರೆಯಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಸೋನಿ ಹಾಗೂ ಝೀ ಇತ್ತೀಚೆಗೆ ವಿಲೀನವಾಗಿದ್ದು, ಈಗಲೇ ಹಕ್ಕುದಾರರಾಗಿರುವ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಬಿಡ್ ಸಲ್ಲಿಸುವ ಸಾಧ್ಯತೆಯಿದೆ.

ಐಪಿಎಲ್‌ಗೆ ಎರಡು ತಂಡಗಳ ಸೇರ್ಪಡೆಯೊಂದಿಗೆ ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಲಿದೆ. ಆದರೆ ಹೊಸ ಎರಡು ತಂಡಗಳು ಯಾವುವು ಎಂಬುದು ಅತೀವ ಕುತೂಹಲ ಕೆರಳಿಸಿದೆ.

ಗುಜರಾತ್‌ನ ಅಹಮದಾಬಾದ್ ಕೇಂದ್ರಿತವಾಗಿ ಒಂದು ತಂಡ ಘೋಷಣೆಯಾಗುವ ಸಾಧ್ಯತೆಯಿದೆ. ಉತ್ತರ ಪ್ರದೇಶದ ಲಖನೌ ಸೇರಿದಂತೆ ನಾಗ್ಪುರ, ರಾಯ್‌ಪುರ, ಪುಣೆ, ವಿಶಾಖಪಟ್ಟಣ ಹಾಗೂ ರಾಂಚಿ ನಗರಗಳು ರೇಸ್‌ನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT