ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಕ್ರಿಕೆಟಿಗರಿಗೆ ಹೊಸ ಪೋಷಾಕು

Last Updated 2 ಮಾರ್ಚ್ 2019, 4:24 IST
ಅಕ್ಷರ ಗಾತ್ರ

ಹೈದರಾಬಾದ್: ಭಾರತ ಕ್ರಿಕೆಟ್ ಮೇ ತಿಂಗಳಿನಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಧರಿಸಲಿರುವ ಹೊಸ ಪೋಷಾಕನ್ನು ಶುಕ್ರವಾರ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಮಹೇಂದ್ರಸಿಂಗ್ ಧೋನಿ, ಪೃಥ್ವಿ ಶಾ, ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ಅವರು ಹೊಸ ಪೋಷಾಕಿನಲ್ಲಿ ಮಿಂಚಿದರು. ನೈಕಿ ಅಪಾರೆಲ್ಸ್‌ ಈ ಪೋಷಾಕುಗಳನ್ನು ಸಿದ್ಧಗೊಳಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಧೋನಿ, ‘ಭಾರತ ಕ್ರಿಕೆಟ್‌ ತಂಡದ ಭವ್ಯ ಪರಂಪರೆಯನ್ನು ಈ ಪೋಷಾಕು ಸದಾ ನೆನಪಿಸುತ್ತದೆ. ಎಲ್ಲ ಮಾದರಿಗಳಲ್ಲಿ ಅಗ್ರಸ್ಥಾನಕ್ಕೇರಿದ್ದು, ಎರಡು ವಿಶ್ವಕಪ್ ಗೆದ್ದಿದ್ದು ಸದಾ ಸ್ಫೂರ್ತಿದಾಯಕ. ಹಳೆಯ ಮಧುರ ನೆನಪುಗಳಲ್ಲಿ ವಿಹರಿಸುವುದು ಸಂತಸದ ವಿಷಯ. 1983ರಲ್ಲಿ ಭಾರತವು ವಿಶ್ವಕಪ್ ಗೆದ್ದಿತ್ತು. ಆಗ ಚಿಕ್ಕ ವಯಸ್ಸಿನವರಾಗಿದ್ದ ನಾವು ತಂಡವು ಸಂಭ್ರಮಿಸಿದ್ದ ರೀತಿಯನ್ನು ನೋಡಿದ್ದೆವು. 2007ರಲ್ಲಿ ಟ್ವೆಂಟಿ–20 ವಿಶ್ವಕಪ್ ಗೆದ್ದೆವು. ಅದೇ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮ ಹೊಣೆ’ ಎಂದರು.

ಕಪಿಲ್‌ದೇವ್ ನಾಯಕತ್ವದ ಭಾರತ ತಂಡವು 1983ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು.

ಅಂದು ತಂಡದ ಆಟಗಾರರು ಲಾರ್ಡ್ಸ್‌ನಲ್ಲಿ ಬಿಳಿಬಣ್ಣದ ಪೋಷಾಕಿನಲ್ಲಿ ಆಡಿದ್ದರು. 2007ರಲ್ಲಿ ವಿಶ್ವ ಟ್ವೆಂಟಿ–20 ಮತ್ತು 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಮಹೇಂದ್ರಸಿಂಗ್ ಧೋನಿ ಬಳಗವು ನೀಲಿ ಬಣ್ಣದ ಪೋಷಾಕು ಧರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT