ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಬಳಿಕ ಮುಖಾಮುಖಿ: ಭಾರತ ವಿರುದ್ಧದ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ

Last Updated 16 ಜನವರಿ 2020, 13:17 IST
ಅಕ್ಷರ ಗಾತ್ರ

ನವದೆಹಲಿ: ಇದೇ ತಿಂಗಳು 24ರಿಂದ ತವರಿನಲ್ಲಿ ಭಾರತ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಆತಿಥೇಯ ನ್ಯೂಜಿಲೆಂಡ್‌ ತಂಡ ಪ್ರಕಟಿಸಿದೆ.ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಭಾರತ ಐದು ಟಿ20, 3 ಏಕದಿನ ಮತ್ತು 2 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಹೀಗಾಗಿ ಈ ಪ್ರವಾಸವು ಕುತೂಹಲ ಕೆರಳಿಸಿದೆ. ಟಿ20 ಸರಣಿಗೆ ಭಾರತ ಭಾನುವಾರ (ಜನವರಿ 12ರಂದು) ತಂಡ ಪ್ರಕಟಿಸಿತ್ತು.

ಎರಡನೇ ಟಿ20 ಪಂದ್ಯ ಜನವರಿ 26ರಂದು ಆಕ್ಲೆಂಡ್‌ನಲ್ಲಿ,ಮೂರನೇ ಪಂದ್ಯ ಜನವರಿ 29ರಂದು ಹ್ಯಾಮಿಲ್ಟನ್‌ನಲ್ಲಿ, 4ನೇ ಪಂದ್ಯ ಜನವರಿ 31ರಂದು ವೆಲ್ಲಿಂಗ್ಟನ್‌ನಲ್ಲಿ ಹಾಗೂ ಕೊನೆಯ ಪಂದ್ಯ ಫೆಬ್ರುವರಿ 02ರಂದು ಮೌಂಟ್ ಮೌಂಗನುಯಿಯಲ್ಲಿ ನಡೆಯಲಿದೆ.

ಟಿ20 ಸರಣಿಗೆ ತಂಡಗಳು ಹೀಗಿವೆ
ನ್ಯೂಜಿಲೆಂಡ್‌: ಕೇನ್‌ ವಿಲಿಯಮ್ಸನ್‌ (ನಾಯಕ),
ಹ್ಯಾಮಿಷ್ ಬೆನ್ನೆಟ್‌, ಟಾಮ್‌ ಬ್ರುಸಿ, ಕಾಲಿನ್‌ ಡಿ ಗ್ರಾಂಡ್‌ಹೊಮ್‌, ಮಾರ್ಟಿನ್ ಗಪ್ಟಿಲ್, ಕುಗ್ಗೆಲೆಜಿನ್‌, ಡರೈಲ್‌ ಮಿಚೆಲ್‌, ಕಾಲಿನ್‌ ಮುನ್ರೋ, ರಾಸ್‌ ಟೇಲರ್‌, ಬ್ಲೇರ್‌ ಟಿಕ್ನೆರ್, ಮಿಚೇಲ್‌ ಸ್ಯಾಂಟ್ನರ್‌, ಟಿಮ್‌ ಸೇಯ್ಫರ್ಟ್‌ (ವಿಕೆಟ್‌ ಕೀಪರ್‌), ಈಶ್‌ ಸೋಧಿ, ಟಿಮ್‌ ಸೌಥಿ

ಭಾರತ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಶಿವಂ ದುಬೆ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ವಾಷಿಂಗ್ಟನ್‌ ಸುಂದರ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ, ನವದೀಪ್‌ ಸೈನಿ, ರವೀಂದ್ರ ಜಡೇಜ ಮತ್ತು ಶಾರ್ದೂಲ್‌ ಠಾಕೂರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT