ಆಕ್ಲೆಂಡ್: ಬೌಲರ್ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ತಂಡವು ಶುಕ್ರವಾರ ಮೂರನೇ ಟಿ20 ಪಂದ್ಯದಲ್ಲಿ 8 ವಿಕೆಟ್ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸುಲಭವಾಗಿ ಮಣಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2–1 ಮುನ್ನಡೆ ಸಾಧಿಸಿತು.

ವೇಗಿ ಲಾಕಿ ಫರ್ಗ್ಯುಸನ್ ನಾಲ್ಕು ಓವರ್ಗಳಲ್ಲಿ ಕೇವಲ 9 ರನ್ ಬಿಟ್ಟುಕೊಟ್ಟು ಅತ್ಯಂತ ಪರಿಣಾಮಕಾರಿ ದಾಳಿ ಸಂಘಟಿಸಿದರು. ಕೈಲ್ ಜೆಮಿಸನ್, ಮಿಚೆಲ್ ಸ್ಯಾಂಟನರ್ ಮತ್ತು ಬೆನ್ ಸಿಯರ್ಸ್ ತಲಾ ಎರಡು ವಿಕೆಟ್ ಕಬಳಿಸಿದರು. ಇದರಿಂದಾಗಿ ಬ್ಯಾಟಿಂಗ್ ಸ್ನೇಹಿ ಈಡನ್ ಪಾರ್ಕ್ನಲ್ಲಿ ದಕ್ಷಿಣ ಆಫ್ರಿಕಾ ತಂಡವು ನಿಗದಿತ ಓವರ್ಗಳಲ್ಲಿ 9 ವಿಕೆಟ್ಗಳಿಗೆ 136 ರನ್ ಗಳಿಸಲಷ್ಟೇ ಶಕ್ತವಾಯಿತು.

ಹತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ನ್ಕೊಬಾನಿ ಮೊಕೊಯೆನಾ (ಔಟಾಗದೇ 26) ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ಟೋನಿ ಡಿ ಝೋರ್ಜಿ (15), ವಿಯಾನ್ ಮುಲ್ಡರ್ , ಕಾನರ್ ಎಸ್ಟರ್ಹುಯಿಜೆನ್ (15), ಜೇಸನ್ ಸ್ಮಿತ್ (10) ವೈಫಲ್ಯ ಅನುಭವಿಸಿದರು.

ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಟಾಮ್ ಲೇಥಮ್ (ಔಟಾಗದೇ 63;55ಎ, 4x7, 6x2) ಅವರ ಬ್ಯಾಟಿಂಗ್ ಬಲದಿಂದ ಇನ್ನೂ 22 ಎಸೆತ ಬಾಕಿ ಇರುವಂತೆ 2 ವಿಕೆಟ್ಗೆ 137 ರನ್ ಗಳಿಸಿ ಸಂಭ್ರಮಿಸಿತು. ಡೆವೊನ್ ಕಾನ್ವೆ (39;26ಎ) ಮತ್ತು ಲೇಥಮ್ ಅವರು ಮೊದಲ ವಿಕೆಟ್ಗೆ 96 ರನ್ ಪೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಸರಣಿಯ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದರೆ, ನಂತರದ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಜಯಸಾಧಿಸಿದೆ. ಭಾನುವಾರ ವೆಲ್ಲಿಂಗ್ಟನ್ನಲ್ಲಿ ನಾಲ್ಕನೇ ಪಂದ್ಯ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: 20 ಓವರ್ಗಳಲ್ಲಿ 9 ವಿಕೆಟ್ಗೆ 136 (ನ್ಕೊಬಾನಿ ಮೊಕೊಯೆನಾ ಔಟಾಗದೇ 26; ಕೈಲ್ ಜೆಮಿಸನ್ 42ಕ್ಕೆ 2, ಲಾಕಿ ಫರ್ಗ್ಯುಸನ್ 9ಕ್ಕೆ 1, ಮಿಚೆಲ್ ಸ್ಯಾಂಟ್ನರ್ 21ಕ್ಕೆ 2, ಬೆನ್ ಸಿಯರ್ಸ್ 27ಕ್ಕೆ 2).

ನ್ಯೂಜಿಲೆಂಡ್: 16.2 ಓವರ್ಗಳಲ್ಲಿ 2 ವಿಕೆಟ್ಗೆ 137 (ಡೆವೊನ್ ಕಾನ್ವೆ 39, ಟಾಮ್ ಲೇಥಮ್ ಔಟಾಗದೇ 63).

ಫಲಿತಾಂಶ: ನ್ಯೂಜಿಲೆಂಡ್ಗೆ 8 ವಿಕೆಟ್ಗಳ ಗೆಲುವು, ಸರಣಿಯಲ್ಲಿ 2–1 ಮುನ್ನಡೆ. ಪಂದ್ಯದ ಆಟಗಾರ: ಲಾಕಿ ಫರ್ಗ್ಯುಸನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.