ಟಿ20 ವಿಶ್ವಕಪ್ ಫೈನಲ್ಗೆ ಮೊದಲು ಎಬಿ ಡಿವಿಲಿಯರ್ಸ್ ಅವರ ಯುಟ್ಯೂಬ್ ಶೋ ಒಂದರಲ್ಲಿ, ದಕ್ಷಿಣ ಆಫ್ರಿಕಾ ತಂಡದಲ್ಲಿ ಅವರ ಜೊತೆಗಾರನಾಗಿದ್ದ ಡೇಲ್ ಸ್ಟೀನ್ ಅವರು ನ್ಯೂಜಿಲೆಂಡ್ ತಂಡಕ್ಕೆ ಪ್ರಶಸ್ತಿ ಗೆಲ್ಲುವಂತೆ ಒತ್ತಾಯಿಸುತ್ತಾರೆ. ಕಿವೀಸ್ ಮತ್ತೊಮ್ಮೆ ಫೈನಲ್ ಪಂದ್ಯ ಸೋತರೆ, ಹರಿಣಗಳ ಪಡೆ ದೀರ್ಘ ಕಾಲದಿಂದ ಹೊಂದಿರುವ ‘ಚೋಕರ್ಸ್’ ಪಟ್ಟವನ್ನು ಆ ತಂಡಕ್ಕೆ ಅಧಿಕೃತವಾಗಿ ಹಸ್ತಾಂತರಿಸುವುದಾಗಿ ತಮಾಷೆಯಾಗಿ ಹೇಳುತ್ತಾರೆ.

ಫೈನಲ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಎಡವಿ ಬೀಳುತ್ತಿರುವುದು ದಕ್ಷಿಣ ಆಫ್ರಿಕಾದ ವೇಗದ ಬೌಲರ್ಗೆ ಬೇಸರ ಮೂಡಿಸಿದೆಯೇ ಎಂದು ಹೇಳುವುದು ಕಷ್ಟ. ಆದರೆ ಕಿವೀಸ್ ತಂಡ ಐಸಿಸಿ ಟೂರ್ನಿಗಳ ಫೈನಲ್ನಲ್ಲಿ ಪದೇಪದೇ ಮುಗ್ಗರಿಸುತ್ತಿದೆ.

2015ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವು ಆಸ್ಟ್ರೇಲಿಯಾ ಎದುರು ಸೋತಿತ್ತು. ಅಲ್ಲಿಂದ ಹಿಡಿದು 2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತಕ್ಕೆ ಶರಣಾದ ತನಕದ ಅವಧಿಯಲ್ಲಿ ನ್ಯೂಜಿಲೆಂಡ್ ಆರು ಸಲ ಐಸಿಸಿ ಟೂರ್ನಿಗಳ ಫೈನಲ್ ಆಡಿದೆ. ವಿಶ್ವದ ಯಾವುದೇ ತಂಡ ಇಷ್ಟೊಂದು ಸಲ ಫೈನಲ್ ತಲುಪಿಲ್ಲ.

ಭಾರತ ನಾಲ್ಕು ಫೈನಲ್ಗಳೊಡನೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ತಲಾ ಮೂರು ಬಾರಿ ಫೈನಲ್ ತಲುಪಿವೆ. ಆದರೆ ಮುಂದೇನಾಯಿತು ಎಂಬುದರಲ್ಲೇ ಆ ಇತರ ತಂಡಗಳು, ಆ ತಂಡಕ್ಕಿಂತ ಭಿನ್ನವಾಗಿ ಕಾಣಿಸುತ್ತವೆ. ಭಾರತ ನಾಲ್ಕು ಫೈನಲ್ಗಳಲ್ಲಿ ಮೂರನ್ನು ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ಫೈನಲ್ ತಲುಪಿದ ಮೂರು ಬಾರಿ ಪ್ರಶಸ್ತಿ ಗೆದ್ದು ಪರಿಪೂರ್ಣ ದಾಖಲೆ ಬರೆದಿದೆ. ಇಂಗ್ಲೆಂಡ್ ಮೂರು ಫೈನಲ್ಗಳಲ್ಲಿ ಎರಡರಲ್ಲಿ ಜಯಗಳಿಸಿದೆ. ಆದರೆ ನ್ಯೂಜಿಲೆಂಡ್ ಆರು ಫೈನಲ್ ಪಂದ್ಯಗಳಲ್ಲಿ ಗೆದ್ದಿರುವುದು ಒಂದನ್ನಷ್ಟೇ. ಅದು 2023ರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ (ಭಾರತ ವಿರುದ್ಧ).

ಈ ದೇಶದ ಜನಸಂಖ್ಯೆ ಸುಮಾರು 56 ಲಕ್ಷ. ಬೆಂಗಳೂರಿನ ಜನಸಂಖ್ಯೆಗಿಂತ ಬಹಳ ಕಡಿಮೆ. ಕ್ರಿಕೆಟ್ ಅಲ್ಲಿ ನಂಬರ್ ಒನ್ ಕ್ರೀಡೆಯೂ ಅಲ್ಲ. ಆದರೂ ಐಸಿಸಿ ಟೂರ್ನಿಗಳಲ್ಲಿ ಅಷ್ಟೊಂದು ಫೈನಲ್ ತಲುಪಿರುವುದು ಮೆಚ್ಚುವಂತಹ ಸಾಧನೆಯೇ ಸರಿ. ಅದೂ– ದೈತ್ಯ ತಂಡಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ನಂತಹ ತಂಡಗಳ ಎದುರು ಸೆಣಸಾಡಿ. ಈ ದೇಶಗಳಲ್ಲಿ ಹೇರಳ ಪ್ರತಿಭಾ ಸಂಪನ್ಮೂಲಗಳ ಜೊತೆ ಕ್ರಿಕೆಟರ್ಗಳಿಗೆ ಆರ್ಥಿಕ ಬಲವೂ ಸಿಗುತ್ತದೆ.

‘ಭಾರತದಲ್ಲಿರುವ ಪ್ರತಿಭಾನ್ವಿತ ಆಟಗಾರರ ಪ್ರಮಾಣ ಹೇರಳವಾಗಿದೆ. ವಿಶ್ವಕಪ್ನಲ್ಲಿ ಅವರು ಪ್ರಾಯಶಃ ಇನ್ನೆರಡು ತಂಡಗಳನ್ನು ಕಣಕ್ಕಿಳಿಸಬಹುದು. ಆದರೆ ಸಣ್ಣ ಜನಸಂಖ್ಯೆಯ ನಮ್ಮ ದೇಶ, ವಿಶ್ವದ ದೊಡ್ಡ ತಂಡಗಳ ಎದುರು ಆಡುವುದು ಅಮೋಘ ಸಾಧನೆಯೇ’ ಎಂದು ನ್ಯೂಜಿಲೆಂಡ್ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ ಹೇಳಿದ್ದರು.

ತಂಡದ ಶಕ್ತಿ:

ಕೌಶಲದ ವಿಷಯದಲ್ಲಿ ನ್ಯೂಜಿಲೆಂಡ್ ಬೇರಾವುದೇ ತಂಡಕ್ಕಿಂತ ಕಡಿಮೆಯೇನಿಲ್ಲ. ಇತರ ಕೆಲವು ತಂಡಗಳಲ್ಲಿರುವಂತೆ, ನ್ಯೂಜಿಲೆಂಡ್ ತಂಡದಲ್ಲಿ ತಾರಾ ವರ್ಚಸ್ಸು ಹೊಂದಿರುವ ಆಟಗಾರರಿಲ್ಲ. ಆದರೆ ತಂಡ ಸ್ಫೂರ್ತಿ ಮತ್ತು ತಂತ್ರಗಾರಿಕೆಯಲ್ಲಿರುವ ಸ್ಪಷ್ಟತೆ ಆ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪ್ರಬಲ ತಂಡಗಳಲ್ಲಿ ಒಂದನ್ನಾಗಿ ರೂಪಿಸಿದೆ. ಅವರ ಯೋಜನೆಗಳನ್ನು ಗಮನಿಸಿದರೆ, ಅದು ಪಂದ್ಯಕ್ಕೆ ಮೊದಲು ಸಿದ್ಧತೆಯಲ್ಲಿ ಎಷ್ಟೊಂದು ಎಚ್ಚರಿಕೆ ವಹಿಸುತ್ತದೆ ಎಂಬುದು ವೇದ್ಯವಾಗುತ್ತದೆ.

ತನ್ನ ಇತಿಮಿತಿಗಳ ಅರಿವು ಹೊಂದಿರುವುದು ಕಿವೀಸ್ ಪಡೆಯ ದೊಡ್ಡ ಶಕ್ತಿ. ಆ ತಂಡದಲ್ಲಿ ಜಸ್ಪ್ರೀತ್ ಬೂಮ್ರಾ ಅಂಥ ಟ್ರಂಪ್ಕಾರ್ಡ್ ಬೌಲರ್ ಇಲ್ಲ. ಎದುರಾಳಿಗಳಲ್ಲಿ ಭೀತಿ ಮೂಡಿಸುವ ಸ್ಪಿನ್ನರ್ ಇಲ್ಲ. ಭಾರತ ತಂಡದಲ್ಲಿರುವಂತೆ ‘ಪವರ್ ಪ್ಯಾಕ್ಡ್’ ಬ್ಯಾಟರ್ಗಳ ಪಡೆಯೂ ಇಲ್ಲ. ಆದರೆ ತನ್ನ ಬಳಿಯಿರುವ ಸಂಪನ್ಮೂಲವನ್ನು ಗರಿಷ್ಠ ಮಟ್ಟಿಗೆ ಹೇಗೆ ಬಳಕೆ ಮಾಡಬೇಕೆಂಬ ಸಾಮರ್ಥ್ಯವನ್ನು ಈ ತಂಡ ಹೊಂದಿದೆ.

ನಾಯಕ ಸ್ಯಾಂಟ್ನರ್ ತಮ್ಮ ಕೆಲಸವನ್ನು ದಕ್ಷತೆಯಿಂದ ನಿರ್ವಹಿಸುತ್ತಾರೆ. ಮ್ಯಾಟ್ ಹೆನ್ರಿ ಅಮೋಘ ಎನಿಸದಿದ್ದರೂ ಬೌಲಿಂಗ್ನಲ್ಲಿ ನಿಯಂತ್ರಣದೊಡನೆ ಬ್ಯಾಟರ್ಗಳನ್ನು ಕಟ್ಟಿಹಾಕುವವರು. ಫಿನ್ ಅಲೆನ್ ಮತ್ತು ಟಿಮ್ ಸೀಫರ್ಟ್ ಅವರು ಸ್ಫೋಟಕ ಆರಂಭ ಒದಗಿಸುವ ಸಾಮರ್ಥ್ಯವಿರುವವರು. ಡೇರಿಲ್ ಮಿಚೆಲ್ ಸದ್ದಿಲ್ಲದೇ ತಂಡವನ್ನು ಗೆಲುವಿನ ದಡದತ್ತ ತಲುಪಿಸಬಲ್ಲ ಆಟಗಾರ. ಇವರೆಲ್ಲರೂ ಒಟ್ಟಾಗಿ ಆಡಿದಲ್ಲಿ ತಂಡ ಪ್ರಬಲವಾಗಿ ಕಾಣಿಸುತ್ತದೆ. ಆದರೆ ತಂಡ ಉತ್ತಮ ಪ್ರದರ್ಶನವನ್ನು ಫೈನಲ್ ತಲುಪುವವರೆಗಿನ ಆಟದಲ್ಲಿ ಮಾತ್ರ ನೀಡುತ್ತಿರುವುದು ತಂಡಕ್ಕೆ ಹಿನ್ನಡೆ ತರುತ್ತಿದೆ.

ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ ನಂತರ ಅಥ್ಲೀಟುಗಳು ತಮ್ಮ ಗಮನವನ್ನು ‘ರೀಸೆಟ್’ ಮಾಡಬೇಕಾಗುತ್ತದೆ ಎನ್ನುತ್ತಾರೆ ಕ್ರೀಡಾ ಮನಶಾಸ್ತ್ರಜ್ಞರಾದ ಮೈಕೆಲ್ ಗೆರ್ವೇಸ್. ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಅಮೆರಿಕದ ತಂಡಗಳ ಜೊತೆ ಮೈಕೆಲ್ ಕಾರ್ಯನಿರ್ವಹಿಸಿದ್ದಾರೆ. ‘ಯಶಸ್ಸು ನಮ್ಮನ್ನು ಏಕಾಗ್ರತೆಯಿಂದ ವಿಚಲಿತಗೊಳಿಸಬಹುದು ಅಥವಾ ಉದಾಸೀನ ಮೂಡಿಸುವ ಸಾಧ್ಯತೆಯೂ ಇದೆ’ ಎನ್ನುತ್ತಾರೆ.

ಸರಣಿ ಫೈನಲ್ಗಳಲ್ಲಿ ಸೋತಿರುವ ನ್ಯೂಜಿಲೆಂಡ್ ತಂಡಕ್ಕೂ ಇಂಥ ‘ರೀಸೆಟ್’ ಅಗತ್ಯವಿದೆ. ಫೈನಲ್ ತಲುಪುವುದು ಸಾಧನೆಯೇ. ಆದರೆ ಅಲ್ಲಿಯವರೆಗೆ ಉಳಿಸಿಕೊಂಡ ಯಶಸ್ಸಿನ ಹಸಿವನ್ನು ಮುಂದುವರಿಸಿಕೊಂಡು ಹೋದರೆ ಮಾತ್ರ ತಂಡ ಅಗ್ರಸ್ಥಾನಕ್ಕೇರಬಹುದು.

ಸೀಮಿತ ಸಂಪನ್ಮೂಲದ ನ್ಯೂಜಿಲೆಂಡ್

ನ್ಯೂಜಿಲೆಂಡ್ನ ಜನಸಂಖ್ಯೆ ಸುಮಾರು 55 ಲಕ್ಷ. ಬೆಂಗಳೂರಿನ ಜನಸಂಖ್ಯೆಗಿಂತ ಬಹಳ ಕಡಿಮೆ. ಕ್ರಿಕೆಟ್ ಅಲ್ಲಿ ಅತಿ ಜನಪ್ರಿಯ ಕ್ರೀಡೆಯೂ ಅಲ್ಲ. ಆದರೂ 11 ವರ್ಷಗಳಿಂದೀಚೆಗೆ ಐಸಿಸಿ ಟೂರ್ನಿಗಳಲ್ಲಿ ಆರು ಸಲ ಫೈನಲ್ ತಲುಪಿರುವುದು ಮೆಚ್ಚುವಂತಹ ಸಾಧನೆಯೇ ಸರಿ. ಅದೂ– ದೈತ್ಯ ತಂಡಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ನಂತಹ ತಂಡಗಳ ಎದುರು ಸೆಣಸಾಡಿ. ಈ ದೇಶಗಳಲ್ಲಿ ಹೇರಳ ಪ್ರತಿಭಾ ಸಂಪನ್ಮೂಲಗಳ ಜೊತೆ ಕ್ರಿಕೆಟರ್ಗಳಿಗೆ ಆರ್ಥಿಕ ಬಲವೂ ಇದೆ.

‘ಭಾರತದಲ್ಲಿರುವ ಪ್ರತಿಭಾನ್ವಿತ ಆಟಗಾರರ ಪ್ರಮಾಣ ಹೇರಳವಾಗಿದೆ.

ವಿಶ್ವಕಪ್ನಲ್ಲಿ ಅವರು ಪ್ರಾಯಶಃ ಇನ್ನೆರಡು ತಂಡಗಳನ್ನು ಕಣಕ್ಕಿಳಿಸಬಹುದು. ಆದರೆ ಸಣ್ಣ ಜನಸಂಖ್ಯೆಯ ನಮ್ಮ ದೇಶ, ವಿಶ್ವದ ದೊಡ್ಡ ತಂಡಗಳ ಎದುರು ಆಡುವುದು ಅಮೋಘ ಸಾಧನೆಯೇ’ ಎಂದು ಕಿವೀಸ್ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.