ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ ಮಾಜಿ ಕ್ರಿಕೆಟಿಗ ಜಾನ್‌ ರೀಡ್‌ ಇನ್ನಿಲ್ಲ

Last Updated 14 ಅಕ್ಟೋಬರ್ 2020, 14:16 IST
ಅಕ್ಷರ ಗಾತ್ರ

ಆಕ್ಲೆಂಡ್‌: ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಮ್ಯಾಚ್‌ ರೆಫರಿಯಾಗಿ ಕಾರ್ಯನಿರ್ವಹಿಸಿದ್ದ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಜಾನ್‌ ರೀಡ್‌ (92) ಬುಧವಾರ ನಿಧನರಾದರು. ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ (ಎನ್‌ಝೆಡ್‌ಸಿ) ಈ ವಿಷಯ ತಿಳಿಸಿದೆ.

50–60ರ ದಶಕದಲ್ಲಿ ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ರೀಡ್‌, 34 ಟೆಸ್ಟ್‌ ಪಂದ್ಯಗಳಲ್ಲಿ ನ್ಯೂಜಿಲೆಂಡ್‌ ತಂಡದ ನಾಯಕತ್ವ ವಹಿಸಿದ್ದರು. ಟೆಸ್ಟ್‌ ಮಾದರಿಯಲ್ಲಿ ತಂಡದ ಮೊದಲ ಮೂರು ಪಂದ್ಯಗಳ ವಿಜಯದಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.

ರೀಡ್‌ ನಿಧನದ ನಿರ್ದಿಷ್ಟ ಕಾರಣವನ್ನು ಎನ್‌ಝೆಡ್‌ಸಿ ತಿಳಿಸಿಲ್ಲ.

1949ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರೀಡ್‌, 58 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 33.28ರ ಸರಾಸರಿಯಲ್ಲಿ 3428 ರನ್‌ ಕಲೆಹಾಕಿದ್ದರು. 85 ವಿಕೆಟ್‌ಗಳನ್ನು ಗಳಿಸಿದ್ದ ಅವರ ಬೌಲಿಂಗ್‌ ಸರಾಸರಿ 33.35.

246 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ಅವರು 16,128 ರನ್‌ ಗಳಿಸಿದ್ದರು. ಇದರಲ್ಲಿ 39 ಶತಕಗಳು ಸೇರಿವೆ. ಬ್ಯಾಟಿಂಗ್‌ ಸರಾಸರಿ 41.35. 22.60ರ ಸರಾಸರಿಯಲ್ಲಿ 466 ವಿಕೆಟ್‌ಗಳನ್ನು ಗಳಿಸಿದ್ದರು.

1965ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ನ್ಯೂಜಿಲೆಂಡ್‌ ತಂಡ ಆಯ್ಕೆ ಸಮಿತಿ ಮುಖ್ಯಸ್ಥ, ವ್ಯವಸ್ಥಾಪಕ ಹಾಗೂ ಐಸಿಸಿಯ ಮ್ಯಾಚ್ ರೆಫರಿಯಾಗಿ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT