ನೀಶಮ್‌ ದಾಳಿಗೆ ಅಫ್ಗಾನ್‌ ಬ್ಯಾಟ್ಸ್‌ಮನ್‌ಗಳು ದೂಳೀಪಟ; ಅಲ್ಪ ಮೊತ್ತಕ್ಕೆ ಕುಸಿತ

ಬುಧವಾರ, ಜೂನ್ 26, 2019
26 °C
ವಿಶ್ವಕಪ್‌ ಕ್ರಿಕೆಟ್

ನೀಶಮ್‌ ದಾಳಿಗೆ ಅಫ್ಗಾನ್‌ ಬ್ಯಾಟ್ಸ್‌ಮನ್‌ಗಳು ದೂಳೀಪಟ; ಅಲ್ಪ ಮೊತ್ತಕ್ಕೆ ಕುಸಿತ

Published:
Updated:

ಟಾಂಟನ್: ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ ಶನಿವಾರ ಅಫ್ಗಾನಿಸ್ತಾನದ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಉತ್ತಮ ಆರಂಭ ಕಂಡಿದ್ದ ಅಫ್ಗಾನ್‌ಗೆ ಜಿಮ್ಮಿ ನೀಶಮ್‌ ತಡೆಗೋಡೆಯಾದರು. 

ಸ್ಕೋರ್‌ ವಿವರ: https://bit.ly/2XAAmo2

ಅಫ್ಗಾನಿಸ್ತಾನ 41.1 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿದೆ. ತಂಡದ ಮೊತ್ತ 66 ರನ್‌ ಆಗುವವರೆಗೂ ಆರಂಭಿಕ ಜೋಡಿ ಹಜ್ರತ್ ಜಜಾಯ್(34) ಮತ್ತು ನೂರ್ ಅಲಿ ಜದ್ರಾನ್(31) ಉತ್ತಮ ಆಟ ಪ್ರದರ್ಶಿಸುತ್ತಿದ್ದರು. ಆದರೆ, ನೀಶಮ್‌ ದಾಳಿಗೆ ಉರುಳಿದ ವಿಕೆಟ್‌ಗಳು ಅಫ್ಗಾನ್‌ಗೆ ಆಘಾತ ತಂದಿತು. ತಂಡ 70 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ ಉರುಳಿತ್ತು. 

10 ಓವರ್‌ ಪೂರೈಸಿರುವ ಜಿಮ್ಮಿ ನೀಶಮ್‌ 31 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಮೂರು ಮೇಡನ್‌ ಓವರ್‌ಗಳೊಂದಿಗೆ ಲಾಕಿ ಫರ್ಗುಸನ್ 4 ವಿಕೆಟ್‌ ಗಳಿಸಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ  ಹಶ್ಮತ್ ಉಲ್ಲಾ ಶಾಹಿದಿ ತಾಳ್ಮೆಯುತ ಆಟ ಆಡಿದರು. ವಿಕೆಟ್‌ ಪತನದ ಬಿರುಗಾಳಿಯಲ್ಲಿ ದಿಟ್ಟ ಹೋರಾಟ ನಡೆಸಿ ಅರ್ಧ ಶತಕ(59) ಪೂರೈಸಿದರು. ಅಫ್ಗಾನ್‌ ಎದುರು ಗೆಲುವಿಗೆ ನ್ಯೂಜಿಲೆಂಡ್‌ 173 ರನ್‌ ಗಳಿಸಬೇಕಿದೆ. 20 ಓವರ್‌ ನಂತರ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು. 

ಸ್ಪಿನ್ನರ್‌ಗಳ ಬಲ ಹೊಂದಿರುವ ಗುಲ್ಬದಿನ್ ನಯೀಬ್ ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವರೇ ಕಾದು ನೋಡಬೇಕು.

ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಮಣಿಸಿ ಶುಭಾರಂಭ ಮಾಡಿದ್ದ ನ್ಯೂಜಿಲೆಂಡ್‌ಗೆ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ಕಠಿಣ ಸವಾಲು ಒಡ್ಡಿತ್ತು. ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ನ್ಯೂಜಿಲೆಂಡ್ ಎರಡು ವಿಕೆಟ್‌ಗಳಿಂದ ಗೆದ್ದಿತ್ತು. ಒಮ್ಮೆಯೂ ಪ್ರಶಸ್ತಿ ಗೆಲ್ಲಲಾಗದ ನ್ಯೂಜಿಲೆಂಡ್ ಕಳೆದ ಬಾರಿ ಫೈನಲ್‌ನಲ್ಲಿ ಮುಗ್ಗರಿಸಿತ್ತು. ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದೆನಿಸಿಕೊಂಡಿದೆ.

ಎರಡನೇ ವಿಶ್ವಕಪ್ ಟೂರ್ನಿ ಆಡುತ್ತಿರುವ ಅಫ್ಗಾನಿಸ್ತಾನದ ಸ್ಪಿನ್ ವಿಭಾಗದಲ್ಲಿ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅಪಾಯಕಾರಿಯಾಗಿದ್ದಾರೆ. ಮೊಹಮ್ಮದ್ ನಬಿ ಕೂಡ ರಶೀದ್‌ ಖಾನ್‌ಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !