ರೋಹಿತ್‌– ಧವನ್‌ ಉತ್ತಮ ಬ್ಯಾಟಿಂಗ್‌: ಕೀವಿಸ್‌ ಗೆಲುವಿಗೆ 325 ರನ್‌ ಗುರಿ 

7

ರೋಹಿತ್‌– ಧವನ್‌ ಉತ್ತಮ ಬ್ಯಾಟಿಂಗ್‌: ಕೀವಿಸ್‌ ಗೆಲುವಿಗೆ 325 ರನ್‌ ಗುರಿ 

Published:
Updated:

ಮೌಂಟ್‌ ಮೌಂಗಾನೆ, ನ್ಯೂಜಿಲೆಂಡ್‌: ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಬೃಹತ್‌ ಮೊತ್ತ ಪೇರಿಸಿದೆ. 

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ವಿರಾಟ್‌ ಪಡೆ 50 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 324 ರನ್‌ ಗಳಿಸಿದೆ. 

ಭಾರತದ ಪರ: ರೋಹಿತ್‌ ಶರ್ಮಾ 87, ಶಿಖರ್‌ ಧವನ್‌ 66, ವಿರಾಟ್‌ ಕೊಹ್ಲಿ 43, ಅಂಬಟಿ ರಾಯುಡು 47, ಎಂ.ಎಸ್‌.ಧೋನಿ ಅಜೇಯ 48, ಕೇದಾರ್‌ ಜಾಧವ್‌ ಅಜೇಯ 22 ರನ್‌ ಗಳಿಸಿದ್ದಾರೆ. 

ನ್ಯೂಜಿಲೆಂಡ್‌ ಪರ: ಟ್ರೆಂಡ್‌ ಬೊಲ್ಟ್‌ 2, ಲಾಕೀ ಫರ್ಗುಸನ್ 2 ವಿಕೆಟ್‌ ಪಡೆದಿದ್ದಾರೆ. 

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 1–0ರಲ್ಲಿ ಮುನ್ನಡೆ ಸಾಧಿಸಿದೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !