ನ್ಯೂಜಿಲೆಂಡ್‌ಗೆ ಗ್ಯಾರಿ ಸ್ಟೀಡ್‌ ಕೋಚ್‌

7

ನ್ಯೂಜಿಲೆಂಡ್‌ಗೆ ಗ್ಯಾರಿ ಸ್ಟೀಡ್‌ ಕೋಚ್‌

Published:
Updated:
Deccan Herald

ವೆಲ್ಲಿಂಗ್ಟನ್‌: ಹಿರಿಯ ಕ್ರಿಕೆಟಿಗ ಗ್ಯಾರಿ ಸ್ಟೀಡ್‌ ಅವರನ್ನು ನ್ಯೂಜಿಲೆಂಡ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಿಸಲಾಗಿದೆ.

ನ್ಯೂಜಿಲೆಂಡ್‌ ಕ್ರಿಕೆಟ್‌ ಬುಧವಾರ ಈ ವಿಷಯವನ್ನು ಬಹಿರಂಗಪಡಿಸಿದೆ.

ಈ ಮೊದಲು ಕೋಚ್‌ ಆಗಿದ್ದ ಮೈಕ್‌ ಹೆಸನ್‌ ಅವರು ಜೂನ್‌ನಲ್ಲಿ ರಾಜೀನಾಮೆ ನೀಡಿದ್ದರು.

46 ವರ್ಷ ವಯಸ್ಸಿನ ಸ್ಟೀಡ್‌ ಅವರು ನ್ಯೂಜಿಲೆಂಡ್‌ ಪರ ಐದು ಅಂತರರಾಷ್ಟ್ರೀಯ ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು.

ಅವರು ಕ್ಯಾಂಟರ್‌ಬರಿ ತಂಡದ ಕೋಚ್‌ ಆಗಿಯೂ ಕೆಲಸ ಮಾಡಿದ್ದರು. ಅವರ ಮಾರ್ಗದರ್ಶನದಲ್ಲಿ ಕ್ಯಾಂಟರ್‌ಬರಿ ತಂಡ ಫ್ಲಂಕೆಟ್‌ ಶೀಲ್ಡ್‌ನಲ್ಲಿ ಮೂರು ಬಾರಿ (2014, 2015  ಮತ್ತು 2017) ಚಾಂಪಿಯನ್‌ ಆಗಿತ್ತು.

‘ಕೇನ್‌ ವಿಲಿಯಮ್ಸನ್‌ ಅವರ ನಾಯಕತ್ವದಲ್ಲಿ ನ್ಯೂಜಿಲೆಂಡ್‌ ತಂಡ ಉತ್ತಮ ಸಾಮರ್ಥ್ಯ ತೋರುತ್ತಿದೆ. ಈ ತಂಡದ ಕೋಚ್‌ ಆಗಿ ನೇಮಕವಾಗಿರುವುದಕ್ಕೆ ಅತೀವ ಖುಷಿಯಾಗಿದೆ. ತಂಡವನ್ನು ಇನ್ನಷ್ಟು ಬಲಪಡಿಸಲು ಶ್ರಮಿಸುತ್ತೇನೆ’ ಎಂದು ಸ್ಟೀಡ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !