ರಾಸ್‌ ಟೇಲರ್‌ ದಾಖಲೆ: ಸರಣಿ ‘ಕ್ಲೀನ್‌ ಸ್ವೀಪ್‌’ ಮಾಡಿದ ನ್ಯೂಜಿಲೆಂಡ್‌

ಭಾನುವಾರ, ಮೇ 26, 2019
33 °C

ರಾಸ್‌ ಟೇಲರ್‌ ದಾಖಲೆ: ಸರಣಿ ‘ಕ್ಲೀನ್‌ ಸ್ವೀಪ್‌’ ಮಾಡಿದ ನ್ಯೂಜಿಲೆಂಡ್‌

Published:
Updated:
Prajavani

ಡ್ಯುನೆಡಿನ್‌: ಬಲಗೈ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌, ಬುಧವಾರ ಯುನಿವರ್ಸಿಟಿ ಓವಲ್‌ ಮೈದಾನದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು. ಅವರು ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ನ್ಯೂಜಿಲೆಂಡ್‌ನ ಆಟಗಾರ ಎಂಬ ದಾಖಲೆ ನಿರ್ಮಿಸಿದರು.

ಬಾಂಗ್ಲಾದೇಶ ಎದುರಿನ ಮೂರನೇ ಪಂದ್ಯದಲ್ಲಿ 69 ರನ್‌ ಸಿಡಿಸಿದ ಟೇಲರ್‌ ಒಟ್ಟು ರನ್‌ ಅನ್ನು 8,026ಕ್ಕೆ ಹೆಚ್ಚಿಸಿಕೊಂಡು ಸ್ಟೀಫನ್‌ ಫ್ಲೆಮಿಂಗ್‌ ಹೆಸರಿನಲ್ಲಿದ್ದ ದಾಖಲೆ ಮೀರಿ ನಿಂತರು. ಫ್ಲೆಮಿಂಗ್‌ 8,007ರನ್‌ ಬಾರಿಸಿದ್ದರು.

34 ವರ್ಷ ವಯಸ್ಸಿನ ಟೇಲರ್‌, ಏಕದಿನ ಮಾದರಿಯಲ್ಲಿ 47ನೇ ಅರ್ಧಶತಕ ಸಿಡಿಸಿದ ಶ್ರೇಯಕ್ಕೂ ಪಾತ್ರರಾದರು.

ಈ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 88ರನ್‌ಗಳಿಂದ ಮಣಿಸಿದ ನ್ಯೂಜಿಲೆಂಡ್‌ ತಂಡವು 3–0ರಿಂದ ಸರಣಿ ಗೆದ್ದು ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿತು.

ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ ನಾಡಿನ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 330ರನ್‌ ದಾಖಲಿಸಿತು. ಹೆನ್ರಿ ನಿಕೋಲ್ಸ್‌ (64; 74ಎ, 7ಬೌಂ), ಟೇಲರ್‌ ಮತ್ತು ನಾಯಕ ಟಾಮ್‌ ಲಾಥಮ್‌ (59; 51ಎ, 2ಬೌಂ, 3ಸಿ) ಅರ್ಧಶತಕ ಗಳಿಸಿ ಮಿಂಚಿದರು. 82 ಎಸೆತ ಎದುರಿಸಿದ ಟೇಲರ್‌ ಏಳು ಬೌಂಡರಿ ದಾಖಲಿಸಿದರು.

ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡ ಟಿಮ್‌ ಸೌಥಿ (65ಕ್ಕೆ6) ದಾಳಿಗೆ ತತ್ತರಿಸಿತು. ಶಬ್ಬೀರ್‌ ರಹಮಾನ್‌ (102; 110ಎ, 12ಬೌಂ, 2ಸಿ) ಏಕಾಂಗಿ ಹೋರಾಟ ನಡೆಸಿದರೂ ತಂಡಕ್ಕೆ ಯಶಸ್ಸು ಸಿಗಲಿಲ್ಲ. ಮಷ್ರಫೆ ಮೊರ್ತಜಾ ಪಡೆ 47.2 ಓವರ್‌ಗಳಲ್ಲಿ 242ರನ್‌ಗಳಿಗೆ ಆಲೌಟ್‌ ಆಯಿತು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 330 (ಮಾರ್ಟಿನ್‌ ಗಪ್ಟಿಲ್‌ 29, ಹೆನ್ರಿ ನಿಕೋಲ್ಸ್‌ 64, ರಾಸ್‌ ಟೇಲರ್‌ 69, ಟಾಮ್‌ ಲಾಥಮ್‌ 59, ಜೇಮ್ಸ್‌ ನೀಶಮ್‌ 37, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಔಟಾಗದೆ 37, ಮಿಷೆಲ್‌ ಸ್ಯಾಂಟನರ್‌ ಔಟಾಗದೆ 16; ಮಷ್ರಫೆ ಮೊರ್ತಜಾ 51ಕ್ಕೆ1, ಮುಸ್ತಾಫಿಜುರ್‌ ರಹಮಾನ್‌ 93ಕ್ಕೆ2, ರುಬೆಲ್ ಹೊಸೇನ್‌ 64ಕ್ಕೆ1, ಮೊಹಮ್ಮದ್‌ ಸೈಫುದ್ದೀನ್‌ 48ಕ್ಕೆ1, ಮೆಹದಿ ಹಸನ್‌ 43ಕ್ಕೆ1).

ಬಾಂಗ್ಲಾದೇಶ: 47.2 ಓವರ್‌ಗಳಲ್ಲಿ 242 (ಮುಷ್ಫಿಕುರ್‌ ರಹೀಮ್‌ 17, ಮೊಹಮ್ಮದುಲ್ಲಾ 16, ಶಬ್ಬೀರ್‌ ರಹಮಾನ್‌ 102, ಮೊಹಮ್ಮದ್‌ ಸೈಫುದ್ದೀನ್‌ 44, ಮೆಹದಿ ಹಸನ್‌ 37; ಟಿಮ್‌ ಸೌಥಿ 65ಕ್ಕೆ6, ಟ್ರೆಂಟ್‌ ಬೌಲ್ಟ್‌ 37ಕ್ಕೆ2, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 18ಕ್ಕೆ1).

ಫಲಿತಾಂಶ: ನ್ಯೂಜಿಲೆಂಡ್‌ ತಂಡಕ್ಕೆ 88ರನ್‌ ಗೆಲುವು. 3–0ರಲ್ಲಿ ಸರಣಿ ಕೈವಶ.

ಪಂದ್ಯ ಶ್ರೇಷ್ಠ: ಟಿಮ್‌ ಸೌಥಿ.

ಸರಣಿ ಶ್ರೇಷ್ಠ: ಮಾರ್ಟಿನ್‌ ಗಪ್ಟಿಲ್‌.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !