ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇವಲ 150 ಕೋಟಿ ಜನರ ನಿರೀಕ್ಷೆ...’

Last Updated 13 ಜೂನ್ 2019, 20:00 IST
ಅಕ್ಷರ ಗಾತ್ರ

ನಾಟಿಂಗಂ: ನಮ್ಮ ತಂಡದ ಮೇಲೆ ಅಂತಹ ದೊಡ್ಡ ಒತ್ತಡವೇನೂ ಇಲ್ಲ. ‘ಕೇವಲ’ 150 ಕೋಟಿ ಜನರು ಭಾರತವು ವಿಶ್ವಕಪ್ ಗೆಲ್ಲಬೇಕೆಂದು ನಿರೀಕ್ಷಿ ಸುತ್ತಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಲಘು ಧಾಟಿಯಲ್ಲಿ ಹೇಳಿದ್ದಾರೆ.

25 ವರ್ಷದ ಹಾರ್ದಿಕ್ ಅವರು ಐಸಿಸಿಯು ಹಾಕಿರುವ ವಿಡಿಯೊದಲ್ಲಿ ಮಾತನಾಡಿದ್ದಾರೆ.

‘ಜುಲೈ 14ರಂದು ನನ್ನ ಕೈಯಲ್ಲಿ ವಿಶ್ವಕಪ್ ಇರಬೇಕು. ಅದೊಂದೇ ಗುರಿ. ಆ ಕ್ಷಣವನ್ನು ಊಹಿಸಿಕೊಂಡಾಗಲೆಲ್ಲ ನನ್ನ ಮೈನವಿರೇಳುತ್ತದೆ. ವಿಶ್ವಕಪ್ ಗೆಲ್ಲುವ ಸರಳ ಯೋಜನೆ ನಮ್ಮದು’ ಎಂದು ಹೇಳಿದ್ದಾರೆ.

‘ಭಾರತವೆಂದರೆ ನನಗೆ ಸರ್ವಸ್ವ. ಕ್ರಿಕೆಟ್ಟೇ ಜೀವನ. ಅಪಾರ ಪ್ರೀತಿ ಮತ್ತು ಅಪ್ಯಾಯತೆಯಿಂದ ಕ್ರಿಕೆಟ್ ಆಡುತ್ತೇನೆ. ಸವಾಲು ಗಳನ್ನು ಎದುರಿಸುವುದೆಂದರೆ ನನಗಿಷ್ಟ. ಮೂರುವರೆ ವರ್ಷಗಳಿಂದ ಈ ಟೂರ್ನಿಗಾಗಿ ಸಿದ್ಧತೆ ಮಾಡಿಕೊಂಡಿದ್ದೆ. ಇದೀಗ ಗೆದ್ದು ಸಂಭ್ರಮಿಸುವ ಕಾಲ ಸಮೀಪಿಸಿದೆ’ ಎಂದರು.

‘ನಾನು ಸಂತೃಪ್ತ. ಜೀವನ ದಲ್ಲಿ ಬರುವುದೆಲ್ಲವನ್ನೂ ಸಂತಸ ದಿಂದಲೇ ಸ್ವೀಕರಿಸಿದ್ದೇನೆ. ನಾನು ಮತ್ತು ಸಹೋದರ ಕೃಣಾಲ್ ಯಾವಾಗಲೂ ಸಂತಸದಿಂದ ಇರುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT