ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡವು 1974ರಲ್ಲಿ ಪ್ರಥಮ ರಣಜಿ ಟ್ರೋಫಿ ಜಯಿಸಿದ ಮತ್ತು ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್ಗಳಿಗೆ ದಿಗ್ಗಜ ಕ್ರಿಕೆಟಿಗರ ನಾಮಕರಣ ಮಾಡುತ್ತಿದೆ.

ಆದರೆ ಈ ಸಾಲಿನಲ್ಲಿ ಮಹಿಳಾ ಕ್ರಿಕೆಟ್ ದಂತಕಥೆ ಶಾಂತಾ ರಂಗಸ್ವಾಮಿ ಅವರ ಹೆಸರಿಲ್ಲ. ಅದರಿಂದಾಗಿ ಮಹಿಳಾ ಕ್ರಿಕೆಟ್ ವಲಯದಿಂದ ಬೇಸರ ವ್ಯಕ್ತವಾಗಿದೆ.

ಎರ್ರಪಳ್ಳಿ ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಸೈಯದ್ ಕಿರ್ಮಾನಿ, ಬ್ರಿಜೇಶ್ ಪಟೇಲ್, ರೋಜರ್ ಬಿನ್ನಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಅವರ ಹೆಸರುಗಳನ್ನು ಸ್ಟ್ಯಾಂಡ್ಗಳಿಗೆ ಇಡಲು ಕೆಎಸ್ಸಿಎ ನಿರ್ಧರಿಸಿದೆ ಎಂದು ‘ಪ್ರಜಾವಾಣಿ’ ವರದಿ (2024 ನವೆಂಬರ್ 23) ಪ್ರಕಟಿಸಿತ್ತು. ಮುಂದಿನ ತಿಂಗಳು ನಡೆಯಲಿರುವ ಸಂಸ್ಥೆಯ ವಾರ್ಷಿಕ ಮಹಾಸಭೆಯ ನಡಾವಳಿ ಪುಸ್ತಕದಲ್ಲಿ (ಇದರ ಪ್ರತಿ ಪತ್ರಿಕೆಗೆ ಲಭ್ಯವಾಗಿದೆ) ನಿರ್ಧಾರವನ್ನು ಸ್ಪಷ್ಟಗೊಳಿಸಲಾಗಿದೆ. ಆಟಗಾರರ ನಾಮಕರಣ ಮಾಡಲಿರುವ ಸ್ಟ್ಯಾಂಡ್ಗಳನ್ನೂ ಉಲ್ಲೇಖಿಸಲಾಗಿದೆ.

ಆದರೆ ರಾಜ್ಯ ಮತ್ತು ಭಾರತದ ಮಹಿಳಾ ಕ್ರಿಕೆಟ್ ಬೆಳವಣಿಗೆ ಮಹತ್ತರ ಪಾತ್ರ ವಹಿಸಿದ ಶಾಂತಾ ಅವರ ಹೆಸರಿನಲ್ಲಿಯೂ ಒಂದು ಸ್ಟ್ಯಾಂಡ್ ಇರಬೇಕು ಎಂದು ಈಚೆಗೆ ಮಾಜಿ ಮಹಿಳಾ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಒತ್ತಾಯಿಸಿದ್ದರು.

‘ಶಾಂತಾ ರಂಗಸ್ವಾಮಿ ಅವರು ದೇಶದ ಕ್ರಿಕೆಟ್ ರಂಗಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಇವತ್ತು ಮಹಿಳಾ ಕ್ರಿಕೆಟ್ ಈ ಮಟ್ಟಕ್ಕೆ ಬೆಳೆಯುವಲ್ಲಿ ಅವರು ಆಟಗಾರ್ತಿಯಾಗಿ, ಆಡಳಿತದ ಭಾಗವಾಗಿ ನೀಡಿರುವ ಕೊಡುಗೆ ಮುಖ್ಯ ಕಾರಣ. ಕ್ರಿಕೆಟ್ ಸಾಧಕರಿಗೆ ಗೌರವ ಸಲ್ಲಿಸುತ್ತಿರುವುದು ಸ್ವಾಗತಾರ್ಹ ನಡೆ. ಅದರ ಬಗ್ಗೆ ನಮಗೂ ಸಂತಸವಿದೆ. ಆದರೆ ಅರ್ಹ ಆಟಗಾರ್ತಿಯರಿಗೆ ಗೌರವ ನೀಡದಿರುವುದು ಏಕೆ’ ಎಂದು ಬಿಸಿಸಿಐ ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿ ಸದಸ್ಯೆ ಕಲ್ಪನಾ ವೆಂಕಟಾಚಾರ್ ‘ಪ್ರಜಾವಾಣಿ’ಯ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.

ಶಾಂತಾ ಅವರು 1976 ರಿಂದ 1991ರವರೆಗೆ ಭಾರತ ತಂಡದಲ್ಲಿ ಆಡಿದ್ದರು. 16 ಟೆಸ್ಟ್ಗಳಲ್ಲಿ 750 ರನ್ ಗಳಿಸಿದ್ದರು. ಅದರಲ್ಲಿ ಒಂದು ಶತಕ ಮತ್ತು 6 ಅರ್ಧಶತಕಗಳು ಇವೆ. 19 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿ 267 ರನ್ ಗಳಿಸಿದ್ದಾರೆ. ಟೆಸ್ಟ್ ನಲ್ಲಿ 21 ಮತ್ತು ಏಕದಿನ ಮಾದರಿಯಲ್ಲಿ 12 ವಿಕೆಟ್ಗಳನ್ನೂ ಗಳಿಸಿದ್ದರು. ಶಾಂತಾ ಅವರಿಗೆ ಅರ್ಜುನ ಪ್ರಶಸ್ತಿ, ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿಗಳು ಸಂದಿವೆ.

‘ಮಹಿಳೆಯರ ತಂಡವು ಈಚೆಗೆ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ಬಂದಿತ್ತು. ಅವರ ಅಭಿನಂದನೆಗಾಗಿ ನಡೆದ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರು ಕೂಡ ಮಹಿಳೆಯರ ಕ್ರಿಕೆಟ್ಗೆ ಶಾಂತಾ ಅವರು ನೀಡಿದ್ದ ಕಾಣಿಕೆ ಸ್ಮರಿಸಿದ್ದರು. ಶಾಂತಾ, ಡಯಾನಾ ಎಡುಲ್ಜಿ, ಅಂಜುಂ ಚೋಪ್ರಾ, ಮಿಥಾಲಿ ರಾಜ್ ಸೇರಿದಂತೆ ಹಲವು ಹಾಕಿದ ಅಡಿಪಾಯದ ಮೇಲೆ ಇವತ್ತು ವಿಶ್ವಕಪ್ ಸಾಧನೆಯಾಗಿದೆ ಎಂದು ಶ್ಲಾಘಿಸಿದ್ದರು. ಅಂತಹ ಮಹತ್ವದ ಆಟಗಾರ್ತಿಯನ್ನು ತವರು ರಾಜ್ಯ ಪರಿಗಣಿಸಬೇಕು ಎಂದೂ ಕಲ್ಪನಾ ಅಭಿಪ್ರಾಯಪಟ್ಟಿದ್ದಾರೆ.

ಶಾಂತಾ ಅವರಿಗೆ ಸ್ಟ್ಯಾಂಡ್ ನಾಮಕರಣದ ಗೌರವ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲು ಮಹಿಳಾ ಕ್ರಿಕೆಟ್ ನಿಯೋಗವೊಂದು ಸಿದ್ಧವಾಗಿದೆ ಎಂಬ ಮಾಹಿತಿ ಇದೆ.

ಸ್ಟ್ಯಾಂಡ್ಗಳಿಗ ಹೆಸರುಗಳು

ಪಿ1; ಎರ್ರಪಳ್ಳಿ ಪ್ರಸನ್ನ

ಪಿ2; ಜಿ.ಆರ್. ವಿಶ್ವನಾಥ್ ಪಿ

ಟೆರೆಸ್; ಬಿ.ಎಸ್. ಚಂದ್ರಶೇಖರ್ ಪಿ

ಕಾರ್ಪೊರೇಟ್; ಸೈಯದ್ ಕಿರ್ಮಾನಿ

ಎಂ1; ಬ್ರಿಜೇಶ್ ಪಟೇಲ್

ಎಂ2; ರೋಜರ್ ಬಿನ್ನಿ

ಡೈಮಂಡ್ ಬಾಕ್ಸ್; ಅನಿಲ್ ಕುಂಬ್ಳೆ

ಎನ್ ಸ್ಟ್ಯಾಂಡ್; ರಾಹುಲ್ ದ್ರಾವಿಡ್

ಪಿ1ಎ; ಜಾವಗಲ್ ಶ್ರೀನಾಥ್

ಪಿ4; ವೆಂಕಟೇಶ್ ಪ್ರಸಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.