ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವಕರಿಗೆ ಅವಕಾಶ ನೀಡಬೇಕಿರುವುದರಿಂದ ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ: ದ್ರಾವಿಡ್

Published 30 ಜುಲೈ 2023, 8:20 IST
Last Updated 30 ಜುಲೈ 2023, 8:20 IST
ಅಕ್ಷರ ಗಾತ್ರ

ಬ್ರಿಡ್ಜ್‌ಟೌನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದ್ದನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸಮರ್ಥಿಸಿಕೊಂಡಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ಅನುಪಸ್ಥಿತಿಯಲ್ಲಿ ಶನಿವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 40.5 ಓವರ್‌ಗಳಲ್ಲಿ 181 ರನ್‌ಗೆ ಆಲೌಟ್ ಆಗುವ ಮೂಲಕ 6 ವಿಕೆಟ್‌ಗಳಿಂದ ಸೋತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೇವಲ ಒಂದು ಪಂದ್ಯದ ಬಗ್ಗೆ ನಾವು ಚಿಂತಿಸುವುದಲ್ಲ, ದೊಡ್ಡ ಸರಣಿಗಳಿಗೆ ತಯಾರಿ ನಡೆಸಬೇಕಿದೆ. ವಿಶ್ವಕಪ್ ಮತ್ತು ಏಷ್ಯಾ ಕಪ್ ಸರಣಿಗಳು ನಮ್ಮ ಮುಂದಿವೆ. ನಮ್ಮಲ್ಲಿ ಗಾಯಾಳುಗಳ ಸಂಖ್ಯೆಯೂ ಹೆಚ್ಚಾಗಿರುವುದರಿಂದ ಅವುಗಳ ಬಗ್ಗೆಯೂ ನಾವು ಚಿಂತಿಸಬೇಕಿದೆ ಎಂದಿದ್ದಾರೆ.

'ಬೇರೆ ಆಟಗಾರರಿಗೂ ಅವಕಾಶಗಳನ್ನು ನೀಡಲು, ವಿರಾಟ್ ಮತ್ತು ರೋಹಿತ್ ಹೊರಗುಳಿದಿದ್ದಾರೆ. ನಾವು ಆ ರಿಸ್ಕ್‌ಗಳನ್ನು ತೆಗೆದುಕೊಳ್ಳಬೇಕು ದೊಡ್ಡ ಸರಣಿಗಳ ದೃಷ್ಟಿಯಿಂದ ನಾವು ಇದನ್ನು ಮಾಡಬೇಕು. ನಾವು ಯುವ ಆಟಗಾರರಿಗೆ ಸಾಧ್ಯವಾದಷ್ಟು ಅವಕಾಶಗಳನ್ನು ನೀಡಲು ಬಯಸುತ್ತೇವೆ’ ಎಂದಿದ್ದಾರೆ.

'ಗಾಯಗೊಂಡಿದ್ದ ಕೆಲವು ಆಟಗಾರರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಚೇತರಿಸಿಕೊಳ್ಳುತ್ತಿರುವ ಕಾರಣ, ಏಷ್ಯಾಕಪ್ (ಆಗಸ್ಟ್ 30-ಸೆಪ್ಟೆಂಬರ್ 17) ಮತ್ತು ವಿಶ್ವಕಪ್‌ಗೂ (ಅಕ್ಟೋಬರ್–ನವೆಂಬರ್) ಮುನ್ನ ಇತರ ತಂಡದ ಸದಸ್ಯರಿಗೆ ಅವಕಾಶ ನೀಡುವುದು ಅನಿವಾರ್ಯವಾಗಿದೆ ಎಂದು ದ್ರಾವಿಡ್" ಹೇಳಿದರು.

‘ಕೆಲವು ಆಟಗಾರರಿಗೆ ಇದು ಕೊನೆಯ ಅವಕಾಶವಾಗಿದೆ. ಏಷ್ಯಾಕಪ್‌ಗೆ ಒಂದು ತಿಂಗಳು ಬಾಕಿ ಇದೆ. ಈಗ ನಮಗೆ ಹೆಚ್ಚು ಸಮಯ ಇಲ್ಲ. ಗಾಯಗೊಂಡಿರುವ ನಮ್ಮ ಕೆಲವು ಆಟಗಾರರು ಚೇತರಿಸಿಕೊಳ್ಳುತ್ತಿದ್ದಾರೆ. ಅವರಲ್ಲಿ ಕೆಲವರು ಏಷ್ಯಾ ಕಪ್ ಮತ್ತು ವಿಶ್ವಕಪ್‌ಗೆ ಫಿಟ್ ಆಗುತ್ತಾರೆ ಎಂದು ನಾವು ಭರವಸೆ ಹೊಂದಿದ್ದೇವೆ’ ಎಂದು ದ್ರಾವಿಡ್ ಹೇಳಿದರು.

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT