ಸೋಮವಾರ, ಜೂನ್ 1, 2020
27 °C

ವಿದಾಯ ಹೇಳಲು ಮೊರ್ತಜಾಗೆ ಇದು ಸಕಾಲ: ಒಟ್ಟಿಸ್‌ ಗಿಬ್ಸನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ : ‘ಮಷ್ರಫೆ ಮೊರ್ತಜಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸೂಕ್ತ ಸಮಯ’ ಎಂದು ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಬೌಲಿಂಗ್ ಕೋಚ್‌ ಒಟ್ಟಿಸ್‌ ಗಿಬ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

36 ವರ್ಷ ವಯಸ್ಸಿನ ಮೊರ್ತಜಾ, ಹೋದ ವರ್ಷ ನಡೆದಿದ್ದ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳನ್ನು ಆಡಿ ಕೇವಲ ಒಂದು ವಿಕೆಟ್‌ ಉರುಳಿಸಿದ್ದರು.

‘ಬಾಂಗ್ಲಾ ತಂಡದ ಮುಖ್ಯ ಕೋಚ್‌ ರಸೆಲ್‌ ಡೊಮಿಂಗೊ ಅವರು 2023ರ ಏಕದಿನ ವಿಶ್ವಕಪ್‌ ಅನ್ನು ಗಮನದಲ್ಲಿಟ್ಟುಕೊಂಡು ಬಲಿಷ್ಠ ತಂಡ ಕಟ್ಟಲು ಮುಂದಾಗಿದ್ದಾರೆ. ಹೀಗಾಗಿ ಮೊರ್ತಜಾಗೆ ಇನ್ನು ಮುಂದೆ ತಂಡದಲ್ಲಿ ಅವಕಾಶ ಸಿಗುವುದು ಅನುಮಾನ’ ಎಂದಿದ್ದಾರೆ.

‘ಮೊರ್ತಜಾ, ಪ್ರತಿಭಾವಂತ ಕ್ರಿಕೆಟಿಗ. ತಾವು ಗಳಿಸಿರುವ ಅನುಭವವನ್ನು ಯುವ ಕ್ರಿಕೆಟಿಗರಿಗೆ ಧಾರೆ ಎರೆಯಲು ಅವರು ಬೇರೆ ಯಾವುದಾದರೂ ಮಾರ್ಗ ಆಯ್ದುಕೊಳ್ಳುವುದು ಉತ್ತಮ’ ಎಂದು ನುಡಿದಿದ್ದಾರೆ.

‘ಬಾಂಗ್ಲಾದಲ್ಲಿ ಸಾಕಷ್ಟು ಯುವ ಕ್ರಿಕೆಟಿಗರಿದ್ದಾರೆ. ಹಸನ್‌ ಮಹಮ್ಮದ್‌, ಸೈಫುದ್ದೀನ್‌, ಸೈಫುಲ್‌ ಇಸ್ಲಾಂ, ಇಬಾದತ್‌ ಹುಸೇನ್‌ ಅವರಿಗೆ ಡೊಮಿಂಗೊ ಅವರು ಹೆಚ್ಚೆಚ್ಚು ಅವಕಾಶ ನೀಡುವ ನಿರೀಕ್ಷೆ ಇದೆ’ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು