ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್‌: ಪಾಕ್‌ ವಿರುದ್ಧ ನ್ಯೂಜಿಲೆಂಡ್‌ಗೆ ಸರಣಿ ಗೆಲುವಿನ ಸಂಭ್ರಮ

ಹೆನ್ರಿ ನಿಕೋಲ್ಸ್‌ಗೆ ಶತಕ; ವಿಲ್‌ ಸೋಮರ್‌ವಿಲೆಗೆ ಮೂರು ವಿಕೆಟ್‌; ಪತನ ಕಂಡ ಪಾಕ್‌
Last Updated 7 ಡಿಸೆಂಬರ್ 2018, 14:04 IST
ಅಕ್ಷರ ಗಾತ್ರ

ಅಬುಧಾಬಿ: ನಾಯಕ ಕೇನ್ ವಿಲಿಯಮ್ಸನ್ ಮತ್ತು ಮಧ್ಯಮ ಕ್ರಮಾಂಕದ ಹೆನ್ರಿಕ್‌ ನಿಕೋಲ್ಸ್‌ ಅವರ ಶತಕದ ಬೆನ್ನಲ್ಲೇ ವಿಲ್‌ ಸೊಮರ್‌ವಿಲೆ ಬೌಲಿಂಗ್‌ನಲ್ಲಿ ಮಿಂಚಿದರು. ಇದರ ಪರಿಣಾಮ ನ್ಯೂಜಿಲೆಂಡ್‌ ತಂಡ ಪಾಕಿಸ್ತಾನ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ಈ ಮೂಲಕ 49 ವರ್ಷಗಳ ನಂತರ ತವರಿನ ಹೊರಗೆ ಪಾಕ್ ವಿರುದ್ಧ ಸರಣಿ ಗೆದ್ದ ಸಾಧನೆ ಮಾಡಿತು.

ಶೇಕ್ ಸೈಯದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಐದನೇ ದಿನವಾದ ಶುಕ್ರವಾರ 280 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ 156 ರನ್‌ಗಳಿಗೆ ಪತನಗೊಂಡಿತು. ಪದಾರ್ಪಣೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಸೋಮರ್‌ವಿಲ್ಲೆ ಎರಡನೇ ಇನಿಂಗ್ಸ್‌ನಲ್ಲಿ ಪ್ರಮುಖ ಮೂರು ವಿಕೆಟ್ ಉರುಳಿಸಿ 123 ರನ್‌ಗಳ ಜಯಕ್ಕೆ ಕಾರಣರಾದರು.

ಆರಂಭಿಕ ಬ್ಯಾಟ್ಸ್‌ಮನ್‌ ಇಮಾಮ್ ಉಲ್‌ ಹಕ್‌ (22), ಮಧ್ಯಮ ಕ್ರಮಾಂಕದ ಬಾಬರ್ ಆಜಮ್‌ (51; 114 ಎಸೆತ, 5 ಬೌಂಡರಿ) ಮತ್ತು ಸರ್ಫರಾಜ್ ಅಹಮ್ಮದ್‌ (28) ಅವರನ್ನು ಹೊರತುಪಡಿಸಿದರೆ ಪಾಕಿಸ್ತಾನದ ಇತರ ಯಾರಿಗೂ ನ್ಯೂಜಿಲೆಂಡ್‌ ಬೌಲಿಂಗ್ ದಾಳಿಯನ್ನು ಮೀರಿ ನಿಲ್ಲಲು ಆಗಲಿಲ್ಲ. ಆರು ಮಂದಿ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಟದೆ ಔಟಾದರು.

ನಿಕೋಲ್ಸ್‌ಗೆ ಶತಕ: ಗುರುವಾರ 139 ರನ್‌ ಗಳಿಸಿದ್ದ ಕೇನ್ ವಿಲಿಯಮ್ಸನ್‌ ಶುಕ್ರವಾರ ಬೆಳಿಗ್ಗೆ ಅದೇ ಮೊತ್ತಕ್ಕೆ ಔಟಾದರು. ಗುರುವಾರ 90 ರನ್‌ಗಳೊಂದಿಗೆ ಅಜೇಯರಾಗಿದ್ದ ನಿಕೋಲ್ಸ್‌ 126 ರನ್ ಗಳಿಸಿದರು. ಇವರಿಬ್ಬರ ನಡುವಿನ 212 ರನ್‌ಗಳ ಜೊತೆಯಾಟ ತಂಡ ಭಾರಿ ಮೊತ್ತ ಸೇರಿಸಲು ನೆರವಾಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌, ನ್ಯೂಜಿಲೆಂಡ್‌: 274; ಪಾಕಿಸ್ತಾನ: 348; ಎರಡನೇ ಇನಿಂಗ್ಸ್‌, ನ್ಯೂಜಿಲೆಂಡ್‌ (ಗುರುವಾರದ ಅಂ‌ತ್ಯಕ್ಕೆ 4ಕ್ಕೆ272): 113 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 353 ಡಿಕ್ಲೇರ್‌ (ಕೇನ್ ವಿಲಿಯಮ್ಸನ್‌ 139, ಹೆನ್ರಿಕ್‌ ನಿಕೋಲ್ಸ್‌ 126; ಹಸನ್‌ 62ಕ್ಕೆ1, ಶಾಹೀನ್‌ 85ಕ್ಕೆ2, ಯಾಸಿರ್‌ 129ಕ್ಕೆ4); ‍ಪಾಕಿಸ್ತಾನ: 56.1 ಓವರ್‌ಗಳಲ್ಲಿ 156 (ಇಮಾಮ್ ಉಲ್ ಹಕ್‌ 22, ಬಾಬರ್ ಆಜಮ್‌ 51, ಸರ್ಫರಾಜ್ ಅಹಮ್ಮದ್‌ 28; ಟಿಮ್‌ ಸೌಥಿ 42ಕ್ಕೆ3, ಎಜಾಜ್‌ ಪಟೇಲ್‌ 42ಕ್ಕೆ3, ಸೋಮರ್‌ವಿಲೆ 52ಕ್ಕೆ3).

ಫಲಿತಾಂಶ: ನ್ಯೂಜಿಲೆಂಡ್‌ಗೆ 123 ರನ್‌ಗಳ ಜಯ; 3 ಪಂದ್ಯಗಳ ಸರಣಿಯಲ್ಲಿ 2–1ರ ಗೆಲುವು. ಪಂದ್ಯಶ್ರೇಷ್ಠ: ಕೇನ್ ವಿಲಿಯಮ್ಸನ್‌. ಸರಣಿಯ ಉತ್ತಮ ಆಟಗಾರ: ಯಾಸಿರ್ ಶಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT