ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲ್ಯಾಕ್‌ವುಡ್‌ ಶತಕ: ನ್ಯೂಜಿಲೆಂಡ್ ಜಯಭೇರಿ

Last Updated 6 ಡಿಸೆಂಬರ್ 2020, 13:05 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್‌, ನ್ಯೂಜಿಲೆಂಡ್‌: ಆಲ್‌ರೌಂಡ್ ಸಾಮರ್ಥ್ಯ ತೋರಿದ ನ್ಯೂಜಿಲೆಂಡ್ ಕ್ರಿಕೆಟ್‌ ತಂಡವು ಮೊದಲ ಟೆಸ್ಟ್ ಪಂದ್ಯದಲ್ಲಿ ಭಾನುವಾರ ವೆಸ್ಟ್ ಇಂಡೀಸ್‌ ತಂಡವನ್ನು ಇನಿಂಗ್ಸ್ ಮತ್ತು 134 ರನ್‌ಗಳಿಂದ ಮಣಿಸಿತು.

ತವರಿನಲ್ಲಿ ನಡೆಯುವ ಎಲ್ಲ ನಾಲ್ಕೂ ಪಂದ್ಯಗಳನ್ನು (ವಿಂಡೀಸ್‌ ಹಾಗೂ ಪಾಕಿಸ್ತಾನ ವಿರುದ್ಧ ತಲಾ ಎರಡು) ಗೆದ್ದು ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರುವ ಗುರಿಯಿಟ್ಟುಕೊಂಡಿರುವ ಕಿವೀಸ್‌ ಪಡೆ ಅದಕ್ಕೆ ತಕ್ಕಂಥ ಆಟವಾಡಿತು.

ನಾಲ್ಕನೇ ದಿನವಾದ ಭಾನುವಾರ ಆಟದ ಮೊದಲ ಅವಧಿ ನಿರ್ಣಾಯಕವಾಗಿತ್ತು. ಫಾಲೋ ಆನ್‌ ಪಡೆದು ಬ್ಯಾಟಿಂಗ್ ಮಾಡುತ್ತಿದ್ದ ವೆಸ್ಟ್ ಇಂಡೀಸ್‌ ತಂಡವು ಶನಿವಾರ 6 ವಿಕೆಟ್‌ಗೆ 196 ರನ್‌ ಗಳಿಸಿತ್ತು. ಆಟ ಮುಂದುವರಿಸಿದ ತಂಡವು 247 ರನ್‌ಗಳಿಗೆ ಎಲ್ಲ ವಿಕೆಟ್‌ ಒಪ್ಪಿಸಿತು.

ಮೂರನೇ ದಿನದಾಟದ ಅಂತ್ಯಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದ ಜರ್ಮೈನ್‌ ಬ್ಲ್ಯಾಕ್‌ವುಡ್‌ (104) ಹಾಗೂ ಅಲ್ಜರಿ ಜೋಸೆಫ್‌ (86) ಏಳನೇ ವಿಕೆಟ್‌ ಜೊತೆಯಾಟದಲ್ಲಿ 155 ರನ್‌ ಸೇರಿಸಿದರು. ಜೋಸೆಫ್‌ ವಿಕೆಟ್‌ ಗಳಿಸಿದ ಕೈಲ್‌ ಜೆಮಿಸನ್ ಈ ಜೊತೆಯಾಟವನ್ನು ಮುರಿದರು.

ಬ್ಲ್ಯಾಕ್‌ವುಡ್‌ ಅವರು ಟೆಸ್ಟ್ ಮಾದರಿಯಲ್ಲಿ ಎರಡನೇ ಶತಕದ ಸಂಭ್ರಮ ಆಚರಿಸಿದರು.

ನಾಯಕ ಕೇನ್‌ ವಿಲಿಯಮ್ಸನ್‌ ಅವರ ದ್ವಿಶತಕದ (251) ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವು 7 ವಿಕೆಟ್‌ಗೆ 519 ರನ್‌ ಗಳಿಸಿ ಡಿಕ್ಲೇರ್ಡ್‌ ಮಾಡಿಕೊಂಡಿತ್ತು. ಉತ್ತರವಾಗಿ ಕೆರಿಬಿಯನ್ ಪಡೆ 138ಕ್ಕೆ ಆಲೌಟ್‌ ಆಗಿತ್ತು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್: 7 ವಿಕೆಟ್‌ಗೆ 519 ಡಿಕ್ಲೇರ್ಡ್‌: ವೆಸ್ಟ್ ಇಂಡೀಸ್‌ ಮೊದಲ ಇನಿಂಗ್ಸ್: 64 ಓವರ್‌ಗಳಲ್ಲಿ 138: ಎರಡನೇ ಇನಿಂಗ್ಸ್ (ಫಾಲೋ ಆನ್‌, ಶನಿವಾರ 42 ಓವರ್‌ಗಳಲ್ಲಿ 6 ವಿಕೆಟ್‌ಗೆ 196): 58.5 ಓವರ್‌ಗಳಲ್ಲಿ 247 (ಜರ್ಮೈನ್‌ ಬ್ಲ್ಯಾಕ್‌ವುಡ್‌ 104, ಅಲ್ಜರಿ ಜೋಸೆಫ್‌ 80; ನೀಲ್‌ ವ್ಯಾಗ್ನರ್ 66ಕ್ಕೆ 4, ಕೈಲ್‌ ಜೆಮಿಸನ್‌ 42ಕ್ಕೆ 2, ಡೆರಿಲ್‌ ಮಿಚೆಲ್‌ 7ಕ್ಕೆ 1). ಫಲಿತಾಂಶ: ನ್ಯೂಜಿಲೆಂಡ್‌ ತಂಡಕ್ಕೆ ಇನಿಂಗ್ಸ್ ಮತ್ತು 134 ರನ್‌ಗಳ ಜಯ. ಪಂದ್ಯಶ್ರೇಷ್ಠ: ಕೇನ್‌ ವಿಲಯಮ್ಸನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT