ನವದೆಹಲಿ: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಆರಂಭವಾಗಲು ಇನ್ನೂ ಒಂದು ವರ್ಷ ಬಾಕಿ ಇದೆ. ಆ ಟೂರ್ನಿಯಲ್ಲಿ ಆಡುವ ಭಾರತ ತಂಡವನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಮುಂದಿನ ವಾರ ಶುರುವಾಗಲಿರುವ ಐಪಿಎಲ್ನಿಂದಲೇ ಆರಂಭಿಸಲು ಬಿಸಿಸಿಐ ಆಯ್ಕೆ ಸಮಿತಿ ಯೋಜಿಸಿದೆ.

ಏಕದಿನ ವಿಶ್ವಕಪ್ ಟೂರ್ನಿಗಾಗಿ 20ಕ್ಕೂ ಹೆಚ್ಚು ಆಟಗಾರರ ಸಂಭವನೀಯರ ತಂಡಕ್ಕೆ ಆಯ್ಕೆ ನಡೆಸಲು ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲಿದೆ.

ಅಜಿತ್ ಅವರ ಸಮಿತಿಯಲ್ಲಿ ಎಸ್.ಎಸ್. ದಾಸ್, ಆರ್.ಪಿ. ಸಿಂಗ್, ಅಜಯ್ ರಾತ್ರಾ ಮತ್ತು ಪ್ರಗ್ಯಾನ್ ಓಜಾ ಅವರಿದ್ದಾರೆ. ಮುಂದಿನ ವರ್ಷ ಅಕ್ಟೋಬರ್–ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮಿಬಿಯಾ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆಯಲಿದೆ.

ಆಯ್ಕೆ ಸಮಿತಿ ಸದಸ್ಯರು ತಮ್ಮತಮ್ಮ ವಲಯಗಳ ತಾಣಗಳಲ್ಲಿ ನಡೆಯುವ ಪಂದ್ಯಗಳನ್ನು ಮೈದಾನಗಳಲ್ಲಿ ಖುದ್ದಾಗಿ ಹಾಜರಿದ್ದು ವೀಕ್ಷಿಸುವರು. ಇನ್ನುಳಿದ ಪಂದ್ಯಗಳನ್ನು ಟಿವಿ ಮೂಲಕ ವೀಕ್ಷಿಸುವರು ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ಇದೇ 28ರಂದು ನಡೆಯುವ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯದಿಂದಲೇ ಆಯ್ಕೆ ಸಮಿತಿಯು ಕಾರ್ಯಾರಂಭ ಮಾಡಲಿದೆ.

ಅಜಿತ್ ಅಗರಕರ್ ಅವರ ಕಾರ್ಯಾವಧಿಯು ಇದೇ ಸೆಪ್ಟೆಂಬರ್ನಲ್ಲಿ ಮುಗಿಯಲಿದೆ. ಆದರೆ ಅವರನ್ನು 2027ರ ಏಕದಿನ ವಿಶ್ವಕಪ್ ಟೂರ್ನಿಯ ಅಂತ್ಯದವರೆಗೂ ಮುಂದುವರಿಸುವ ಪ್ರಸ್ತಾವ ಇದೆ ಎಂಬ ಮಾತುಗಳೂ ಕೇಳಿಬಂದಿವೆ.

‘ಆಯ್ಕೆ ಸಮಿತಿಯು ಬಿಸಿಸಿಐನ ಉಪಸಮಿತಿಯಾಗಿದೆ. ಸಮಿತಿಯ ಸದಸ್ಯರ ಕಾರ್ಯಾವಧಿಯು ಸೆಪ್ಟೆಂಬರ್ವರೆಗೆ ಇದೆ. ಬಿಸಿಸಿಐ ಕಾರ್ಯದರ್ಶಿಗಳು ಅಜಿತ್ ಅವರ ಅವಧಿ ವಿಸ್ತರಣೆ ಕುರಿತು ನಿರ್ಧರಿಸಬೇಕಿದೆ. ಸೀನಿಯರ್ ತಂಡದ ಆಯ್ಕೆಗಾರರು ಗರಿಷ್ಠ ನಾಲ್ಕು ವರ್ಷ ಕಾರ್ಯನಿರ್ವಹಿಸಲು ನಿಯಮಾವಳಿಯ ಪ್ರಕಾರ ಅವಕಾಶವಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.