ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಾಯುಷಿ ಕ್ರಿಕೆಟ್ ಆಟಗಾರ್ತಿ ಏಲೀನ್ ಆ್ಯಷ್ ನಿಧನ

Last Updated 4 ಡಿಸೆಂಬರ್ 2021, 17:28 IST
ಅಕ್ಷರ ಗಾತ್ರ

ಲಂಡನ್: ವಿಶ್ವದ ಅತಿ ಹಿರಿಯ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ಏಲೀನ್ ಆ್ಯಷ್ (110) ನಿಧನರಾದರು ಎಂದು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ.

ಇಂಗ್ಲೆಂಡ್‌ ತಂಡದಲ್ಲಿ ವೇಗಿಯಾಗಿದ್ದ ಆ್ಯಷ್ ಏಳು ಟೆಸ್ಟ್ ಆಡಿದ್ದರು. 1937ರಲ್ಲಿ ಅವರು ಆಸ್ಟ್ರೇಲಿಯಾದ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. 1949ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಅವರು ಗಾಲ್ಫ್ ಆಡಿದ್ದರು. ತಮ್ಮ 98ನೇ ವಯಸ್ಸಿನವರೆಗೂ ಅವರು ಗಾಲ್ಫ್‌ನಲ್ಲಿ ಸಕ್ರಿಯರಾಗಿದ್ದರು. 105ನೇ ವಯಸ್ಸಿನಲ್ಲಿ ಯೋಗಾಭ್ಯಾಸ ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT