ಶುಕ್ರವಾರ, ಡಿಸೆಂಬರ್ 9, 2022
20 °C

ಹಾರ್ದಿಕ್ ಪಾಂಡ್ಯರಂಥ ಆಟಗಾರ ಪಾಕಿಸ್ತಾನ ತಂಡಕ್ಕೆ ಬೇಕಿತ್ತು: ಶಾಹೀದ್ ಅಫ್ರಿದಿ

ಪ್ರಜಾವಾಣಿ ವೆಬ್ ಡೆ‌ಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಟೀಮ್ ಇಂಡಿಯಾದ ಹಾರ್ದಿಕ್ ಪಾಂಡ್ಯ ಅವರಂಥ ಮ್ಯಾಚ್ ವಿನ್ನರ್ ಆಲ್‌ರೌಂಡರ್ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿಲ್ಲ ಎಂದು ಅಲ್ಲಿನ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

‘ಸಾಮಾ ಟಿವಿ’ ಕಾರ್ಯಕ್ರಮವೊಂದರಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಫ್ರಿದಿ, ಪಾಕಿಸ್ತಾನ ತಂಡವು ಕೆಳ ಕ್ರಮಾಂಕದಲ್ಲಿ ಅವರಂಥ (ಪಾಂಡ್ಯ) ಆಟಗಾರರ ಕೊರತೆ ಅನುಭವಿಸುತ್ತಿದೆ ಎಂದು ಹೇಳಿದ್ದಾರೆ.

ಆಸಿಫ್ ಅಥವಾ ಕುಶ್ದಿಲ್ ಅವರಂಥ ಆಟಗಾರರು ಮ್ಯಾಚ್ ವಿನ್ನಿಂಗ್ ಪಾತ್ರ ನಿಭಾಯಿಸಬೇಕೆಂದು ಜನ ಬಯಸುತ್ತಿದ್ದಾರೆ. ಆದರೆ, ಇವರಿಬ್ಬರೂ ಸ್ಥಿರ ಪ್ರದರ್ಶನ ನೀಡುತ್ತಿಲ್ಲ ಎಂದು ಅಫ್ರಿದಿ ಹೇಳಿದ್ದಾರೆ.

‘ಹಾರ್ದಿಕ್ ಪಾಂಡ್ಯ ಅವರಂಥ ಆಟಗಾರರು ನಮಗೆ ಬೇಕಾಗಿದ್ದಾರೆ. ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲ, ಬೌಲಿಂಗ್‌ನಲ್ಲಿಯೂ ನೆರವಾಗುವ, ಮ್ಯಾಚ್ ಗೆಲ್ಲಿಸಿಕೊಡುವ ಆಟಗಾರರು ಬೇಕಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಕೆಳ ಕ್ರಮಾಂಕದಲ್ಲಿ ಮ್ಯಾಚ್ ಗೆಲ್ಲಿಸಿಕೊಡುವಂಥ ಆಟಗಾರ ಯಾರಾದರೂ ನಮ್ಮ ತಂಡದಲ್ಲಿ ಇದ್ದಾರೆ ಎಂಬುದಾಗಿ ನೀವು ಭಾವಿಸುತ್ತೀರೇ’ ಎಂದು ಅಫ್ರಿದಿ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಸರಣಿಯಲ್ಲಿ ಭಾರತ ಪರ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇಂದಿನಿಂದ (ಬುಧವಾರ) ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು