ಒಂದು ರಾಜ್ಯ, ಒಂದು ಮತ ನಿಯಮ ಕೈಬಿಟ್ಟ ‘ಸುಪ್ರೀಂ’

7

ಒಂದು ರಾಜ್ಯ, ಒಂದು ಮತ ನಿಯಮ ಕೈಬಿಟ್ಟ ‘ಸುಪ್ರೀಂ’

Published:
Updated:

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಡಳಿತದಲ್ಲಿ ಸುಧಾರಣೆ ತರುವುದಕ್ಕಾಗಿ ರಚಿಸಲಾಗಿದ್ದ  ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್‌ ಗುರುವಾರ ಸೂಚಿಸಿದೆ.

ಈ ಬಗ್ಗೆ ಬಿಸಿಸಿಐ ಸಲ್ಲಿಸಿದ್ದ ನಿಯಮಾವಳಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವಂತೆ ಕೋರ್ಟ್‌ ಸೂಚನೆ ನೀಡಿದೆ. ಅದರಲ್ಲಿ ಪ್ರಮುಖವಾಗಿ ‘ಒಂದು ರಾಜ್ಯ ಒಂದು ಮತ’ ಶಿಫಾರಸ್ಸನ್ನು ಸಡಿಲಗೊಳಿಸಿದೆ. ಇದರಿಂದಾಗಿ ಮುಂಬೈ, ಸೌರಾಷ್ಟ್ರ, ಬರೋಡಾ ಮತ್ತು ವಿದರ್ಭ ಕ್ರಿಕೆಟ್‌ ಸಂಸ್ಥೆಗಳ ಆತಂಕ ದೂರವಾಗಿದೆ. ಅವು ತಮ್ಮ ಹಕ್ಕು ಉಳಿಸಿಕೊಂಡಿವೆ. ಅಲ್ಲದೇ ರೈಲ್ವೆ, ಸರ್ವಿಸಸ್ ಮತ್ತು ವಿಶ್ವವಿದ್ಯಾಲಯಗಳಿಗೆ ಶಾಶ್ವತ ಮಾನ್ಯತೆಯನ್ನು  ನೀಡಿದೆ. ಎಲ್ಲ ಕ್ರಿಕೆಟ್ ಸಂಸ್ಥೆಗಳು 30 ದಿನಗಳ ಒಳಗೆ ಈ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಬೇಕು ಎಂದಿದೆ. ಅನುಮೋದನೆ ಪಡೆದಿರುವ ನಿಯಮಾವಳಿಗಳನ್ನು ದಾಖಲೆ ಸಮೇತ ನಾಲ್ಕು ವಾರಗಳ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ತಮಿಳುನಾಡು ಮುಖ್ಯ ನೋಂದಣಾಧಿಕಾರಿಗೆ ಸೂಚಿಸಿದೆ.

‘ಕೂಲಿಂಗ್ ಆಫ್‌’ ಶಿಫಾರಸ್ಸು ಕುರಿತು ಕೂಡ ಮಹತ್ವದ ತೀರ್ಪನ್ನು ನೀಡಿದೆ.  ಪದಾಧಿಕಾರಿಗಳು ಒಂದೇ ಅವಧಿಯಲ್ಲಿ ಸೇವೆ ಸಲ್ಲಿಸಲು ಅರ್ಹ ಎಂಬ ನಿಯಮವನ್ನು ಮರುಪರಿಶೀಲನೆ ಮಾಡಿರುವ ನ್ಯಾಯಪೀಠ, ಎರಡು ಅವಧಿಗಳ (ಒಂದು ಅವಧಿಯಲ್ಲಿ ಮೂರು ವರ್ಷಗಳು) ಸೇವೆ ಸಲ್ಲಿಸಿ ನಂತರ ‘ಕೂಲಿಂಗ್ ಆಫ್‌’ ಅವಧಿಯಲ್ಲಿರಬೇಕಾಗುತ್ತದೆ ಎಂದಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ . ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ ಆವರಿದ್ದ ಪೀಠವು ಈ ತೀರ್ಪು ಪ್ರಕಟಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !