ಗುರುವಾರ , ಆಗಸ್ಟ್ 5, 2021
23 °C

ನಮ್ಮದು ಶ್ರೇಷ್ಠ ಬೌಲಿಂಗ್ ಪಡೆ: ಮೊಹಮ್ಮದ್ ಶಮಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯುತ್ತಮ ಬೌಲಿಂಗ್ ಪಡೆ ಈಗ ಇದೆ ಎಂದು ಅನುಭವಿ ಮಧ್ಯಮವೇಗಿ ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಶಮಿ, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ ಮತ್ತು ಉಮೇಶ್ ಯಾದವ್ ಇದ್ದಾರೆ.

ಈ ಕುರಿತು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವೆಬ್‌ಸೈಟ್‌ಗೆ ಸಂದರ್ಶನ ನೀಡಿರುವ ಶಮಿ, ‘ಇವತ್ತು ವಿಶ್ವದೆಲ್ಲೆಡೆ ನಮ್ಮ ಬೌಲಿಂಗ್‌ ಪಡೆಯನ್ನು ಶ್ಲಾಘಿಸಲಾಗುತ್ತಿದೆ. ಒಂದೇ ಪ್ಯಾಕೇಜ್‌ನಲ್ಲಿ ಪರಿಣಾಮಕಾರಿ ವೇಗಿಗಳ ಪಡೆಯಿದೆ. ಹೀಗೆ ಹಿಂದೆಂದೂ ಇರಲಿಲ್ಲ. ಗಂಟೆಗೆ 145 ಕಿ.ಮೀ ವೇಗದಲ್ಲಿ ಎಸೆತಗಳನ್ನು ಹಾಕುವ ಬೌಲರ್‌ಗಳು ನಮ್ಮಲ್ಲಿದ್ದಾರೆ’ ಎಂದಿದ್ದಾರೆ.

‘ನಮ್ಮಲ್ಲಿ ಪರಸ್ಪರ ಯಾವುದೇ ಅಸೂಯೆ, ದ್ವೇಷಗಳು ಇಲ್ಲ. ಯಾರೇ ಯಶಸ್ಸಿಯಾದರೂ ಎಲ್ಲರೂ ಸಂಭ್ರಮಿಸುತ್ತೇವೆ. ಸಂತಸ ಹಂಚಿಕೊಳ್ಳುತ್ತೇವೆ. ಒಂದೇ ಕುಟುಂಬದಂತೆ ಇದ್ದೇವೆ’ ಎಂದು ಹೇಳಿದ್ದಾರೆ. 

‘ಇಶಾಂತ್ ಶರ್ಮಾ ನೂರನೇ ಟೆಸ್ಟ್‌ ಆಡುವತ್ತ ಸಾಗುತ್ತಿದ್ದಾರೆ. ಅದು ಸಾಧನೆ ಇರಬಹುದು. ಆದರೆ ಅವರ ವ್ಯಕ್ತಿತ್ವ ಅದಕ್ಕಿಂತ ದೊಡ್ಡದು. ಅವರ ಜೊತೆಗೆ ಒಮ್ಮೆ ಮಾತನಾಡಿ ನೋಡಿ ಅವರೆಷ್ಟು ಸರಳ ವ್ಯಕ್ತಿಯಾಗಿದ್ದಾರೆಂಂಬುದರ ಅರಿವಾಗುತ್ತದೆ’ ಎಂದು ಶಮಿ ಹೇಳಿದ್ದಾರೆ.

ದೆಹಲಿಯ ಇಶಾಂತ್ ಇಲ್ಲಿಯವರೆಗೆ 97 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು