ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಹ್ಯಾರಿಸ್ ಚೊಚ್ಚಲ ಶತಕ

Last Updated 22 ಮಾರ್ಚ್ 2019, 19:57 IST
ಅಕ್ಷರ ಗಾತ್ರ

ಶಾರ್ಜಾ: ಎಡಗೈ ಬ್ಯಾಟ್ಸ್‌ಮನ್‌ ಗಳಿಸಿದ ಚೊಚ್ಚಲ ಶತಕದ ಬಲದಿಂದ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಿದೆ. ಶುಕ್ರವಾರ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಐದು ವಿಕೆಟ್‌ಗಳಿಗೆ 280 ರನ್ ಗಳಿಸಿದೆ.

30 ವರ್ಷದ ಸೊಹೈಲ್‌ 115 ಎಸೆತಗಳಲ್ಲಿ 101 ರನ್ ಗಳಿಸಿ ಮಿಂಚಿದರು. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಮೊಣಕಾಲಿಗೆ ಗಾಯಗೊಂಡಿದ್ದ ಸೊಹೈಲ್ ವಿಶ್ರಾಂತಿ ಪಡೆದು ಇದೇ ಮೊದಲ ಬಾರಿ ಅಂಗಣಕ್ಕೆ ಇಳಿದಿದ್ದರು.

ಸರ್ಫರಾಜ್ ಅಹಮ್ಮದ್ ಸೇರಿದಂತೆ ಆರು ಮಂದಿ ಪ್ರಮುಖ ಆಟಗಾರರಿಗೆ ಪಾಕಿಸ್ತಾನ ವಿಶ್ರಾಂತಿ ನೀಡಿದೆ. ವಿಶ್ವಕಪ್‌ ಟೂರ್ನಿಗಾಗಿ ತಯಾರಾಗಲು ಈ ಕ್ರಮಕ್ಕೆ ತಂಡ ಮುಂದಾಗಿದೆ. ಆರಂಭಿಕ ಬ್ಯಾಟ್ಸ್‌ಮನ್ ಶಾನ್‌ ಮಸೂರ್‌ ಮತ್ತು ಮೊಹಮ್ಮದ್ ಅಬ್ಬಾಸ್‌ ಅವರಿಗೆ ಚೊಚ್ಚಲ ಪಂದ್ಯ ಆಡಲು ತಂಡ ಅವಕಾಶ ನೀಡಿತು.

ಇವರಿಬ್ಬರೂ ಕ್ರಮವಾಗಿ 15 ಮತ್ತು 14 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

ಇಲ್ಲಿನ ಶಾರ್ಜಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಮಸೂದ್‌ ಮತ್ತು ಇಮಾಮ್ ಉಲ್ ಹಕ್ ಮೊದಲ ವಿಕೆಟ್‌ಗೆ 35 ರನ್ ಸೇರಿಸಿದರು. ಏಳನೇ ಓವರ್‌ನಲ್ಲಿ ಸ್ಪಿನ್ನರ್ ನೇಥನ್ ಲಯನ್ ಈ ಜೊತೆಯಾಟವನ್ನು ಮುರಿದರು.

ನಂತರ ಹ್ಯಾರಿಸ್‌ ಆಟ ರಂಗೇರಿತು. 27ನೇ ಏಕದಿನ ಪಂದ್ಯ ಆಡಿದ ಅವರು ಮೂರನೇ ವಿಕೆಟ್‌ಗೆ ಉಮರ್ ಅಕ್ಮಲ್ ಜೊತೆ 98 ರನ್ ಸೇರಿಸಿದರು.

ಎರಡು ವರ್ಷಗಳ ನಂತರ ಮೊದಲ ಪಂದ್ಯ ಆಡಿದ ಅಕ್ಮಲ್‌ 49 ಎಸೆತಗಳಲ್ಲಿ 50 ರನ್‌ ಸಿಡಿಸಿದರು. ಮಸೂದ್‌ 40 ಎಸೆತಗಳಲ್ಲಿ 62 ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT