ರಾವಲ್ಪಿಂಡಿ: ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ನಿಧಾನಗತಿಯಲ್ಲಿ ಓವರುಗಳನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳಿಗೆ ದಂಡ ವಿಧಿಸಲಾಗಿದೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಪಾಯಿಂಟ್ಸ್ ಕಳೆಯಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ಹೇಳಿದೆ.
ಬಾಂಗ್ಲಾದೇಶ ಭಾನುವಾರ ಮುಕ್ತಾಯಗೊಂಡ ಟೆಸ್ಟ್ ಪಂದ್ಯದಲ್ಲಿ ಆತಿಥೇಯರ ವಿರುದ್ಧ 14 ಟೆಸ್ಟ್‌ಗಳಲ್ಲಿ ಮೊದಲ ಬಾರಿ ಗೆಲುವನ್ನು ದಾಖಲಿಸಿತ್ತು.
ಪಾಕಿಸ್ತಾನ ಆರು ಓವರುಗಳನ್ನು ಕಡಿಮೆ ಮಾಡಿದ್ದು, ಆರು ಡಬ್ಲ್ಯುಟಿಸಿ ಪಾಯಿಂಟ್ಸ್ ಕಳೆದುಕೊಂಡಿದೆ. ಬಾಂಗ್ಲಾದೇಶ ಮೂವರು ಓವರುಗಳನ್ನು ಕಡಿಮೆ ಮಾಡಿರುವುದು ಖಚಿತಪಟ್ಟಿದ್ದು, ಮೂರು ಪಾಯಿಂಟ್ಸ್ ಕಳೆದುಕೊಂಡಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನದ ಆಟಗಾರರಿಗೆ ಪಂದ್ಯ ಶುಲ್ಕದ ಶೇ 30ರಷ್ಟು ದಂಡ ವಿಧಿಸಲಾಗಿದ್ದು, ಬಾಂಗ್ಲಾದೇಶದ ಆಟಗಾರರಿಗೆ ಶೇ 15ರಷ್ಟು ದಂಡ ವಿಧಿಸಲಾಗಿದೆ. ಡಬ್ಲ್ಯುಟಿಸಿಯ 9 ತಂಡಗಳಲ್ಲಿ ಪಾಕಿಸ್ತಾನ ಈಗ ಎಂಟನೇ ಸ್ಥಾನಕ್ಕೆ ಸರಿದಿದೆ. ಬಾಂಗ್ಲಾದೇಶ ಏಳನೇ ಸ್ಥಾನದಲ್ಲಿದೆ.
ಶಕೀಬ್ ಅವರಿಗೆ ದುರ್ವರ್ತನೆ ತೋರಿದ್ದಕ್ಕೆ ಪಂದ್ಯ ಶುಲ್ಕದ ಶೇ 10 ದಂಡ ವಿಧಿಸಲಾಗಿದೆ. ನೀತಿಸಂಹಿತೆ ಉಲ್ಲಂಘಿಸಿದ್ದಕ್ಕೆ ಒಂದು ಡಿಮೆರಿಟ್ ಪಾಯಿಂಟ್ ಅವರ ಖಾತೆಗೆ ಸೇರಿದೆ.