ಭಾನುವಾರ, ನವೆಂಬರ್ 27, 2022
27 °C

ಟಿ20 ಕ್ರಿಕೆಟ್‌| ಕೊಹ್ಲಿಯ ಈ ವಿಶ್ವದಾಖಲೆ ಸರಿಗಟ್ಟಿದ್ದಾರೆ ಪಾಕ್‌ನ ಬಾಬರ್‌ ಅಜಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 3,000 ರನ್ ಗಳಿಸಿದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ವಿಶ್ವದಾಖಲೆಯನ್ನು ಪಾಕಿಸ್ತಾನದ ನಾಯಕ ಬಾಬರ್ ಅಜಂ ಶುಕ್ರವಾರ ಸರಿಗಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಯ ಆರನೇ ಟಿ20 ಪಂದ್ಯದಲ್ಲಿ 87*(59) ರನ್ ಗಳಿಸಿದ ಸಂದರ್ಭ,  ಬಾಬರ್ 3,000 ರನ್ ಗಡಿಯನ್ನು ದಾಟಿದರು. 

27ರ ಹರೆಯದ ಬಾಬರ್‌ ಈ ಮೈಲಿಗಲ್ಲನ್ನು ತಲುಪಲು 81 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ವಿಶೇಷವೆಂದರೆ ಕೊಹ್ಲಿ ಕೂಡ 81 ಇನ್ನಿಂಗ್ಸ್‌ಗಳ ನೆರವಿನಿಂದಲೇ ಈ ಸಾಧನೆ ಮಾಡಿದ್ದರು. 

ಅಂದಹಾಗೆ, 3000 ರನ್‌ಗಳನ್ನು ಪೂರೈಸಿದ ಐದನೇ ಪುರುಷ ಆಟಗಾರ ಬಾಬರ್‌. ಒಟ್ಟಾರೆ, ಟಿ20 ಕ್ರಿಕೆಟ್‌ ರಂಗದಲ್ಲೇ ಈ ಮೈಲುಗಲ್ಲು ದಾಟಿದ 8ನೇ ಆಟಗಾರ. 

ಇವುಗಳನ್ನೂ ಓದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು