ಇಸ್ಲಾಮಾಬಾದ್: ಬ್ಯಾಟಿಂಗ್ ದಿಗ್ಗಜ ಬಾಬರ್ ಆಜಂ ಅವರನ್ನು ಪಾಕಿಸ್ತಾನ ತಂಡವು, ಮುಂದಿನ ವಾರದಿಂದ ಬಾಂಗ್ಲಾದೇಶದಲ್ಲಿ ನಡೆಯುವ ಏಕದಿನ ಸರಣಿಗೆ ಕೈಬಿಟ್ಟಿದೆ. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಗಮದನದಲ್ಲಿಟ್ಟುಕೊಂಡು ಆರು ಮಂದಿ ಹೊಸಬರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ವೇಗದ ಬೌಲರ್ ಶಾಹಿನ್ ಶಾ ಅಫ್ರಿದಿ ನಾಯರಾಗಿದ್ದಾರೆ.

ಆರಂಭ ಆಟಗಾರ ಸೈಮ್ ಅಯೂಬ್, ಸ್ಪಿನ್ ಆಲ್ರೌಂಡರ್ಗಳಾದ ಶದಾಬ್ ಖಾನ್, ಮೊಹಮ್ಮದ್ ನವಾಜ್ ಮತ್ತು ವೇಗದ ಬೌಲರ್ ನಸೀಮ್ ಶಾ ಅವರನ್ನೂ 15 ಮಂದಿಯ ತಂಡದಿಂದ ಕೈಬಿಡಲಾಗಿದೆ. ಮೂರು ಪಂದ್ಯಗಳ ಸರಣಿ ಇದೇ 11, 13 ಮತ್ತು 15ರಂದು ನಡೆಯಲಿದೆ.

ಹಾಲಿ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ಗೇರಲು ವಿಫಲವಾಗಿದ್ದು, ರಾಷ್ಟ್ರೀಯ ತಂಡದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಆಜಂ ಆ ವಿಶ್ವಕಪ್ನಲ್ಲಿ ಕೇವಲ 91 ರನ್ ಗಳಿಸಿದ್ದರು. ಏಕದಿನ ಮಾದರಿಯಲ್ಲಿ ಅವರ ಸಾಧನೆ ಉತ್ತಮವಾಗಿದ್ದು 140 ಪಂದ್ಯಗಳನ್ನು ಆಡಿದ್ದು, 20 ಶತಕ ಒಳಗೊಂಡ 6,501 ರನ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.