ಕೇಪ್ಟೌನ್: ರಯಾನ್ ರಿಕೆಲ್ಟನ್ (259;343ಎ) ಅವರ ದ್ವಿಶತಕದ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 615 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.

ಮೊದಲ ದಿನ ಶತಕ ದಾಖಲಿಸಿ ಅಜೇಯವಾಗಿದ್ದ ಆರಂಭಿಕ ಆಟಗಾರ ರಿಕೆಲ್ಟನ್, ಎರಡನೇ ದಿನವಾದ ಶನಿವಾರ ಚೊಚ್ಚಲ ದ್ವಿಶತಕ ಪೂರೈಸಿ ಸಂಭ್ರಮಿಸಿದರು. ಅವರ ಇನಿಂಗ್ಸ್ 29 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡಿತ್ತು. ಉಳಿದಂತೆ ನಾಯಕ ತೆಂಬಾ ಬವುಮಾ (106;179ಎ) ಮತ್ತು ಕೈಲ್ ವೆರೆಯನ್ (100;147ಎ) ಶತಕಗಳ ಮೂಲಕ ಉಪಯುಕ್ತ ಕಾಣಿಕೆ ನೀಡಿದರು.

ಬೃಹತ್ ಮೊತ್ತಕ್ಕೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ 20 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿದೆ. ದಿನದಾಟದ ಅಂತ್ಯಕ್ಕೆ 21 ಓವರ್ಗಳಲ್ಲಿ ಮೂರು ವಿಕೆಟ್ಗೆ 64 ರನ್ ಗಳಿಸಿದೆ. ಬಾಬರ್ ಅಜಂ (ಅಜೇಯ 31) ಮತ್ತು ಮೊಹಮ್ಮದ್ ರಿಜ್ವಾನ್ (ಅಜೇಯ 9) ಮೂರನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.

ಸರಣಿಯ ಮೊದಲ ಪಂದ್ಯವನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ಗೆ ಈಗಾಗಲೇ ಅರ್ಹತೆ ಪಡೆದಿದೆ.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: 141.3 ಓವರ್ಗಳಲ್ಲಿ 615 (ರಯಾನ್ ರಿಕೆಲ್ಟನ್ 259, ತೆಂಬಾ ಬವುಮಾ 106, ಕೈಲ್ ವೆರೆಯನ್ 100, ಮಾರ್ಕೊ ಯಾನ್ಸನ್ 62; ಮೊಹಮ್ಮದ್ ಅಬ್ಬಾಸ್ 94ಕ್ಕೆ 3, ಸಲ್ಮಾನ್ ಅಘಾ 148ಕ್ಕೆ 3). ಪಾಕಿಸ್ತಾನ: 21 ಓವರ್ಗಳಲ್ಲಿ 3 ವಿಕೆಟ್ಗೆ 64 (ಬಾಬರ್ ಅಜಂ ಔಟಾಗದೇ 31; ಕಗಿಸೊ ರಬಾಡ 9ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.