ಕ್ರಿಕೆಟ್‌: ಪಾಕಿಸ್ತಾನಕ್ಕೆ ಸರಣಿ

7

ಕ್ರಿಕೆಟ್‌: ಪಾಕಿಸ್ತಾನಕ್ಕೆ ಸರಣಿ

Published:
Updated:
Deccan Herald

ದುಬೈ: ಬಾಬರ್‌ ಅಜಂ (79; 58ಎ, 7ಬೌಂ, 2ಸಿ) ಮತ್ತು ಮೊಹಮ್ಮದ್‌ ಹಫೀಜ್‌ (ಔಟಾಗದೆ 53; 34ಎ, 4ಬೌಂ, 2ಸಿ) ಅವರ ಅರ್ಧಶತಕಗಳ ಬಲದಿಂದ ಪಾಕಿಸ್ತಾನ ತಂಡ ನ್ಯೂಜಿಲೆಂಡ್‌ ಎದುರಿನ ಮೂರನೇ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ 47ರನ್‌ಗಳಿಂದ ಗೆದ್ದಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ (3–0) ಸಾಧನೆ ಮಾಡಿದೆ.

ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 166ರನ್‌ ದಾಖಲಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ 16.5 ಓವರ್‌ಗಳಲ್ಲಿ 119ರನ್‌ಗಳಿಗೆ ಆಲೌಟ್‌ ಆಯಿತು. ಪಾಕಿಸ್ತಾನ ತಂಡದ ಶಾದಬ್‌ ಖಾನ್‌ ಮೂರು ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 166 (ಬಾಬರ್‌ ಅಜಂ 79, ಮೊಹಮ್ಮದ್‌ ಹಫೀಜ್‌ ಔಟಾಗದೆ 53, ಶೋಯಬ್‌ ಮಲಿಕ್‌ 19; ಲೂಕಿ ಫರ್ಗ್ಯೂಸನ್‌ 29ಕ್ಕೆ1, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 41ಕ್ಕೆ2).

ನ್ಯೂಜಿಲೆಂಡ್‌: 16.5 ಓವರ್‌ಗಳಲ್ಲಿ 119 (ಗ್ಲೆನ್‌ ಫಿಲಿಪ್‌ 26, ಕೇನ್‌ ವಿಲಿಯಮ್ಸನ್‌ 60, ಇಶ್‌ ಸೋಧಿ ಔಟಾಗದೆ 11; ಫಹೀಮ್‌ ಅಶ್ರಫ್‌ 6ಕ್ಕೆ1, ಇಮಾದ್‌ ವಾಸೀಂ 28ಕ್ಕೆ2, ವಕಾಸ್‌ ಮಕ್ಸೂದ್‌ 21ಕ್ಕೆ2, ಶಾದಬ್‌ ಖಾನ್‌ 30ಕ್ಕೆ3).

ಫಲಿತಾಂಶ: ಪಾಕಿಸ್ತಾನಕ್ಕೆ 47ರನ್‌ ಗೆಲುವು. 3–0ರಲ್ಲಿ ಸರಣಿ. ‍ಪಂದ್ಯಶ್ರೇಷ್ಠ: ಬಾಬರ್‌ ಅಜಂ. ಸರಣಿ ಶ್ರೇಷ್ಠ: ಮೊಹಮ್ಮದ್‌ ಹಫೀಜ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !