ಸೋಮವಾರ, ಜೂನ್ 1, 2020
27 °C

ಕೊರೊನಾ: ತಮ್ಮ ರೆಸ್ಟೋರೆಂಟ್‌ಗಳಲ್ಲಿ ಉಚಿತ ಊಟ ನೀಡಲಿದ್ದಾರೆ ಪಾಕ್‌ನ ಈ ಅಂಪೈರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್‌: ಜಗತ್ತಿನಾದ್ಯಂತ ಭೀತಿ ಉಂಟುಮಾಡಿರುವ ಕೊರೊನಾ ವೈರಸ್‌ ಸೋಂಕಿನಿಂದಾಗಿ ಪಾಕಿಸ್ತಾನವೂ ತತ್ತರಿಸಿದೆ. ಹೀಗಾಗಿ ಆ ದೇಶದಲ್ಲಿನ ನಿರುದ್ಯೋಗಿಗಳಿಗಾಗಿ ಲಾಹೋರ್‌ನಲ್ಲಿರುವ ತಮ್ಮ ರೆಸ್ಟೋರೆಂಟ್‌ಗಳಲ್ಲಿ ಉಚಿತ ಊಟ ನೀಡುವುದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ ಅಂಪೈರ್‌ ಅಲೀಂ ದರ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಇದುವರೆಗೆ ಸಮಾರು 1200 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

‘ದರ್‌’ಸ್‌ ಡೆಲಿಘ್ಟೊ’ ಹೆಸರಿನ ರೆಸ್ಟೋರೆಂಟ್‌ಗಳನ್ನು ನಡೆಸುವ ಅಲೀಂ ಅವರು, ಕೋವಿಡ್‌–19 ನಿಂದಾಗಿ ಉದ್ಯೋಗ ಕಳೆದುಕೊಂಡಿರುವ ಜನರು ತಮ್ಮ ರೆಸ್ಟೋರೆಂಟ್‌ನಲ್ಲಿ ಉಚಿತವಾಗಿ ಊಟ ಸೇವಿಸಬಹುದು ಎಂದು ಹೇಳಿದ್ದಾರೆ.

‘ಕೊರೊನಾ ವೈರಸ್‌ ವಿಶ್ವದಾದ್ಯಂತ ಹರಡಿದೆ. ಅದರಂತೆ ಪಾಕಿಸ್ತಾನದಲ್ಲಿಯೂ ಪರಿಣಾಮ ಉಂಟುಮಾಡಿದೆ. ಏನೇ ಆಗಲಿ, ನಾವೆಲ್ಲ ಸಹಕಾರ ನೀಡದಿದ್ದರೆ ನಮ್ಮ ಸರ್ಕಾರ ಅದನ್ನು ನಿಯಂತ್ರಿಸಲಾರದು. ಸರ್ಕಾರ ನೀಡುವ ಎಲ್ಲ ನಿರ್ದೇಶನಗಳನ್ನು ಪಾಲಿಸುವಂತೆ ನಾನು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದು ವಿಡಿಯೊ ಮೂಲಕ ತಿಳಿಸಿದ್ದಾರೆ.

’ಲಾಕ್‌ಡೌನ್‌ ಅವಧಿಯಲ್ಲಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನಾನು ಲಾಹೋರ್‌ನ ಪೈ ರಸ್ತೆಯಲ್ಲಿ ‘ದರ್‌’ಸ್‌ ಡೆಲಿಘ್ಟೊ ಹೆಸರಿನ ರೆಸ್ಟೋರೆಂಟ್‌ ನಡೆಸುತ್ತಿದ್ದೇನೆ. ಸದ್ಯ ನಿರುದ್ಯೋಗಿಗಳಾಗಿರುವ ಜನರು ಅಲ್ಲಿ ಉಚಿತವಾಗಿ ಊಟ ಸೇವಿಸಬಹುದು’ ಎಂದಿದ್ದಾರೆ.

51 ವರ್ಷ ಅಲೀಂ, 386 ಅಂತರರಾಷ್ಟ್ರೀಯ ಪಂದ್ಯಗಳಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಮಾಜಿ ಅಲ್ರೌಂಡರ್ ಶಾಹಿದ್‌ ಅಫ್ರಿದಿ ಅವರೂ ಅಗತ್ಯ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯ ಮಾಡಿದ್ದಾರೆ.
ಮಾಜಿ ವೇಗಿ ಶೋಯಬ್‌ ಅಖ್ತರ್‌, ಧರ್ಮಗಳನ್ನು ಪಕ್ಕಕ್ಕಿಟ್ಟು ಒಬ್ಬರಿಗೊಬ್ಬರು ನೆರವಾಗಿ ಎಂದು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮನವಿ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು