ಸಿಲ್ಹೆಟ್ (ಬಾಂಗ್ಲಾದೇಶ) (ಪಿಟಿಐ): ಶಿಸ್ತುಬದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ಬಾಂಗ್ಲಾದೇಶದ ತಂಡವು ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದು, ಎರಡನೇ ದಿನವಾದ ಭಾನುವಾರ 156 ರನ್ಗಳ ಮುನ್ನಡೆ ಸಾಧಿಸಿದೆ.

ಆರಂಭಿಕ ಆಟಗಾರ ಮಹಮ್ಮದುಲ್ ಹಸನ್ (52;64ಎ) ಅವರ ಅರ್ಧ ಶತಕದ ನೆರವಿನಿಂದ ಬಾಂಗ್ಲಾದೇಶ ಎರಡನೇ ಇನಿಂಗ್ಸ್ನಲ್ಲಿ ದಿನದಾಟದ ಅಂತ್ಯಕ್ಕೆ 3 ವಿಕೆಟ್ಗೆ 110 ರನ್ ಗಳಿಸಿದೆ.

ಆತಿಥೇಯ ದೇಶವು ಮೊದಲ ಇನಿಂಗ್ಸ್ನಲ್ಲಿ ಲಿಟನ್ ದಾಸ್ (126;159ಎ) ಅವರ ಶತಕದ ನೆರವಿನಿಂದ 77 ಓವರ್ಗಳಲ್ಲಿ 278 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪ್ರವಾಸಿ ತಂಡವು 57.4 ಓವರ್ಗಳಲ್ಲಿ 232 ರನ್ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಬಾಂಗ್ಲಾ ತಂಡವು 46 ರನ್ಗಳ ಇನಿಂಗ್ಸ್ ಮುನ್ನಡೆ ಗಳಿಸಿತು.

ಪಾಕ್ ಮಾಜಿ ನಾಯಕ ಬಾಬರ್ ಆಜಂ (68;84ಎ) ಮತ್ತು ಸಾಜಿದ್ ಖಾನ್ (38;28ಎ) ಅರ್ಧಶತಕ ದಾಖಲಿಸಿ ಉಪಯುಕ್ತ ಕಾಣಿಕೆ ನೀಡಿದರು. ಬಾಂಗ್ಲಾದ ನಹೀದ್ ರಾಣಾ ಮತ್ತು ತಜ್ಮುಲ್ ಇಸ್ಲಾಂ ತಲಾ ಮೂರು ವಿಕೆಟ್ ಗಳಿಸಿದರು. ತಸ್ಕಿನ್ ಅಹ್ಮದ್ ಮತ್ತು ಮೆಹಿದಿ ಹಸನ್ ಮಿರಾಜ್ ತಲಾ ಎರಡು ವಿಕೆಟ್ ಕಬಳಿಸಿದರು.

ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾ ಜಯ ಗಳಿಸಿತು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಬಾಂಗ್ಲಾದೇಶ: 77 ಓವರ್ಗಳಲ್ಲಿ 278. ಪಾಕಿಸ್ತಾನ: 57.4 ಓವರ್ಗಳಲ್ಲಿ 232 (ಬಾಬರ್ ಆಜಂ 68, ಸಾಜಿದ್ ಖಾನ್ 38; ತಸ್ಕಿನ್ ಅಹ್ಮದ್ 37ಕ್ಕೆ 2, ಮೆಹಿದಿ ಹಸನ್ 21ಕ್ಕೆ 2, ನಹೀದ್ ರಾಣಾ 60ಕ್ಕೆ 3, ತಜ್ಮುಲ್ ಇಸ್ಲಾಂ 67ಕ್ಕೆ 3). ಎರಡನೇ ಇನಿಂಗ್ಸ್: ಬಾಂಗ್ಲಾದೇಶ: 26.4 ಓವರ್ಗಳಲ್ಲಿ 3 ವಿಕೆಟ್ಗೆ 110 (ಮಹಮ್ಮದುಲ್ ಹಸನ್ 52, ಮೋಮಿನುಲ್ ಹಕ್ 30; ಖುರ್ರಂ ಶಹಜಾದ್ 19ಕ್ಕೆ 2).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-51-184672600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.