ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pakistan vs Sri Lanka, Asia Cup 2022| ಲಂಕಾಕ್ಕೆ ಮಣಿದ ಪಾಕಿಸ್ತಾನ

ಏಷ್ಯಾ ಕಪ್‌ ಕ್ರಿಕೆಟ್‌: ಹಸರಂಗ, ನಿಸಾಂಕ ಮಿಂಚು
Last Updated 9 ಸೆಪ್ಟೆಂಬರ್ 2022, 19:16 IST
ಅಕ್ಷರ ಗಾತ್ರ

ದುಬೈ: ಏಷ್ಯಾಕಪ್‌ ಟಿ20 ಟೂರ್ನಿಯ ಫೈನಲ್‌ನ ‘ರಿಹರ್ಸಲ್‌’ ಎನಿಸಿದ್ದ ಸೂಪರ್‌ ಫೋರ್‌ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡ, ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು.

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಇವೆರಡು ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಈ ಗೆಲುವು ದಸುನ್‌ ಶನಕ ಬಳಗದ ಆತ್ಮವಿಶ್ವಾಸ ಹೆಚ್ಚಿಸಿದೆ.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಾಬರ್‌ ಅಜಂ ಬಳಗ 19.1 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟಾಯಿತು. ಲಂಕಾ 17 ಓವರ್‌ಗಳಲ್ಲಿ 5 ವಿಕೆಟ್‌ಗೆ 124 ರನ್‌ ಗಳಿಸಿ ಜಯಿಸಿತು.

ವನಿಂದು ಹಸರಂಗ (21ಕ್ಕೆ 3) ಮತ್ತು ತಲಾ ಎರಡು ವಿಕೆಟ್ ಪಡೆದ ಮಹೀಶ್‌ ತೀಕ್ಷಣ ಹಾಗೂ ಪ್ರಮೋದ್‌ ಮದು ಶನ್‌ಅವರುಲಂಕಾ ಪರ ಚುರುಕಿನ ದಾಳಿ ನಡೆಸಿದರು. ಆರಂಭಿಕ ಬ್ಯಾಟರ್‌ ಪಥುಮ್‌ ನಿಸಾಂಕ (ಔಟಾಗದೆ 55, 48 ಎ) ಅವರು ಜವಾಬ್ದಾರಿಯುತ ಆಟವಾಡಿ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು.

ಟಾಸ್‌ ಗೆದ್ದ ಲಂಕಾ ಮೊದಲು ಬೌಲಿಂಗ್‌ ನಡೆಸಲು ನಿರ್ಧರಿಸಿತು. ಬಾಬರ್‌ ಅಜಂ (30, 29 ಎ., 4X2) ಮತ್ತು ಮೊಹಮ್ಮದ್‌ ನವಾಜ್‌ (26 ರನ್‌, 18 ಎ) ಮಾತ್ರ ಪಾಕ್‌ ಪರ ಉತ್ತಮ ಆಟವಾಡಿದರು. ಉಳಿದವರಿಗೆ ಲಂಕಾ ಬೌಲಿಂಗ್‌ ದಾಳಿಯನ್ನು ಎದುರಿಸಲು ಆಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ 19.1 ಓವರ್‌ಗಳಲ್ಲಿ 121 (ಮೊಹಮ್ಮದ್‌ ರಿಜ್ವಾನ್‌ 14, ಬಾಬರ್‌ ಅಜಂ 30, ಮೊಹಮ್ಮದ್‌ ನವಾಜ್‌ 26, ವನಿಂದು ಹಸರಂಗ 21ಕ್ಕೆ 3, ಮಹೀಶ್‌ ತೀಕ್ಷಣ 21ಕ್ಕೆ 2, ಪ್ರಮೋದ್‌ ಮದುಶನ್‌ 21ಕ್ಕೆ 2, ಧನಂಜಯ ಡಿಸಿಲ್ವಾ 18ಕ್ಕೆ 1, ಚಮಿಕ ಕರುಣರತ್ನೆ 4ಕ್ಕೆ 1)

ಶ್ರೀಲಂಕಾ: 17 ಓವರ್‌ಗಳಲ್ಲಿ 5 ವಿಕೆಟ್‌ಗೆ 124 (ಪಥುಮ್‌ ನಿಸಾಂಕ ಔಟಾಗದೆ 55, ಭಾನುಕ ರಾಜಪಕ್ಸ 24, ದಸುನ್‌ ಶನಕ 21, ಮೊಹಮ್ಮದ್ ಹಸನೈನ್‌ 21ಕ್ಕೆ 2, ಹ್ಯಾರಿಸ್‌ ರವೂಫ್ 19ಕ್ಕೆ 2) ಫಲಿತಾಂಶ: ಶ್ರೀಲಂಕಾಕ್ಕೆ 5 ವಿಕೆಟ್ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT