ಶನಿವಾರ, ಏಪ್ರಿಲ್ 4, 2020
19 °C

ಪಾಕಿಸ್ತಾನ ಮೂಲದ ಸ್ಕಾಟ್ಲೆಂಡ್ ಕ್ರಿಕೆಟಿಗ ಮಜೀದ್ ಹಕ್‌ಗೆ ಕೊರೊನಾ ಸೋಂಕು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಗ್ಲಾಸ್ಗೋ: ಪಾಕಿಸ್ತಾನ ಮೂಲದ ಸ್ಕಾಟ್ಲೆಂಡ್ ಕ್ರಿಕೆಟಿಗ ಮಜೀದ್‌ ಹಕ್‌ (37) ಅವರಿಗೆ ಕೊರೊನಾ ವೈರಸ್‌ ಸೊಂಕು ತಗುಲಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಆಫ್‌ಸ್ಪಿನ್ನರ್‌ ಆಗಿರುವ ಹಕ್‌, 2006ರಿಂದ 2015ರ ಅವಧಿಯಲ್ಲಿ ಸ್ಕಾಟ್ಲೆಂಡ್‌ ಪರ 54 ಏಕದಿನ ಮತ್ತು 24 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಗ್ಲಾಸ್ಗೋದಲ್ಲಿರುವ ರಾಯಲ್‌ ಅಲೆಕ್ಸಾಂಡ್ರಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

‘ಇಂದು ಮನೆಗೆ ವಾಪಸ್‌ ಆಗುವ ನಿರೀಕ್ಷೆಯಲ್ಲಿದ್ದೇನೆ. ರಾಯಲ್‌ ಅಲೆಕ್ಸಾಂಡ್ರಾ ಆಸ್ಪತ್ರೆಯ ಸಿಬ್ಬಂದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂದೇಶಗಳನ್ನು ಕಳುಹಿಸಿದ ಹಾಗೂ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗಲಿ, ಅಂಗಳಕ್ಕೆ ಇಳಿಯಲಿದ್ದೇನೆ’ ಎಂದು ಟ್ವೀಟ್‌ ಮಾಡಿಕೊಂಡಿದ್ದಾರೆ.

2015ರಲ್ಲಿ ಆಸ್ಟ್ರೇಲಿಯಾ–ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದ ಹಕ್‌, ಬಳಿಕ ಸ್ಕಾಟ್ಲೆಂಡ್ ಪರ ಕಣಕ್ಕಿಳಿದಿಲ್ಲ. ಆದರೆ, ದೇಶಿ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ.

ಸ್ಕಾಟ್ಲೆಂಡ್‌ನಲ್ಲಿ ಇದುವರೆಗೆ ಸುಮಾರು 266 ಜನರಲ್ಲಿ ಸೋಂಕು ದೃಢಪಟ್ಟಿದೆ. ಪ್ರಪಂಚದಾದ್ಯಂತ ಶುಕ್ರವಾರದವರೆಗೆ ಸುಮಾರು 2,63 ಲಕ್ಷ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸಾವಿನ ಸಂಖ್ಯೆ 11 ಸಾವಿರ ದಾಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು