ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವಿರುದ್ಧ ಆಡುವಾಗ ಬಾಬರ್ ಆಜಂ ತಾಯಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ!

Last Updated 31 ಅಕ್ಟೋಬರ್ 2021, 11:00 IST
ಅಕ್ಷರ ಗಾತ್ರ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಆಡುವಾಗ ಪಾಕಿಸ್ತಾನದ ನಾಯಕ ಬಾಬರ್ ಆಜಂ ಅವರ ತಾಯಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ವಿವರವನ್ನು ಬಾಬರ್ ತಂದೆ ಆಜಂ ಸಿದ್ಧಿಕಿ ಬಹಿರಂಗಪಡಿಸಿದ್ದಾರೆ.

'ನನ್ನ ರಾಷ್ಟ್ರವು ಕೆಲವು ಸತ್ಯವನ್ನು ತಿಳಿದುಕೊಳ್ಳುವ ಸಮಯ ಬಂದಿದೆ. ಕಳೆದ ಮೂರು ಪಂದ್ಯಗಳನ್ನು ಬಾಬರ್ ಅತ್ಯಂತ ನೋವಿನಿಂದ ಆಡಿದ್ದರು' ಎಂದು ಆಜಂ ಸಿದ್ಧಿಕಿ ತಿಳಿಸಿದ್ದಾರೆ.

ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ನಾಯಕನ ಆಟವಾಡಿದ ಬಾಬರ್ ಆಜಂ (68*) ಅಜೇಯ ಅರ್ಧಶತಕ ನೆರವಿನಿಂದ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧಚೊಚ್ಚಲ ಗೆಲುವು ದಾಖಲಿಸಿದ ಪಾಕಿಸ್ತಾನವು ಇತಿಹಾಸ ರಚಿಸಿತ್ತು.

'ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ನಿಮಗೆಲ್ಲರಿಗೂ ಅಭಿನಂದನೆಗಳು. ನಮ್ಮ ಮನೆಯಲ್ಲಿ ಕಠಿಣ ಪರೀಕ್ಷೆ ಎದುರಾಗಿತ್ತು. ಭಾರತ ವಿರುದ್ಧ ಆಡಿದ ದಿನ ಬಾಬರ್ ತಾಯಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಾಬರ್ ಎಲ್ಲ ಮೂರು ಪಂದ್ಯಗಳನ್ನು ತೀವ್ರ ಯಾತನೆಯಲ್ಲಿ ಆಡಿದ್ದಾರೆ. ಬಾಬರ್ ದುರ್ಬಲರಾಗಬಾರದು ಎಂಬ ಕಾರಣಕ್ಕೆ ನಾನು ಇಲ್ಲಿಗೆ ಆಗಮಿಸಿದ್ದೇನೆ' ಎಂದು ಹೇಳಿದ್ದಾರೆ.

ಭಾರತ ವಿರುದ್ಧ ಪಂದ್ಯ ಗೆದ್ದಾಗ ಬಾಬರ್ ತಂದೆಗೆ ಭಾವನೆಗಳನ್ನು ತಡೆದುಕೊಳ್ಳಲಾಗಲಿಲ್ಲ. ಈ ವಿಡಿಯೊ ಕೂಡ ವೈರಲ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT