ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಚಾಲ್‌ ಮಿಂಚಿನಾಟ; ಗುಜರಾತ್‌ಗೆ ಗೆಲುವು

ರಣಜಿ ಕ್ರಿಕೆಟ್ ಟೂರ್ನಿ: ರೈಲ್ವೇಸ್‌ ವಿರುದ್ಧ ಮುಂಬೈ ತಂಡದ ಆದಿತ್ಯ ತಾರೆ ಅಜೇಯ ಶತಕ
Last Updated 4 ನವೆಂಬರ್ 2018, 19:06 IST
ಅಕ್ಷರ ಗಾತ್ರ

ವಡೋದರ: ನಾಯಕ ಪ್ರಿಯಾಂಕ್ ಪಾಂಚಾಲ್ ಅಜೇಯ ಶತಕ ಗಳಿಸಿ ಮಿಂಚಿದರು. ಇದರ ಪರಿಣಾಮ ಗುಜರಾತ್ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ಗಳಿಸಿತು.

ಇಲ್ಲಿನ ಮೋತಿಬಾಗ್ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ‍ಪಂದ್ಯದಲ್ಲಿ ಈ ತಂಡ ಬರೋಡವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತು. ಎರಡನೇ ಇನಿಂಗ್ಸ್‌ನಲ್ಲಿ 168 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್‌ ತಂಡಕ್ಕೆ ಎಸ್‌.ಬಿ.ಗೋಹೆಲ್‌ ಮತ್ತು ಪಾಂಚಾಲ್‌ (112; 132 ಎಸೆತ, 2 ಸಿಕ್ಸರ್‌, 14 ಬೌಂಡರಿ) ಉತ್ತಮ ಆರಂಭ ಒದಗಿಸಿದರು. ಗೋಹೆಲ್ ಔಟಾದ ನಂತರ ಭಾರ್ಗವ್ ಮೆರಾಯ್‌ ನಾಯಕನಿಗೆ ಉತ್ತಮ ಸಹಕಾರ ನೀಡಿದರು.

ಎಲೀಟ್‌ ’ಎ’ ವಿಭಾಗದ ‍ಪಂದ್ಯಗಳ ಸಂಕ್ಷಿಪ್ತ ಸ್ಕೋರು: ಬರೋಡ: 290 ಮತ್ತು 179; ಗುಜರಾತ್‌: 302 ಮತ್ತು 1 ವಿಕೆಟ್‌ಗೆ 168 (ಗೋಹೆಲ್‌ 22, ಪಾಂಚಾಲ್‌ ಅಜೇಯ 112, ಭಾರ್ಗವ್ ಅಜೇಯ 33). ಫಲಿತಾಂಶ: ಗುಜರಾತ್‌ಗೆ 9 ವಿಕೆಟ್‌ಗಳ ಜಯ. ಮಹಾರಾಷ್ಟ್ರ: 343; ವಿದರ್ಭ: 120 ಮತ್ತು 8ಕ್ಕೆ 501(ಫಾಲೊ ಆನ್‌) (ಫಜಲ್‌ 131, ವಾಡ್ಕರ್‌ 122, ಸರ್ವಟೆ 60; ಸಕ್ಲೇಚಾ 93ಕ್ಕೆ2, ಫಲಾಹ್‌ 84ಕ್ಕೆ2, ಬಚಾವ್‌ 109ಕ್ಕೆ3). ಫಲಿತಾಂಶ: ಪಂದ್ಯ ಡ್ರಾ.

ಮುಂಬೈ: 411; ರೈಲ್ವೇಸ್‌: 307; ಮುಂಬೈ, ಎರಡನೇ ಇನಿಂಗ್ಸ್‌: 5ಕ್ಕೆ 321 (ಸಿದ್ದೇಶ್ ಲಾಡ್‌ 76, ಆದಿತ್ಯ ತಾರೆ ಅಜೇಯ 100, ದುಬೆ ಅಜೇಯ 69; ಹರ್ಷ ತ್ಯಾಗಿ 86ಕ್ಕೆ3). ಫಲಿತಾಂಶ: ಪಂದ್ಯ ಡ್ರಾ. ಸೌರಾಷ್ಟ್ರ: 475; ಛತ್ತೀಸಗಡ: 355; ಸೌರಾಷ್ಟ್ರ, ಎರಡನೇ ಇನಿಂಗ್ಸ್‌: 5ಕ್ಕೆ 178 (ಶೆಲ್ಡನ್ ಜಾಕ್ಸನ್‌ ಅಜೇಯ 52; ಸಾಹಿಲ್ ಗುಪ್ತಾ 69ಕ್ಕೆ4). ಫಲಿತಾಂಶ: ಪಂದ್ಯ ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT