ಶುಕ್ರವಾರ, ಮೇ 14, 2021
25 °C
ಕೆಎಸ್‌ಸಿಎ ಧಾರವಾಡ ವಲಯದ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿ

ಪರೀಕ್ಷಿತ್‌ ಶತಕ; ಎಸ್‌ಡಿಎಂ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಭರವಸೆಯ ಬ್ಯಾಟ್ಸ್‌ಮನ್‌ ಪರೀಕ್ಷಿತ್‌ ಒಕ್ಕುಂದ (ಅಜೇಯ 131) ಶತಕದ ಬಲದಿಂದ ಧಾರವಾಡದ ಎಸ್‌ಡಿಎಂ ‘ಎ’ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಧಾರವಾಡ ವಲಯ ಆಯೋಜಿಸಿರುವ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಆರು ವಿಕೆಟ್‌ಗಳ ಗೆಲುವು ದಾಖಲಿಸಿತು.

ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಎ’ ತಂಡ 47.4 ಓವರ್‌ಗಳಲ್ಲಿ 222 ರನ್‌ ಗಳಿಸಿತು. ಪುನೀತ್ ದಿಕ್ಷೀತ್‌ (44) ಹಾಗೂ ಸಮರ್ಥ್‌ ಮಾನೆ (42) ಬ್ಯಾಟಿಂಗ್‌ ಇದಕ್ಕೆ ಕಾರಣವಾಯಿತು. ಅಷ್ಟೇನು ಸವಾಲು ಅಲ್ಲದ ಗುರಿಯನ್ನು ಎದುರಾಳಿ ಎಸ್‌ಡಿಎಂ 43 ಓವರ್‌ಗಳಲ್ಲಿ ಮುಟ್ಟಿತು.

ನಗರದ ರೈಲ್ವೆ ಇನ್‌ಸ್ಟಿಟ್ಯೂಟ್‌ ಆಫ್‌ ಸೌತ್‌ ಮೈದಾನದಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ (ಎಚ್‌ಎಸ್‌ಸಿ) ‘ಎ’ ತಂಡ ಎಂಟು ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು. ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ‘ಬಿ’ ತಂಡ ಮೊದಲು ಬ್ಯಾಟ್‌ ಮಾಡಿ 24.1 ಓವರ್‌ಗಳಲ್ಲಿ 92 ರನ್‌ ಗಳಿಸಿತು. ಎದುರಾಳಿ ಎಚ್‌ಎಸ್‌ಸಿ 13 ಓವರ್‌ಗಳಲ್ಲಿ ಗುರಿ ತಲುಪಿತು.

ಬೆಳಗಾವಿಯಲ್ಲಿ ನಡೆದ ಪಂದ್ಯದಲ್ಲಿ ಧಾರವಾಡದ ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ (ಸಿಸಿಕೆ) ‘ಎ’ ತಂಡ ಬೆಳಗಾವಿಯ ಆನಂದ ಕ್ರಿಕೆಟ್‌ ಕೋಚಿಂಗ್‌ ಅಕಾಡೆಮಿ ‘ಎ’ ವಿರುದ್ಧ 48 ರನ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ್ದ ಸಿಸಿಕೆ 49.4 ಓವರ್‌ಗಳಲ್ಲಿ 283 ರನ್‌ ಕಲೆಹಾಕಿತು. ಬೆಳಗಾವಿಯ ತಂಡ 48.5 ಓವರ್‌ಗಳಲ್ಲಿ 235 ರನ್‌ ಗಳಿಸಿ ಆಲೌಟ್‌ ಆಯಿತು.

ಇನ್ನಷ್ಟು ಪಂದ್ಯಗಳಲ್ಲಿ ಬೆಳಗಾವಿಯ ಪೋತದಾರ್ ಸಿಸಿಐ ತಂಡ ಹುಬ್ಬಳ್ಳಿ ಸ್ಪೋರ್ಟ್ಸ್ ಅಕಾಡೆಮಿ ‘ಬಿ’ ತಂಡದ ಮೇಲೆ ಒಂಬತ್ತು ವಿಕೆಟ್‌ಗಳಿಂದ ಮತ್ತು ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಎ’ ತಂಡ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ‘ಬಿ’ ತಂಡದ ವಿರುದ್ಧ 69 ರನ್‌ಗಳಿಂದ ಜಯಭೇರಿ ಮೊಳಗಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು