ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಸಾಂಕ ಶತಕ: ಇಂಗ್ಲೆಂಡ್ ವಿರುದ್ಧ ಲಂಕಾಗೆ ಐತಿಹಾಸಿಕ ಜಯ

Published : 9 ಸೆಪ್ಟೆಂಬರ್ 2024, 17:24 IST
Last Updated : 9 ಸೆಪ್ಟೆಂಬರ್ 2024, 17:24 IST
ಫಾಲೋ ಮಾಡಿ
Comments

ಲಂಡನ್: ಪಥುಮ್ ನಿಸಾಂಕ ಅವರ ಅಜೇಯ ಶತಕದ ಬಲದಿಂದ ಶ್ರೀಲಂಕಾ ತಂಡವು  ದ ಓವಲ್‌ನಲ್ಲಿ ಸೋಮವಾರ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿತು. 

ಶ್ರೀಲಂಕಾ ತಂಡಕ್ಕೆ ಆತಿಥೇಯ ಇಂಗ್ಲೆಂಡ್ ತಂಡವು 219 ರನ್‌ಗಳ ಗುರಿಯೊಡ್ಡಿತ್ತು. ನಿಸಾಂಕ (ಔಟಾಗದೆ 127, 124ಎ)  ಅವರ ಆಟದ ಬಲದಿಂದ ತಂಡವು 40.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 219 ರನ್‌ ಗಳಿಸಿತು. ನಿಸಾಂಕ 13 ಬೌಂಡರಿ ಮತ್ತು 2 ಸಿಕ್ಸರ್ ಗಳಿಸಿದರು. 

ಇಂಗ್ಲೆಂಡ್‌ ನೆಲದಲ್ಲಿ ಶ್ರೀಲಂಕಾ ತಂಡವು ಗೆದ್ದ ನಾಲ್ಕನೇ ಟೆಸ್ಟ್ ಇದಾಗಿದೆ. 2014ರಲ್ಲಿ ಹೆಡಿಂಗ್ಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಲಂಕಾ ತಂಡವು ಜಯಿಸಿತ್ತು. ಅದರ ನಂತರ ಈಗ ಜಯದ ಸಾಧನೆ ಮಾಡಿದೆ. 

ಈ ಸರಣಿಯಲ್ಲಿ ಇಂಗ್ಲೆಂಡ್ ಮೊದಲೆರಡು ಪಂದ್ಯಗಳನ್ನು ಜಯಿಸಿದೆ. 

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಇಂಗ್ಲೆಂಡ್: 69.1 ಓವರ್‌ಗಳಲ್ಲಿ 325. ಶ್ರೀಲಂಕಾ: 263

ಎರಡನೇ ಇನಿಂಗ್ಸ್: ಇಂಗ್ಲೆಂಡ್: 156. ಶ್ರೀಲಂಕಾ: 40.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 219 (ಪಥುಮ್ ನಿಸಾಂಕ ಔಟಾಗದೆ 127, ಕುಶಾಲ ಮೆಂಡಿಸ್ 39, ಏಂಜೆಲೊ ಮ್ಯಾಥ್ಯೂಸ್ ಔಟಾಗದೆ 32, ಕ್ರಿಸ್ ವೋಕ್ಸ್ 52ಕ್ಕೆ1, ಗಸ್ ಅಟ್ಕಿನ್ಸನ್ 44ಕ್ಕೆ1) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT