ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಿನ್ನೆ (ಮೇ 10) ನಡೆದ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೇ ಎಸೆತದಲ್ಲಿ ರೋಚಕ ಗೆಲುವು ದಾಖಲಿಸಿದೆ. ಗೆಲುವಿನ ಬಳಿಕ ಮಾತನಾಡಿದ ನಾಯಕ ರಜತ್ ಪಾಟಿದಾರ್, ‘ಸೋಲಿನಿಂದ ಪಾರಾಗಿರುವುದು ನಮ್ಮ ಅದೃಷ್ಟ’ ಎಂದಿದ್ದಾರೆ.

ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 167 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡವು ಪವರ್ಪ್ಲೇ ಒಳಗೆ 39/3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೃನಾಲ್ ಪಾಂಡ್ಯ ಅವರ ಏಕಾಂಗಿ ಹೋರಾಟದ ನೆರವಿನಿಂದಾಗಿ ಸೋಲಿನ ಅಂಚಿನಲ್ಲಿದ್ದ ಪಂದ್ಯವನ್ನು ಆರ್ಸಿಬಿ ಗೆದ್ದುಕೊಂಡಿತು.

ತಂಡದ ಗೆಲುವಿನ ಕುರಿತು ಮಾತನಾಡಿದ ರಜತ್ ಪಾಟಿದಾರ್, ‘ನಮ್ಮದು ಉತ್ತಮ ಬ್ಯಾಟಿಂಗ್ ಲೈನ್ಅಪ್ ಹೊಂದಿರುವ ತಂಡ. ಹಾಗಾಗಿ ಈ ಗುರಿಯನ್ನು ನಾವು ಸುಲಭವಾಗಿ ಮುಟ್ಟಬೇಕಿತ್ತು. ಆದರೆ, ಕಷ್ಟಪಟ್ಟು ಕೊನೆಯ ಎಸೆತದವರೆಗೂ ಪಂದ್ಯವನ್ನು ತೆಗೆದುಕೊಂಡು ಹೋಗಿರುವುದರಿಂದ, ನಾವು ಈ ಪಂದ್ಯವನ್ನು ಗೆಲ್ಲಲು ಅರ್ಹರು ಎಂದು ನಾನು ಭಾವಿಸುವುದಿಲ್ಲ’ ಎಂದಿದ್ದಾರೆ.

ಸುಲಭ ಗುರಿ ಬೆನ್ನಟ್ಟುವಾಗ ಸಂಕಷ್ಟದಲ್ಲಿದ್ದ ತಂಡಕ್ಕೆ ಕೃನಾಲ್ ಪಾಂಡ್ಯ ನೆರವಾದರು. ಅವರು, 46 ಎಸೆತಗಳಲ್ಲಿ 73 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

‘ಇದು ಹೋರಾಟದಿಂದ ಕೂಡಿದ ಪಂದ್ಯವಾಗಿತ್ತು. ಎರಡೂ ತಂಡದಿಂದಲೂ ಉತ್ತಮ ಆಟ ಮೂಡಿ ಬಂದಿದೆ ಎಂದು ನಾನು ಭಾವಿಸುತ್ತೇನೆ. ವಿಶೇಷವಾಗಿ ಕೃನಾಲ್ ಪಾಂಡ್ಯ ತಂಡಕ್ಕಾಗಿ ಹೋರಾಡಿದರು’ಎಂದರು.

ಪ್ರಮುಖ 3 ವಿಕೆಟ್ಗಳು ಉರುಳಿದ ಬಳಿಕ ‘ಕೃನಾಲ್ ಪಾಂಡ್ಯರನ್ನು ಮೈದಾನಕ್ಕೆ ಇಳಿಸುವುದು ನಮ್ಮ ತಂತ್ರದ ಭಾಗವಾಗಿತ್ತು. ಆ ಕುರಿತು ತಂಡದ ಒಳಗೆ ಚರ್ಚೆ ಕೂಡ ನಡೆಸಿದ್ದೆವು. ಆ ತಂತ್ರ ಫಲ ನೀಡಿತು. ಅವರು ಹೇಗೆ ಆಡಿದರು ಎಂಬುದು ನಮಗೆಲ್ಲ ತಿಳಿದಿದೆ’ ಎಂದರು.

ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ಬಳಿಕ ಆರ್ಸಿಬಿ ತಂಡವು ಆಡಿರುವ 11 ಪಂದ್ಯಗಳಲ್ಲಿ 7 ಗೆಲುವು ಹಾಗೂ 4 ಸೋಲುಗಳೊಂದಿಗೆ ಐಪಿಎಲ್ 2026ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

‘ನಾವು ಪಾಯಿಂಟ್ಸ್ ಟೇಬಲ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಗೆಲುವು ಮಾತ್ರ ನಮ್ಮ ಮಂತ್ರವಾಗಿರಬೇಕು. ಟೇಬಲ್ ನೋಡುವುದಕ್ಕಿಂತ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವುದು ಮುಖ್ಯ. ಬೌಲರ್ಗಳು ಅದ್ಭುತವಾಗಿ ಕೆಲಸ ನಿರ್ವಹಿಸಿದರು. 167 ರನ್ಗಳ ಗುರಿಯನ್ನು ನಾವು ಸುಲಭವಾಗಿ ಬೆನ್ನಟ್ಟಬಹುದಾಗಿತ್ತು. ಆದರೆ, ಸುಲಭದ ಗುರಿ ಬೆನ್ನಟ್ಟಲು ಪರದಾಡಿರುವುದರಿಂದ ನಾವು ಈ ಪಂದ್ಯವನ್ನು ಗೆಲ್ಲಲು ಅರ್ಹರಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಪಾಟಿದಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.