ಗುರುವಾರ , ಜನವರಿ 23, 2020
22 °C

ಹೊಗೆ: ಸಿಡ್ಲ್‌ ಉಸಿರಾಟಕ್ಕೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಕಾಡ್ಗಿಚ್ಚಿನಿಂದ ಕಂಗೆಟ್ಟಿರುವ ಕ್ಯಾನ್‌ಬೆರಾದಲ್ಲಿ ಉಂಟಾದ ದಟ್ಟ ಹೊಗೆಯಿಂದ ಆಸ್ಟ್ರೇಲಿಯಾದ ಅನುಭವಿ ಬೌಲರ್ ಪೀಟರ್ ಸಿಡ್ಲ್‌ ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬಿಗ್ ಬ್ಯಾಷ್ ಲೀಗ್‌ನ ಸಿಡ್ನಿ ಥಂಡರ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್‌ ನಡುವಿನ ಪಂದ್ಯ ಶನಿವಾರ ಇಲ್ಲಿ ನಡೆದಿತ್ತು. 162 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಥಂಡರ್ ಒಂದು ವಿಕೆಟ್‌ಗೆ 40 ರನ್ ಗಳಿಸಿದ್ದಾಗ ಕ್ರೀಡಾಂಗಣದಲ್ಲಿ ದಟ್ಟ ಹೊಗೆ ಆವರಿಸಿತು. ಹೀಗಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಈ ಸಂದರ್ಭದಲ್ಲಿ ಪೀಟರ್‌ಗೆ ಉಸಿರಾಡಲು ತೊಂದರೆಯಾಯಿತು.

‘ಕೆಲವು ಆಟಗಾರರು ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಅವರು ಹೆಚ್ಚು ಹೊತ್ತು ಹೊರಗೆ ನಿಲ್ಲದ ಕಾರಣ ಸಮಸ್ಯೆ ಗಂಭೀರ ಆಗಲಿಲ್ಲ‌. ತೀವ್ರ ತೊಂದರೆಗೆ ಒಳಗಾಗಿದ್ದ ಪೀಟರ್‌ಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ’ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು