ಚುಟುಕು ಕ್ರಿಕೆಟ್‌ನಲ್ಲಿ ಫಿಂಚ್ ದಾಖಲೆ

7

ಚುಟುಕು ಕ್ರಿಕೆಟ್‌ನಲ್ಲಿ ಫಿಂಚ್ ದಾಖಲೆ

Published:
Updated:
ಆ್ಯರನ್ ಫಿಂಚ್ ಎಎಫ್‌ಪಿ ಚಿತ್ರ

ಹರಾರೆ : ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ (172; 76ಎ, 16ಬೌಂ, 10ಸಿ)  ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ವಿಶ್ವದಾಖಲೆ ಬರೆದರು.

ಇಲ್ಲಿ ನಡೆಯುತ್ತಿರುವ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ  ಜಿಂಬಾಬ್ವೆ ಎದುರು ನಡೆದ ಪಂದ್ಯದಲ್ಲಿ  ಫಿಂಚ್ ಅಬ್ಬರದ ಶತಕದ ನೆರವಿನಿಂದ ಆಸ್ಟ್ರೇಲಿಯಾ 100 ರನ್‌ಗಳಿಂದ ಜಯಿಸಿತು.

ಫಿಂಚ್ 2013ರಲ್ಲಿ ಇಂಗ್ಲೆಂಡ್ ವಿರುದ್ಧ 156 ರನ್‌ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಅದನ್ನು ಫಿಂಚ್ ಉತ್ತಮಪಡಿಸಿಕೊಂಡರು. ಅವರ ಸಹ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್ (145 ರನ್), ಎವಿನ್ ಲೂಯಿಸ್ (125 ರನ್), ಆಸ್ಟ್ರೇಲಿಯಾದ ಶೇನ್ ವಾಟ್ಸನ್ (124 ರನ್) ಅವರು ನಂತರದ ಸ್ಥಾನದಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು

ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 229 (ಆ್ಯರನ್ ಫಿಂಚ್ 172, ಡಿ ಕಾರ್ಟಿ ಶಾರ್ಟ್ 46, ಮುಜರಬಾನಿ 38ಕ್ಕೆ2)

ಜಿಂಬಾಬ್ವೆ: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 129 (ಚಿಬಾಬಾ 18, ಮೈರ್ 28, ಮಸಕಾಜ 12, ಮೂರ್ 19, ರಿಚರ್ಡ್ಸನ್ 23ಕ್ಕೆ1, ಸ್ಟಾನ್‌ಲೇಕ್ 39ಕ್ಕೆ1, ಗ್ಲೆನ್ ಮ್ಯಾಕ್ಸ್‌ವೆಲ್ 7ಕ್ಕೆ1. ಮಾರ್ಕಸ್‌ ಸ್ಟೋಯಿನಿಸ್ 11ಕ್ಕೆ1)

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 100 ರನ್‌ಗಳ ಜಯ.

 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !