ಶನಿವಾರ, ಸೆಪ್ಟೆಂಬರ್ 19, 2020
23 °C

ಐಪಿಎಲ್‌: ಆಟಗಾರರಿಗೆ ಐದು ದಿನಕ್ಕೊಮ್ಮೆ ಆರೋಗ್ಯ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹೇಂದ್ರಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಐಪಿಎಲ್‌ನಲ್ಲಿ ಆಟಗಾರರಿಗೆ ಐದು ದಿನಕ್ಕೊಮ್ಮೆ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಗುವುದು.

ಬಿಸಿಸಿಐ ಸಿದ್ಧಗೊಳಿಸಿರುವ ಕೊರೊನಾ ಸೋಂಕು ತಡೆ ಮಾರ್ಗಸೂಚಿಯಲ್ಲಿ ಈ ನಿಯಮವಿದೆ. ಇದು ಆಟಗಾರರು ಮತ್ತು ನೆರವು ಸಿಬ್ಬಂದಿಗೆ ಅನ್ವಯವಾಗುತ್ತದೆ. 

ಟೂರ್ನಿಗೆ ಆರಂಭಕ್ಕೂ ಮುನ್ನದ 14 ದಿನಗಳ ಕ್ವಾರಂಟೈನ್‌ಗೆ ಹೋಗುವ ಒಂದು ವಾರ ಮುನ್ನ ಆರ್.ಟಿ. ಪಿಸಿಆರ್. ಪರೀಕ್ಷೆಗೆ ಒಳಪಡುವುದು ಕಡ್ಡಾಯ. ಯಾರಾದರೂ ಆಟಗಾರಿಗೆ ಸೋಂಕು ಖಚಿತಪಟ್ಟರೆ, 14 ದಿನಗಳ ಪ್ರತ್ಯೇಕವಾಸಕ್ಕೆ ತೆರಳಬೇಕಾಗುವುದು ಎಂದು ಮೂಲಗಳು ತಿಳಿಸಿವೆ.

’ಯುಎಇಗೆ ಬಂದಿಳಿದ ಮೇಲೆ  ಆಟಗಾರರು ಮತ್ತು ಸಿಬ್ಬಂದಿಯು ಕನಿಷ್ಠ ಮೂರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವಾರದ ಕ್ವಾರಂಟೈನ್ ನಂತರ ಜೀವ ಸುರಕ್ಷಾ ವಾತಾವರಣದಲ್ಲಿ ಅಭ್ಯಾಸಕ್ಕೆ ತೆರಳಲು ಅವಕಾಶ ಪಡೆಯುತ್ತಾರೆ‘ ಎಂದು ಮೂಲಗಳು ತಿಳಿಸಿವೆ.

’ವಿದೇಶದಿಂದ ಬರುವ ಆಟಗಾರರು , ಸಿಬ್ಬಂದಿ ಕೂಡ ಈ ಪರೀಕ್ಷೆಗಳಿಗೆ ಒಳಪಡುವುದು ಕಡ್ಡಾಯ. ಅವರ ದೇಶದಲ್ಲಿಯೇ ಮೊದಲು ಟೆಸ್ಟ್ ಮಾಡಿಕೊಳ್ಳಬೇಕು. ಅಲ್ಲಿ ಅವರಿಗೆ ಸೋಂಕು ಇಲ್ಲದಿರುವುದು ಖಚಿತವಾದರೆ ಮಾತ್ರ ಯುಎಇಗೆ ಬರಬೇಕು‘ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು