ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಿಲ್‌ ಆ್ಯಂಬ್ರಿಸ್‌ ಶತಕದ ಮಿಂಚು

ಮಂಡಳಿ ಅಧ್ಯಕ್ಷರ ಇಲೆವನ್‌–ವಿಂಡೀಸ್‌ ನಡುವಣ ಅಭ್ಯಾಸ ಪಂದ್ಯ ಡ್ರಾ
Last Updated 30 ಸೆಪ್ಟೆಂಬರ್ 2018, 15:35 IST
ಅಕ್ಷರ ಗಾತ್ರ

ವಡೋದರ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸುನಿಲ್‌ ಆ್ಯಂಬ್ರಿಸ್‌ (ಔಟಾಗದೆ 114; 98ಎ, 17ಬೌಂ, 5ಸಿ) ಭಾನುವಾರ ರಿಲಯನ್ಸ್‌ ಕ್ರೀಡಾಂಗಣದಲ್ಲಿ ಅಬ್ಬರಿಸಿದರು.

ಅವರ ಅಮೋಘ ಶತಕದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಬಿಸಿಸಿಐ ಮಂಡಳಿ ಅಧ್ಯಕ್ಷರ ಇಲೆವನ್‌ ಎದುರಿನ ಎರಡು ದಿನಗಳ ಏಕೈಕ ಅಭ್ಯಾಸ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

ಶನಿವಾರ 90 ಓವರ್‌ಗಳನ್ನು ಆಡಿದ್ದ ಮಂಡಳಿ ಅಧ್ಯಕ್ಷರ ಇಲೆವನ್‌ 6 ವಿಕೆಟ್‌ಗೆ 360ರನ್‌ ದಾಖಲಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಜೇಸನ್‌ ಹೋಲ್ಡರ್‌ ಬಳಗ 89 ಓವರ್‌ಗಳಲ್ಲಿ 7 ವಿಕೆಟ್‌ಗೆ 366ರನ್‌ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ ಮುಂಬರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಸಾರಥ್ಯದ ಭಾರತ ತಂಡಕ್ಕೆ ಪ್ರಬಲ ಪೈಪೋಟಿ ನೀಡುವ ಸಂದೇಶ ರವಾನಿಸಿದೆ.

ಬ್ಯಾಟಿಂಗ್‌ ಮಾಡಿದ ಕೆರಿಬಿಯನ್‌ ನಾಡಿನ ತಂಡಕ್ಕೆ ಕ್ರೆಗ್‌ ಬ್ರಾಥ್‌ವೇಟ್‌ (52; 78ಎ, 9ಬೌಂ) ಮತ್ತು ಕೀರನ್‌ ಪೋವೆಲ್‌ (44;102ಎ, 2ಬೌಂ, 2ಸಿ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ಆಡಿದ ಇವರು ಸ್ವಯಂ ನಿವೃತ್ತಿ ಪಡೆದರು.

ನಂತರ ಬಂದ ಸಿಮ್ರನ್‌ ಹೆಟ್ಮೆಯರ್‌ (7) ಮತ್ತು ರಾಸ್ಟನ್‌ ಚೇಸ್‌ (5) ವಿಕೆಟ್‌ ನೀಡಲು ಅವಸರಿಸಿದರು!

ಈ ಹಂತದಲ್ಲಿ ಶೇನ್‌ ಡೌರಿಚ್‌ (65; 69ಎ, 9ಬೌಂ, 1ಸಿ) ಮತ್ತು ಆ್ಯಂಬ್ರಿಸ್‌ ಮಿಂಚಿದರು. ಭಾರತದ ಬೌಲರ್‌ಗಳನ್ನು ಕಾಡಿದ ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು. 61ನೇ ಓವರ್‌ ಬೌಲ್‌ ಮಾಡಿದ ಜಲಜ್‌ ಸಕ್ಸೇನಾ ಮೊದಲ ಎಸೆತದಲ್ಲಿ ಡೌರಿಚ್‌ ವಿಕೆಟ್‌ ಉರುಳಿಸಿದರು. ಹೀಗಿದ್ದರೂ ಆ್ಯಂಬ್ರಿಸ್‌ ಎದೆಗುಂದಲಿಲ್ಲ. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜೊತೆ ಉತ್ತಮ ಜೊತೆಯಾಟ ಆಡಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಸುನಿಲ್‌ ಅವರ ವಿಕೆಟ್‌ ಉರುಳಿಸಲು ಮಂಡಳಿ ಅಧ್ಯಕ್ಷರ ಇಲೆವನ್‌ ತಂಡದ ನಾಯಕ ಕರುಣ್‌ ನಾಯರ್‌ ಬೌಲಿಂಗ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡಿದರೂ ಪ್ರಯೋಜನವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಮಂಡಳಿ ಅಧ್ಯಕ್ಷರ ಇಲೆವನ್‌: 90 ಓವರ್‌ಗಳಲ್ಲಿ 6 ವಿಕೆಟ್‌ಗೆ 360 ಡಿಕ್ಲೇರ್ಡ್‌.

ವೆಸ್ಟ್‌ ಇಂಡೀಸ್‌: 89 ಓವರ್‌ಗಳಲ್ಲಿ 7 ವಿಕೆಟ್‌ಗೆ 366 ಡಿಕ್ಲೇರ್ಡ್‌ (ಕ್ರೆಗ್‌ ಬ್ರಾಥ್‌ವೇಟ್‌ 52, ಕೀರನ್‌ ಪೋವೆಲ್‌ 44, ಶಾಯ್‌ ಹೋಪ್‌ 36, ಶೇನ್‌ ಡೌರಿಚ್‌ 65, ಸುನಿಲ್‌ ಆ್ಯಂಬ್ರಿಸ್‌ ಔಟಾಗದೆ 114, ಜಹಮರ್‌ ಹ್ಯಾಮಿಲ್ಟನ್‌ 23; ಆವೇಶ್‌ ಖಾನ್‌ 60ಕ್ಕೆ4, ಸೌರಭ್‌ ಕುಮಾರ್‌ 126ಕ್ಕೆ2, ಜಲಜ್‌ ಸಕ್ಸೇನಾ 95ಕ್ಕೆ1).

ಫಲಿತಾಂಶ: ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT