ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಸುಲಭ ತುತ್ತಾದ ಅಫ್ಗಾನ್‌

Last Updated 27 ಮೇ 2019, 15:38 IST
ಅಕ್ಷರ ಗಾತ್ರ

ಲಂಡನ್‌: ಜೋ ರೂಟ್‌ (22ಕ್ಕೆ3) ಮತ್ತು (ಔಟಾಗದೆ 29; 37ಎ, 3ಬೌಂ) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಇಂಗ್ಲೆಂಡ್‌ ತಂಡವು ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಅಫ್ಗಾನಿಸ್ತಾನವನ್ನು ಮಣಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಅಫ್ಗಾನಿಸ್ತಾನ 38.4 ಓವರ್‌ಗಳಲ್ಲಿ 160ರನ್‌ಗಳಿಗೆ ಆಲೌಟ್‌ ಆಯಿತು.

ಮೊಹಮ್ಮದ್‌ ನಬಿ (44; 42ಎ, 1ಬೌಂ, 3ಸಿ), ನೂರ್‌ ಅಲಿ ಜದ್ರಾನ್‌ (30; 34ಎ, 5ಬೌಂ) ಮತ್ತು ದವಲತ್‌ ಜದ್ರಾನ್‌ (ಔಟಾಗದೆ 20; 17ಎ, 2ಬೌಂ, 1ಸಿ), ಜೊಫ್ರಾ ಆರ್ಚರ್‌, ಕ್ರಿಸ್‌ ವೋಕ್ಸ್‌ ಮತ್ತು ಜೋ ರೂಟ್‌ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನ ಮಾಡಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ನೀಡಲು ಅವಸರಿಸಿದ್ದರಿಂದ ದೊಡ್ಡ ಮೊತ್ತ ಕಲೆಹಾಕುವ ತಂಡದ ಕನಸು ಕೈಗೂಡಲಿಲ್ಲ.

161ರನ್‌ಗಳ ಸುಲಭ ಗುರಿಯನ್ನು ಆತಿಥೇಯ ಇಂಗ್ಲೆಂಡ್‌, 17.3 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಗುರಿ ಬೆನ್ನಟ್ಟಿದ ಆತಿಥೇಯರಿಗೆ ಜೇಸನ್‌ ರಾಯ್‌ (ಔಟಾಗದೆ 89; 46ಎ, 11ಬೌಂ, 4ಸಿ) ಮತ್ತು ಜಾನಿ ಬೇಸ್ಟೊ (39; 22ಎ, 7ಬೌಂ, 1ಸಿ) ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 44 ಎಸೆತಗಳಲ್ಲಿ 77ರನ್‌ ಕಲೆಹಾಕಿತು. ಎಂಟನೇ ಓವರ್‌ನಲ್ಲಿ ಬೇಸ್ಟೊ, ಮೊಹಮ್ಮದ್‌ ನಬಿಗೆ ವಿಕೆಟ್‌ ಒಪ್ಪಿಸಿದರು. ಬಳಿಕ ರಾಯ್‌ ಮತ್ತು ರೂಟ್‌ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಅಫ್ಗಾನಿಸ್ತಾನ: 38.4 ಓವರ್‌ಗಳಲ್ಲಿ 160 (ಹಜರತ್‌ಉಲ್ಲಾ ಜಜಾಯ್‌ 11, ನೂರ್‌ ಅಲಿ ಜದ್ರಾನ್‌ 30, ಹಸಮತ್‌ ಉಲ್ಲಾ ಶಾಹಿದಿ 19, ಗುಲ್ಬದಿನ್‌ ನೈಬ್‌ 14, ಮೊಹಮ್ಮದ್‌ ನಬಿ 44, ದವಲತ್‌ ಜದ್ರಾನ್‌ ಔಟಾಗದೆ 20; ಜೊಫ್ರಾ ಆರ್ಚರ್‌ 32ಕ್ಕೆ3, ಬೆನ್‌ ಸ್ಟೋಕ್ಸ್‌ 14ಕ್ಕೆ1, ಜೋ ರೂಟ್‌ 22ಕ್ಕೆ3, ಮೋಯಿನ್‌ ಅಲಿ 42ಕ್ಕೆ1).

ಇಂಗ್ಲೆಂಡ್‌: 17.3 ಓವರ್‌ಗಳಲ್ಲಿ 1 ವಿಕೆಟ್‌ಗೆ 161 (ಜೇಸನ್‌ ರಾಯ್‌ ಔಟಾಗದೆ 89, ಜಾನಿ ಬೇಸ್ಟೊ 39, ಜೋ ರೂಟ್‌ ಔಟಾಗದೆ 29; ಮೊಹಮ್ಮದ್‌ ನಬಿ 34ಕ್ಕೆ1).

ಫಲಿತಾಂಶ: ಇಂಗ್ಲೆಂಡ್‌ಗೆ 9 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT