ಹೈದರಾಬಾದ್: ಇಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಹೈದರಾಬಾದ್ ತಂಡವು 57 ರನ್ಗಳ ಬೃಹತ್ ಅಂತರದ ಗೆಲುವು ದಾಖಲಿಸಿತು. ಮಾತ್ರವಲ್ಲ, ರಾಜಸ್ಥಾನ ರಾಯಲ್ಸ್ ತಂಡದ ಅಜೇಯ ಓಟಕ್ಕೂ ಬ್ರೇಕ್ ಹಾಕಿತು. ಈ ಪಂದ್ಯದಲ್ಲಿ ಮಿಂಚಿದ ಯುವ ವೇಗದ ಬೌಲರ್ ಪ್ರಫುಲ್ ಹಿಂಗೆ ವಿಶೇಷ ದಾಖಲೆ ಮಾಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮ್ಮ ಚೊಚ್ಚಲ ಪಂದ್ಯ ಆಡಿದ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಪ್ರಫುಲ್ ತಾವು ಎಸೆದ ಮೊದಲ ಓವರ್ನಲ್ಲೆ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಹಾಗೂ ಲುವಾನ್-ಡ್ರೆ ಪ್ರಿಟೋರಿಯಸ್ ಅವರ ವಿಕೆಟ್ ಪಡೆದು ಮಿಂಚಿದರು.

ಮೊದಲ ಓವರ್ನ ಎರಡು, ನಾಲ್ಕು ಮತ್ತು ಕೊನೆಯ ಎಸೆತದಲ್ಲಿ ಮೂರು ವಿಕೆಟ್ ಪಡೆದ ಪ್ರಫುಲ್ ಅವರು ತಮ್ಮ ಕೋಟಾದ ಎರಡನೇ ಓವರ್ನ ಕೊನೆಯ ಎಸೆತದಲ್ಲಿ ರಿಯಾನ್ ಪರಾಗ್ ಅವರ ವಿಕೆಟ್ ಪಡೆದುಕೊಂಡರು. ಆ ಮೂಲಕ ಸನ್ರೈಸರ್ಸ್ ಗೆಲುವಿಗೆ ಕಾರಣರಾದರು.

ಮೊದಲ ಓವರ್ನಲ್ಲಿ 3 ವಿಕೆಟ್

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಯಾವುದೇ ಬೌಲರ್ ಕೂಡ ಇನಿಂಗ್ಸ್ ಒಂದರ ಮೊದಲ ಓವರ್ನಲ್ಲಿ 3 ವಿಕೆಟ್ ಪಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಹಿಂಗೆ ಅವರು ಈ ಸಾಧನೆ ಮಾಡಿದ್ದಾರೆ.

ಮೊದಲ ಪಂದ್ಯದಲ್ಲೆ 4 ವಿಕೆಟ್ ಪಡೆದ ಭಾರತೀಯ ಬೌಲರ್

ಇಂಡಿಯನ್ ಪ್ರೀಮಿಯರ್ ಲೀಗ್ನ ಪದಾರ್ಪಣಾ ಪಂದ್ಯದಲ್ಲಿ 4 ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಪ್ರಫುಲ್ ಹಿಂಗೆ ಹಾಗೂ ಸಾಕಿಬ್ ಹುಸೆನ್ ಸ್ಥಾನ ಪಡೆದುಕೊಂಡರು. ಇದಕ್ಕೂ ಮೊದಲು, ಶದಾಬ್ ಜಕಾತಿ ಸಿಎಸ್ಕೆ ಪರ, ಅಶ್ವನಿ ಕುಮಾರ್ ಮುಂಬೈ ಇಂಡಿಯನ್ಸ್ ಪರ ಹಾಗೂ ಪೌಲ್ ವಲ್ತಾಟಿ ಪಂಜಾಬ್ ಕಿಂಗ್ಸ್ ಪರ ಈ ಸಾಧನೆ ಮಾಡಿದ್ದರು. ನಿನ್ನೆ (ಏಪ್ರಿಲ್ 13) ಪಂದ್ಯದ ಮೂಲಕ ಪ್ರಫುಲ್ ಹಿಂಗೆ ಹಾಗೂ ಸಾಕಿಬ್ ಹುಸೇನ್ ಈ ಸಾಧನೆ ಮಾಡಿದ್ದಾರೆ.
.ವೈಭವ್ ಸೇರಿ ರಾಜಸ್ಥಾನದ ಪ್ರಮುಖ ಬ್ಯಾಟರ್ಗಳಿಗೆ ಖೆಡ್ಡಾ ತೋಡಿದ ಪ್ರಫುಲ್ ಯಾರು?.IPL Stats: ಹಿಂಗೆ-ಸಾಕಿಬ್ ಬೌಲಿಂಗ್ ಮೋಡಿ, ರಾಜಸ್ಥಾನದ ಗೆಲುವಿನ ಓಟಕ್ಕೆ ಬ್ರೇಕ್.
ಒಂದೇ ಇನಿಂಗ್ಸ್ನಲ್ಲಿ ಎರಡು ನಾಲ್ಕು ವಿಕೆಟ್ ಗೊಂಚಲು

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್ನಲ್ಲಿ ಇಬ್ಬರು ಬೌಲರ್ಗಳು ನಾಲ್ಕು ವಿಕೆಟ್ ಪಡೆದಿರುವುದು ಇದು ನಾಲ್ಕನೇ ಬಾರಿ. ಇದಕ್ಕೂ ಮೊದಲು ಮುನಾಫ್ ಪಟೇಲ್ ಹಾಗೂ ಕಿರಾನ್ ಪೊಲಾರ್ಡ್ ಮುಂಬೈ ಪರ, ಮಿಚೆಲ್ ಸ್ಟಾರ್ಕ್ ಹಾಗೂ ಎಸ್. ಅರವಿಂದ್ ಆರ್ಸಿಬಿ ಪರ ಮತ್ತು ಮೊಹಮ್ಮದ್ ಶಮಿ ಹಾಗೂ ಮೋಹಿತ್ ಶರ್ಮಾ ಗುಜರಾತ್ ಟೈಟಾನ್ಸ್ ಪರ ಈ ಸಾಧನೆ ಮಾಡಿದ್ದರು. ಇದೀಗ ಈ ಸಾಲಿಗೆ ಪ್ರಫುಲ್ ಹಾಗೂ ಸಾಕಿಬ್ ಹುಸೇನ್ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.