ಹೈದರಾಬಾದ್: ಇಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಹೈದರಾಬಾದ್ ತಂಡವು 57 ರನ್ಗಳ ಬೃಹತ್ ಗೆಲುವು ದಾಖಲಿಸಿತು. ಮಾತ್ರವಲ್ಲ, ರಾಜಸ್ಥಾನ ರಾಯಲ್ಸ್ ತಂಡದ ಅಜೇಯ ಓಟಕ್ಕೂ ಬ್ರೇಕ್ ಹಾಕಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 216 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವನ್ನು ಚೊಚ್ಚಲ ಪಂದ್ಯ ಆಡಿದ ಪ್ರಫುಲ್ ಹಿಂಗೆ ಅವರು ಕಾಡಿದರು. ಅವರು ತಮ್ಮ ಮೊದಲ ಓವರ್ನಲ್ಲೇ ರಾಜಸ್ಥಾನ ತಂಡದ ಪ್ರಮುಖ 3 ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟಿದರು.

ಮಾತ್ರವಲ್ಲ, ತಮ್ಮ ಕೋಟಾದ ಎರಡನೇ ಓವರ್ನಲ್ಲಿ ನಾಯಕ ರಿಯಾನ್ ಪರಾಗ್ ಅವರ ವಿಕೆಟ್ ಅನ್ನು ಕೂಡ ಪಡೆದುಕೊಂಡರು. ಪರಿಣಾಮ ರಾಜಸ್ಥಾನ ತಂಡ ಕೇವಲ 9 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಪ್ರಫುಲ್ ಅವರು 34 ರನ್ ನೀಡಿ 4 ವಿಕೆಟ್ ಪಡೆದುಕೊಂಡರು. ಅವರ ಈ ಅಮೋಘ ಪ್ರದರ್ಶನದಿಂದಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಪಡೆದುಕೊಂಡರು.

ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದ್ದ ಹೈದರಾಬಾದ್ ತಂಡಕ್ಕೆ ಬೌಲರ್ಗಳು ನೀರಸ ಪ್ರದರ್ಶನ ತೋರುತ್ತಿದ್ದರು. ಪರಿಣಾಮ ಹೈದರಾಬಾದ್ ತಂಡವು 24 ವರ್ಷದ ಯುವ ವೇಗದ ಬೌಲರ್ ಪ್ರಫುಲ್ ಹಿಂಗೆ ಅವರಿಗೆ ಆಡುವ ಬಳಗದಲ್ಲಿ ಅವಕಾಶ ನೀಡಿತು.

ಪ್ರಫುಲ್ ಹಿಂಗೆ ಅವರ ಮೊದಲ ಓವರ್ನ ಎರಡನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ, ನಾಲ್ಕನೇ ಎಸೆತದಲ್ಲಿ ಧ್ರುವ್ ಜುರೆಲ್ ಮತ್ತು ಅದೇ ಓವರ್ನ ಕೊನೆಯ ಎಸೆತದಲ್ಲಿ ಲುವಾನ್-ಡ್ರೆ ಪ್ರಿಟೋರಿಯಸ್ ಅವರ ವಿಕೆಟ್ಗಳನ್ನು ಪಡೆದರು. ಆ ಮೂಲಕ ಐಪಿಎಲ್ನಲ್ಲಿ ಕನಸಿನ ಆರಂಭವನ್ನು ಪಡೆದುಕೊಂಡರು.

ವಿದರ್ಭ ಪರ ಆಡುವ ಪ್ರಫುಲ್

ಪ್ರಫುಲ್ ಹಿಂಗೆ ಅವರು ದೇಶೀಯ ಕ್ರಿಕೆಟ್ನಲ್ಲಿ ವಿದರ್ಭ ತಂಡದ ಪರ ಆಡುತ್ತಾರೆ. ಅವರು ಇದುವರೆಗೆ 10 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು ಅದರಲ್ಲಿ 27 ವಿಕೆಟ್ ಪಡೆದಿದ್ದಾರೆ ಹಾಗೂ 6 ಲಿಸ್ಟ್ ಎ ಪಂದ್ಯಗಳಿಂದ 5 ವಿಕೆಟ್ ಪಡೆದುಕೊಂಡಿದ್ದಾರೆ. ಐಪಿಎಲ್ 2026 ಕ್ಕೂ ಮೊದಲು ಸನ್ರೈಸರ್ಸ್ ಹೈದರಾಬಾದ್ ತಂಡವು ಅವರನ್ನು ₹30 ಲಕ್ಷಕ್ಕೆ ಹೆಚ್ಚುವರಿ ವೇಗದ ಬೌಲರ್ ಆಗಿ ಆಯ್ಕೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.