ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಖರ್ ಅಮೋಘ ಶತಕ: ರಾಜ್ಯಕ್ಕೆ ಮುನ್ನಡೆ

ಕೂಚ್ ಬಿಹಾರ್ ಟ್ರೋಫಿ: ಸಂಕಷ್ಟದಲ್ಲಿ ಜಮ್ಮು ಮತ್ತು ಕಾಶ್ಮೀರ
Last Updated 4 ಡಿಸೆಂಬರ್ 2022, 13:55 IST
ಅಕ್ಷರ ಗಾತ್ರ

ಮೈಸೂರು: ಪ್ರಖರ್ ಚತುರ್ವೇದಿ ಸಿಡಿಸಿದ ಅಮೋಘ ಶತಕದ (149 ರನ್) ಬಲದಿಂದ ಕರ್ನಾಟಕ ತಂಡ ಜಮ್ಮು‌ ಮತ್ತು ಕಾಶ್ಮೀರದ ವಿರುದ್ಧ ಬೃಹತ್ ಮೊತ್ತ ಕಲೆಹಾಕಿತು.

ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ 2ನೇ ದಿನದಾಟದಲ್ಲಿ ರಾಜ್ಯ ತಂಡವು 105 ಓವರ್‌ಗಳಲ್ಲಿ 380 ರನ್ ಗಳಿಸಿ, ಮೊದಲ ಇನಿಂಗ್ಸ್‌ನಲ್ಲಿ 294 ರನ್ ಮುನ್ನಡೆ ಸಾಧಿಸಿತು.

ಅರ್ಧಶತಕ ಬಾರಿಸಿದ್ದ ಸ್ವರೂಪ್ ಎಸ್.ಹಿಪ್ಪರಗಿ (71 ರನ್) ಭಾನುವಾರ ಬೇಗನೆ ಔಟಾದರು. ನಂತರ ಪ್ರಖರ್ ಅವರಿಗೆ ಯಶೋವರ್ಧನ್ ಪ್ರತಾಪ್ (41 ರನ್) ಹಾಗೂ ಹಾರ್ಧಿಕ್ ರಾಜ್ (27 ರನ್) ನೀಡಿದ ಉತ್ತಮ ಜೊತೆಯಾಟ ಜಮ್ಮು ವಿರುದ್ಧ ಮೇಲುಗೈ ಸಾಧಿಸಲು ಕಾರಣವಾಯಿತು. ಉತ್ತಮ ಬೌಲಿಂಗ್ ದಾಳಿ ನಡೆಸಿದ ಮೌಸುಬ್ ಮೌದ್ ಭಟ್ 73ಕ್ಕೆ 6 ವಿಕೆಟ್ ಗೊಂಚಲು ಪಡೆದರು.

2ನೇ ಇನ್ನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ 39ಕ್ಕೆ 2 ಎರಡು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆಗ ತಂಡಕ್ಕೆ ಆರ್ಯ ಠಾಕೂರ್ (43), ಅನರ್ವ ಗುಪ್ತಾ ( 29 ಬ್ಯಾಟಿಂಗ್) ಆಸರೆಯಾದರು. ದಿನದಾಟದ ಅಂತ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ತಂಡ 23 ಓವರ್ ಗಳಲ್ಲಿ 3ಕ್ಕೆ 84 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಜಮ್ಮು ಮತ್ತು ಕಾಶ್ಮೀರ ಮೊದಲ ಇನಿಂಗ್ಸ್: 86 ಮೊಹಸಿನ್‌ ಖಾನ್‌ 41ಕ್ಕೆ 4, ಆದಿತ್ಯ ನಾಯರ್ 7ಕ್ಕೆ 2), ಕೆಎಸ್‌ಸಿಎ: 105 ಓವರ್‌ಗಳಲ್ಲಿ 380 (ಪ್ರಖರ್ ಚತುರ್ವೇದಿ 149, ಸ್ವರೂಪ್‌ ಎಸ್‌. ಹಿ‍ಪ್ಪರಗಿ 71, ಮೌಸುಬ್ ಮೌದ್ ಭಟ್ 73ಕ್ಕೆ 6.
ಜಮ್ಮು ಮತ್ತು ಕಾಶ್ಮೀರ 2ನೇ ಇನಿಂಗ್ಸ್: 3ಕ್ಕೆ‌ 84 (ಆರ್ಯ ಠಾಕೂರ್ 42, ಹಾರ್ಧಿಕ್ ರಾಜ್ 5ಕ್ಕೆ 1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT