ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿಕರಗ ಮಂಟಪ ಉದ್ಘಾಟನೆ

Last Updated 28 ಮಾರ್ಚ್ 2018, 20:08 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕದ ಕೆರೆ ಅಂಗಳದಲ್ಲಿ ನಿರ್ಮಿಸಿರುವ ಮಹೇಶ್ವರಮ್ಮ ದೇವಸ್ಥಾನದ ಹಸಿಕರಗ ಮಂಟಪ ಉದ್ಘಾಟನೆ ಹಾಗೂ ಕುಂಭಾಭಿಷೇಕ ಸಮಾರಂಭ ಜರುಗಿತು.

ಬಿಬಿಎಂಪಿ ಅನುದಾನದಲ್ಲಿ ಕೆರೆಯ ಪ್ರವೇಶದ್ವಾರದಲ್ಲಿ ₹1.16 ಕೋಟಿ ವೆಚ್ಚದಲ್ಲಿ ಕಲ್ಯಾಣಿಯಲ್ಲಿ ನಿರ್ಮಿಸಿರುವ ಈ ಕರಗಮಂಟಪದ ಸುತ್ತಲೂ ಮಹಾ
ಭಾರತದ ಕಥೆ ಸಾರುವ 40 ವಿಗ್ರಹಗಳನ್ನು ಕೆತ್ತನೆ ಮಾಡಲಾಗಿದೆ. ಮಂಟಪದ ಮೇಲೆ 16 ಅಡಿ ಎತ್ತರದ ರಾಜಗೋಪುರ ನಿರ್ಮಿಸಲಾಗಿದೆ. ಇದರ ಶಿಲ್ಪಿಗಳು ಮುನಿಸ್ವಾಮಿ ಮತ್ತು ಮುರುಗೇಶ್ ತಂಡದವರು.

100x135 ಅಡಿ ವಿಸ್ತೀರ್ಣದಲ್ಲಿ ಕರಗ ಮಂಟಪ ಹಾಗೂ ಉಳಿದ ಜಾಗದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ ಎಂದು ಯಲಹಂಕ ವಹ್ನಿಕುಲ ಕ್ಷತ್ರಿಯ ಮಂಡಳಿಯ ಸಂಚಾಲಕ ಮು.ಕೃಷ್ಣಮೂರ್ತಿ ತಿಳಿಸಿದರು.

‘ಯಲಹಂಕದಲ್ಲಿ ಪುರಾತನ ಕಾಲದಿಂದ ಐತಿಹಾಸಿಕ ಮಹೇಶ್ವರಮ್ಮನವರ ಕರಗ ಮಹೋತ್ಸವ ನಡೆದುಕೊಂಡುಬಂದಿದೆ. ಕರಗಮಂಟಪದ ನಿರ್ಮಾಣದಿಂದ ಕರಗಮ ಹೋತ್ಸವಕ್ಕೆ ಮತ್ತಷ್ಟು ಮೆರುಗು ಬರಲಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ದ್ರೌಪದಿದೇವಿ ಆದಿಪರಾಶಕ್ತಿ ಮಹಾಸಂಸ್ಥಾನದ ಸಾಯಿಮಂಜುನಾಥ್ ಮಹಾರಾಜ್, ‘ಕರಗಮಂಟಪ ಯಲಹಂಕ ನಗರಕ್ಕೆ ಮುಕುಟಪ್ರಾಯದಂತಿದೆ. ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಲಿದೆ’ ಎಂದು ತಿಳಿಸಿದರು.

ಶಾಸಕರಾದ ಎಸ್.ಆರ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್, ಬಿಬಿಎಂಪಿ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ, ಪದ್ಮಾವತಿ ಅಮರನಾಥ್, ಗುಣಶೇಖರ್, ಯಲಹಂಕ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅ.ಬ. ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT