ಕ್ಯಾಪ್ಟನ್ ತಿಮ್ಮಪ್ಪಯ್ಯ ಕಪ್‌: ಅಲ್ಪ ಮೊತ್ತಕ್ಕೆ ಕುಸಿದ ಅಧ್ಯಕ್ಷರ ಇಲೆವನ್‌

7

ಕ್ಯಾಪ್ಟನ್ ತಿಮ್ಮಪ್ಪಯ್ಯ ಕಪ್‌: ಅಲ್ಪ ಮೊತ್ತಕ್ಕೆ ಕುಸಿದ ಅಧ್ಯಕ್ಷರ ಇಲೆವನ್‌

Published:
Updated:

ಬೆಂಗಳೂರು: ಸೌರಭ್‌ ಕುಮಾರ್‌ (39ಕ್ಕೆ4) ಮತ್ತು ಶುಭಂ ಮಾವಿ (23ಕ್ಕೆ2) ದಾಳಿಗೆ ಬೆದರಿದ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ ತಂಡದವರು ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಉತ್ತರ ಪ್ರದೇಶ ಸಂಸ್ಥೆ ಎದುರಿನ ಸೆಮಿಫೈನಲ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದ್ದಾರೆ.

ಜಸ್ಟ್‌ ಕ್ರಿಕೆಟ್‌ ಮೈದಾನದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ಅಧ್ಯಕ್ಷರ ಇಲೆವನ್‌ 45.3 ಓವರ್‌ಗಳಲ್ಲಿ 135ರನ್‌ಗಳಿಗೆ ಆಲೌಟ್‌ ಆಯಿತು. ಕೆ.ವಿ.ಸಿದ್ದಾರ್ಥ್‌ (25) ಮತ್ತು ಜಿ.ಎಸ್‌. ಚಿರಂಜೀವಿ (21) ಎದುರಾಳಿ ತಂಡದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನ ನಡೆಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ನೀಡಲು ಅವಸರಿಸಿದರು!

ಪ್ರಥಮ ಇನಿಂಗ್ಸ್‌ ಶುರುಮಾಡಿರುವ ಉತ್ತರ ಪ್ರದೇಶ ತಂಡ ದಿನದಾಟದ ಅಂತ್ಯಕ್ಕೆ 42 ಓವರ್‌ಗಳಲ್ಲಿ 4 ವಿಕೆಟ್‌ಗೆ 143ರನ್‌ ದಾಖಲಿಸಿದೆ. ಇದರೊಂದಿಗೆ 8ರನ್‌ಗಳ ಮುನ್ನಡೆ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್‌:
ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌: ಪ್ರಥಮ ಇನಿಂಗ್ಸ್‌, 45.3 ಓವರ್‌ಗಳಲ್ಲಿ 135 (ಕೆ.ವಿ.ಸಿದ್ದಾರ್ಥ್‌ 25, ಜಿ.ಎಸ್‌.ಚಿರಂಜೀವಿ 21; ಯಶ್‌ ದಯಾಳ್‌ 34ಕ್ಕೆ2, ಶುಭಂ ಮಾವಿ 23ಕ್ಕೆ2, ಸೌರಭ್‌ ಕುಮಾರ್‌ 39ಕ್ಕೆ4, ಜೀಶನ್‌ ಅನ್ಸಾರಿ 29ಕ್ಕೆ2).

ಉತ್ತರ ಪ್ರದೇಶ ಸಂಸ್ಥೆ: 42 ಓವರ್‌ಗಳಲ್ಲಿ 4 ವಿಕೆಟ್‌ಗೆ 143 (ಶಿವಂ ಚೌಧರಿ 44, ಉಮಂಗ್‌ ಶರ್ಮಾ 34, ಆಕಾಶ್‌ದೀಪ್‌ ನಾಥ್‌ ಬ್ಯಾಟಿಂಗ್‌ 28, ರಿಂಕು ಸಿಂಗ್‌ ಬ್ಯಾಟಿಂಗ್‌ 18; ಆದಿತ್ಯ ಸೋಮಣ್ಣ 22ಕ್ಕೆ2).

ಎರಡನೆ ಸೆಮಿಫೈನಲ್‌:
ಆಲೂರಿನ ಮೂರನೆ ಮೈದಾನ: ಛತ್ತೀಸಗಡ ಕ್ರಿಕೆಟ್‌ ಸಂಘ: ಪ್ರಥಮ ಇನಿಂಗ್ಸ್‌, 70.1 ಓವರ್‌ಗಳಲ್ಲಿ 241 (ಅಮನ್‌ದೀಪ್‌ ಖರೆ 28, ಮನೋಜ್‌ ಸಿಂಗ್‌ 25, ಸುಮಿತ್‌ ರುಯಿಕರ್‌ 73, ಶಕೀಲ್‌ ಅಹ್ಮದ್‌ 40; ನಜಮನ್‌ ನೆಗ್ವಾಸ್‌ವಟ್‌ 56ಕ್ಕೆ4, ಪಾರ್ಥ ವಘಾನಿ 43ಕ್ಕೆ3, ಹಾರ್ದಿಕ್‌ ಪಟೇಲ್‌ 40ಕ್ಕೆ2).

ಗುಜರಾತ್‌ ಸಂಸ್ಥೆ: ಮೊದಲ ಇನಿಂಗ್ಸ್‌, 14 ಓವರ್‌ಗಳಲ್ಲಿ 1 ವಿಕೆಟ್‌ಗೆ 31.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !